ಹುಲಿಗಳ ಹಾದಿ೦ತು ಸೆಲಿಗೆ ಬಿಳಿಗಿರಿರಂಗ ರಕ್ಷಿತಾರಣ್ಯವು ಹುಲಿ ಸಂರಕ್ಷಿತಾರಣ್ಯವೆಂದು ಘೋಷಿತವಾದಾಗ ಕೆಲವರಿಗೆ ಸಮಸ್ಯೆಗಳು ಹೆಚ್ಚೆ, ಅನಗತ್ಯವಾದ ಮಾತು- ಟೀಕೆಗಳ ಗುರಿಯೇ ಸರಿ. ಆದರೆ ಬಿಳಿಗಿರಿರಂಗ ರಕ್ಷಿತಾರಣ್ಯದಲ್ಲಿ ಸುಮಾರು ವರ್ಷಗಳಿಂದ ಜೀವನ ನಡೆಸಿಕೊಂಡು ಬಂ ದಿರುವ ಸೋಲಿಗರ ಬಗ್ಗೆ ನೋಡಿದಾಗ, ಅವರ ವನ್ಯಸಂಸ್ಕೃತಿ ಅಥವಾ ವನ್ಯ ಸಂಪ್ರದಾಯಗಳಂತಹ ಜೀವನಶೈಲಿಯನ್ನು ಒಳಗೊಂಡಿರುವ ಅನೇಕ ಸೋಲಿಗೆ ಕುಟುಂಬಗಳು ಇವೆ. ಅವು ಬಡ ಕುಟುಂಬಗಳು ಎಂಬುದು ಎಲ್ಲಾರಿಗೂ ಗೊತ್ತಿರುವ ಸಂಗತಿಯೇ ಸರಿ, ಆದರೆ ಅರಣ್ಯ ಜೀವನದಲ್ಲಿ ಜೀವನವನ್ನು ಉತ್ತಮ ಪಡಿಸಿಕೊಳ್ಳುವುದು ಕಷ್ಟಸಾಧ್ಯವೂ ಹೌದು. ಅರಣ್ಯಗಳಲ್ಲಿ ಬುಡಕಟ್ಟು ಜನಾಂಗಗಳು ತಮ್ಮ ಜೀವನ ನಡೆಸಲು ಅರಣ್ಯ ಉತ್ಪನ್ನಗಳನ್ನೇ ಬಳಸಿಕೊಳ್ಳಬೇಕು, ಬೇರೆ ವಿಧಿಯಿಲ್ಲ. ಅದು ಪರೋಕ್ಷವಾಗಿ ಹುಲಿ ಸಾಮಾಜ್ಯದ ಮೇಲೆ ಪ್ರಭಾವ ಬೀರುವುದರಲ್ಲಿ ಮೊತ್ತೊಂದು ಮಾತಿಲ್ಲ!. ಇಲ್ಲಿ ಹುಲಿಗಳ ಅಗತ್ಯ ಮತ್ತು ಅಭಯಾರಣ್ಯದಲ್ಲಿ ವಾಸವಿರುವ ಜನಗಳ ಹಕ್ಕುಗಳು, ಈ ಎರಡರ ನಡುವೆ ಸಮನ್ವಯವನ್ನು ಸಾಧಿಸುವುದಾದರೂ ಹೇಗೆ ? ಎಂಬ ಪ್ರಶ್ನೆ ಬಂದಾಗ, ಅಂದರೆ ಸೋಲಿಗರ ಹಿತರಕ್ಷಣೆಯೆ? ಹುಲಿ ಸಂರಕ್ಷಣೆಯೋ ? ಎಂಬುದು ಸರಿಯಾದ್ದುದು. ನನ್ನ ಪ್ರಕಾರ ಇಲ್ಲಿ ಸೋಲಿಗರ ಪ್ರಶ್ನೆ ಮುಖ್ಯವಲ್ಲ, ಮನುಷ್ಯ ವಿಕಾಸವಾಗುವುದಕ್ಕೂ ಮೊದಲೇ ಎಷ್ಟೋ ಲಕ್ಷಾಂತರ ವರ್ಷಗಳ ಹಿಂದೆ ಅನೇಕ ಜೀವಿ ಸಂಕುಲಗಳು ಭೂಮಿಯ ಮೇಲೆ ಸೃಷ್ಟಿಯಾಗಿವೆ. ಆ ದಿವಾನವರ ಪ್ರಕೃತಿಂರೊಂದಿಗೆ ಸಹಬಾಳ್ವೆ ಮಾಡಲು ಕಲಿತಿದ್ದರಿಂದಾಗಿ ಯಾವ ಜೀವಿಗಳ ನಿ ರ್ನಾಮವಾಗಲಿಲ್ಲ. ಮನುಷ್ಯ ಭೂಮಿಯ ಮೇಲೆ ನಾಗರೀಕತೆ ವಿಶ್ವವ್ಯಾಪಿಯಾಗುತ್ತ ಬಂದಾಗ ನಿಸರ್ಗದ ಸಂಪನ್ನಗಳ ಬಳಕೆ ಪ್ರಮಾಣ ಹೆಚ್ಚುತ್ತಾ ಬಂದಹಾಗೆಲ್ಲ, ಕಾಡು ಪ್ರಾಣಿಗಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮವಾಗ ತೊಡಗಿರುವುದರಲ್ಲಿ ಸತ್ಯಸತ್ಯಾಂಶಗಳು - ಅಡಕವಾಗಿವೆ. ಉದಾಹರಣೆಗೆ ಮುಖ್ಯವಾಗಿ ವ್ಯವೆ ನಾಂದರ್ಭ ವಿಸ್ತರಣೆ, ಅರಣ್ಯದಲ್ಲಿ ಗಣಿಗಾರಿಕೆ, ವನ್ಯ ಜೀವಿಗಳ ಆವಾಸ ಧ್ವಂಸ, ಕಳ್ಳಬೇಟೆ, ಅರಣ್ಯ ಉತ್ಪನ್ನಗಳ ಶೇಕರಣೆ ; ನೀರು, ಭೂಮಿ ಹಾಗೂ ವಾಯುಮಾಲಿನ್ಯ, ಮಾನವನ ಜನಸಂಖ್ಯ ಸ್ಫೋಟವಲ್ಲ, ಜನಸೈಂಖ್ಯಾ ಮಹಾಸೆಟ. ಇವೆಲ್ಲವೂ ಇತ್ತೀಚಿನ ವರ್ಷಗಳಲ್ಲಿ ವನ್ಯ ಪ್ರಾಣಿಗಳ ನಿರ್ವಂಶಕ್ಕೆ ಕಾರಣವಾಗುತ್ತಿವೆ ? ನಾವು ಇಲ್ಲಿ ಮುಖ್ಯವಾಗಿ ತಿಳಿದು ಕೊಳ್ಳಬೇಕಾಗಿರುವುದು ಸೋಲಿಗರು ಎಂಬುದು ಮುಖ್ಯ ಪ್ರಶ್ನೆಯಲ್ಲ, ಮನುಷ್ಯ ಎಂಬುದು ಮುಖ್ಯಸ೦ಗ ತಿ! ಸೋಲಿಗರು ಮುಗ್ಧ ಜೀವಿಗಳೇ ಸರಿ, ಆದರೆ ಹುಲಿ ಮತ್ತು ಮನುಷ್ಯನ ಪ್ರಶ್ನೆ ಬಂದಾಗ, ಹುಲಿ ಸಂರಕ್ಷಣೆಯ ಬಗ್ಗೆ ಹೆಚ್ಚು ಒತ್ತುಕೊಡ ಬೇಕಾದದ್ದು ಮನುಷ್ಯನ ಧರ್ಮ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಕಿಅಂಶ, ಇಪ್ಪತ್ತನೇ ಶತಮಾನದ ಭಾರತ – ಉಪಖಂಡದಲ್ಲಿ ಸುಮಾರು 40,000 ಹುಲಿಗಳು, ಈಗ ಕೇವಲ 1411 ಹುಲಿಗಳು!
ಪುಟ:ಕಾನನ ಮಾರ್ಚ್ 2011.djvu/೬
ಗೋಚರ