ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ನಿನ್ನ ಉದರದಿಂದ ಜನಿಸುವನು. ಎಲೈ ಕಮಲನಯನೇ, ನೀನು ಶೋಕಿಸಬೇಡ!” ಈ ಉದ್ಗಾರಗಳು, ವರವೋ? ಆಶೀರ್ವಾದವೋ? ಎಂಬುದನ್ನು ವಾಲ್ಮೀಕಿಯು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಅಯೋಧ್ಯಾ ಕಾಂಡದಲ್ಲಿ 'ವರೆಪ್ಪುಂ' ಎಂಬ ಸ್ಪಷ್ಟ ನಿರ್ದೆಶವಿದೆ. ಹೀಗಿರುವುದರಿಂದ ಇದು ವರವೇ ಸರಿಯೆನಿಸುತ್ತದೆ. ಆಶೀರ್ವಾದವಾಗಿರುವುದಿಲ್ಲ. ಇದು ಯಾಚಿತ' ವರವಾಗಿದೆ. ೨೧. ಅನಸೂಯೆ < ಸೀತಾ ಅಯೋಧ್ಯಾಕಾಂಡ/೧೧೮ ರಾಮ, ಲಕ್ಷಣ ಮತ್ತು ಸೀತೆ ಈ ಮೂವರು ಕಾಡಿನಲ್ಲಿ ಸಂಚರಿಸುತ್ತ 'ಅ' ಋಷಿಯ ಆಶ್ರಮಕ್ಕೆ ಬಂದರು. ಋಷಿಯು ಅವರನ್ನು ಮಕ್ಕಳಂತೆ ಬರಮಾಡಿ ಕೊಂಡನು. ತನ್ನ ಪತ್ನಿಯಾದ ಅನಸೂಯೆಗೆ ಸೀತೆಯನ್ನು ಬರಮಾಡಿಕೊಳ್ಳಲು ಹೇಳಿದನು. ಋಷಿಯು ಅನಸೂಯೆಯು ಮಾಡುತ್ತಿದ್ದ ತಪಸ್ಸಿನ ಬಗ್ಗೆ ರಾಮನಿಗೆ ಹೇಳಿದ್ದನು. ರಾಮನು ಸೀತೆಗೆ ಅನಸೂಯೆಯತ್ತ ಹೋಗಲು ಅನುಮತಿಯನ್ನು ಕೊಟ್ಟನು. ಸೀತೆಯು ಅನಸೂಯೆಗೆ ಅಭಿವಂದಿಸಿದಳು. ಅನಸೂಯೆಯು ಸೀತೆಯು ಕ್ಷೇಮ, ಕುಶಲ, ಆರೋಗ್ಯದ ಬಗ್ಗೆ ಕೇಳಿಕೊಂಡು ಅವಳಿಗೆ ಸ್ತ್ರೀಧರ್ಮ, ಕರ್ತವ್ಯವಗಳನ್ನು ಉಪದೇಶಿಸಿದಳು. ಈ ಉಪದೇಶವು ಸೀತೆಗೆ ತುಂಬಾ ಹಿಡಿಸಿತು. ಆಗ ಸೀತೆಯು ತನ್ನ ಆಚರಣೆಯ ರೀತಿ, ಪತಿಯ ಬಗ್ಗೆ ತನಗಿದ್ದ ನಿಷ್ಠೆ ಇವುಗಳನ್ನು ವಿವರಿಸಿ ಹೇಳಿದಳು. ಅದನ್ನು ತಿಳಿದುಕೊಂಡು ಅನಸೂಯೆಗೆ ಸಂತೋಷವಾಯಿತು. ಆಗ ಸೀತೆಯ ತಲೆಯನ್ನು ಆಘ್ರಾಣಿಸಿ ಅನಸೂಯೆಯು ಇಂತೆಂದಳು- ನಿಯಮೈರ್ವಿವಿಧೈರಾಪ್ತಂ ತಪೋ ಹಿ ಮಹದಸ್ತಿ ಮೇ || ತತ್ವಂತ್ಯ ಬಲಂ ಸೀತೇ ಛದಯೇ ತ್ವಾಂ ಶುಚಿತ್ರತೇ ||೧೪|| ಉಪಪನ್ನಂ ಚ ಯುಕ್ತಂ ಚ ವಚನು ತವ ಮೈಥಿಲಿ || ಪ್ರೀತಾ ಚಾಸ್ಯ ಚಿತಾಂ ಸೀತೇ ಕರವಾಣಿ ಪ್ರಿಯಂ ಚ ಕಿಮ್ ॥೧೫॥ “ಹಲವಾರು ಬಗೆಯ ನಿಯಮಗಳನ್ನಾಚರಿಸಿ ನಾನು ಮಹಾತಪಸ್ಸಿನ ಬಲವನ್ನು ಸಂಪಾದಿಸಿದ್ದೇನೆ. ಆ ತಪೋಬಲದ ಆಧಾರದಿಂದ ನೀನು ನನ್ನ ಹತ್ತಿರ ವರವನ್ನು ಬೇಡಿಕೊಳ್ಳಬೇಕೆಂದು ನನ್ನ ಇಚ್ಛೆಯಾಗಿದೆ. ಎಲೈ ಮೈಥಿಲಿಯೇ,