ಪುಟ:ಅರಮನೆ.pdf/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೫ ಕಾರಣ ಯುದ್ಧವಂದೇ ಅಲ್ಲ.. ತಮ್ಮ ಕಡೆಯವರಾದ ಶ್ರೀನಿವಾಸ ರಾವು, ಪಣೀಂದ್ರರಾವು ಯಿನ್ನೂ ಮುಂತಾದವರೆಲ್ಲ ಗೆಳೆಯರಂತೆ ನಟಿಸಿ ಅವರನ್ನು ಯಿಷಯಲಂಪಟರನ್ನಾಗಿ ಮಾಡಿದ್ದು ಕೂಡ ವಂದು. ಸ್ಥಳೀಕ ರಾಜರನ್ನು ದುಶ್ಚಲಗೊಳಿಸುವುದು ಕೂಡ ಕಂಪನಿಯ ಕಾವ್ಯತಂತ್ರ, ಸಾಲ ಅಗಾಧವಾಗಿ ಬೆಳೆದದ್ದೇನೋ ನಿಜ.. ವಂದೆರಡು ವರ್ಷ ಗಡುವು ನೀಡಿದ್ದಲ್ಲಿ ಪುವಲ ರಾಜರು ಅದನ್ನು ಚುಕ್ತಾ ಮಾಡದೆ ಯಿರುತ್ತಿರಲಿಲ್ಲ. ಆದರೆ ತಮ್ಮ ಕಂಪನಿ ಅದಕ್ಕೆ ಅವಕಾಶ ನೀಡಿದರೆ ತಾನೆ? ಹಿತ್ತಾಳೆ ಕಿವಿಗಳುಳ್ಳವನೂ, ರಾಜನೀತಿ ನಿಪುಣನೂ, ಬ್ರಿಟೀಷ್ ಸಾಮ್ರಾಜ್ಯದ ನಿಷ«ಮತ ಅಧಿಕಾರಿಯೂ, ಪಂಚತಂತ್ರಕೋಯಿದನೂ ಆದ ಥಾಮಸು ಮನೋ ಸಾಹೇಬ ಯಿದ್ದಕ್ಕಿದಂತೆ ಪರಮಾನು ಹೊಂಡಿಸಿ ಪುವ್ವಲರಾಜರ ಸಮಸ್ತ ಅಧಿಕಾರವನ್ನು ಕಬ್ಬಾ ಮಾಡಿಸಿಬಿಟ್ಟ. ಮುಕ್ಕಾಲು ವಾಸಿ ಸ್ಥಿರಾಸ್ತಿಯನ್ನು ವಶಪಡಿಸಿಕೊಂಡು ಗೇಣಿಗೆ ಕೊಟ್ಟುಬಿಟ್ಟ, ಪುಟ್ಟಂದೂರಿ ಚರಾಸ್ತಿಯನ್ನು ಮುಟ್ಟುಗೋಲು ಹಾಕಿ ಕಂಪನಿ ತಿಜೋರಿಗೆ ಸೇರಿಸಿಯೂ ಬಿಟ್ಟ ಆತನಿಗೆ ಮೊದಲೆ ಸಾಮಂತ ಪಾಳೇಗಾರ ಜಮೀನ್ದಾರರೆಂದರೆ ಆಗದು. ಯಡ್ಡವರು ಆಗಾಗ್ಗೆ ನೆನಪು ಮಾಡುಕೊಂಡು ನೋವು ಅನುಭೋಸುವ ಸಂಗತಿಯೆಂದರೆ (ಯಿದಕ್ಕೆ ಆತನ ಹೆಂಡತಿ ಜೆನ್ನಿಫರ ಕಾರಣ) ತಮ್ಮ ದರುಮ ಪ್ರಚಾರಕರಾದ ಫಾದರಿಗಳ ಹಕೀಕತ್ತು. ಪ್ರತಿಯೊಂದು ಸಾಮ್ರಾಜ್ಯದ ವುನ್ನತಿ, ಅವನತಿಗಳಿಗೆ ಆಯಾ ಧರುಮಗಳೇ ಕಾರಣಯೆಂಬುದು ನಿಶ್ಯಂಸಯ.. (ಪ್ಲಾ.. ಪ್ಲಾ.. ಫಾದರು ಅಂಥೋಣಿಯೇ.. ನೀನು ಹಿಂದಿನ ಜನುಮದಲ್ಲಿ ಹದ್ದಾಗಿ ಹುಟ್ಟಿದ್ದಿರಬಹುದು) ವುಭಯ ಕುಶಲೋಪರಿ ಯಿಚಾರಿಸಲೆಂದೋ, ಸೊಧರುಮ ಪ್ರಚಾರಕೆಂದೊ ಕುದುರಡವಿಗೆ ಹೋಗಿ ಜೀಸಸಗಿಂತ ಮಿಗಿಲಾದ ದಯವಯಿಲ್ಲಯಂದೂ, ಕ್ರಯಸ್ತ ಮತಕ್ಕಿಂತ ಮಿಗಿಲಾದ ಮತ ಯಿಲ್ಲ ಯಂದೂ ತಮ್ಮ ಮತಕ್ಕೆ ಮತಾಂತರ ಹೊಂದಿದ್ದಲ್ಲಿ ಕಲೆಮನ ವಲಿಸಿ ಮರಳಿ ಅಧಿಕಾರ ಕೊಡಿಸುವುದಾಗಿ ಆಮಿಷ ವಡ್ಡಿದ್ದರು. ಅದಕ್ಕೆ ರಾಜಮಾತೆಯು ರಾಜಸತ್ತೆಗಾಗಿ ನಮ್ಮ ಧರುಮ ಕುಲಾಚಾರವ ಬಿಟ್ಟುಕೊಡುವುದಿಲ್ಲ ಯಂದು ನಿಥು«ರವಾಗಿ ಹೇಳಿ ಕಳುವಿದ್ದಳು. ಕಂಪನಿ ಅಧಿಕಾರಿಗಳ ಪಯ್ಲಿ ಕೆಲವರು ಗೋಮಾಂಸ ಭಕ್ಷಣೆ ಮಾಡಿದಲ್ಲಿ... ಯಂದು ನಾಚಿಕೆ ಬಿಟ್ಟು ಕೇಳಿರದೆಯಿರಲಿಲ್ಲ. ಅದನ್ನೆಲ್ಲ ನೆನಪಿಸಿಕೊಂಡೊಡನೆ ಯಡ್ಡವರನ ಮನಸ್ಸು ಬಗ್ಗಡವಾಯಿತು. ಹೆಂಡತಿ ಜೆನ್ನಿಫರ್ ಸಲಹೆಯಂತೆ ನವುಕರಿಗೆ ರಾಜಿನಾಮೆ ಕೊಟ್ಟು ಹೋಗಬೇಕೆಂದು