೭೪ ಸಂಸ್ಕೃತಕವಿಚರಿತ ರಂತೆಯೆ ಅಥವಾ ಅದಕ್ಕಿಂತ ಮಿಗಿಲೆನಿಸುವಂತಹ ಸಂದೇಶಕಾವ್ಯವನ್ನು ಬರೆಯ ಬೇಕೆಂಬ ಸ್ಪರ್ಧೆಯಿಂದ ವೆಂಕಟನಾಥನು ಹಂಸಸಂದೇಶವನ್ನು ಬರೆದಿರಬೇಕಾಗಿ ತೋರುತ್ತದೆ. ಮೇಘಸಂದೇಶದಲ್ಲಿ ವಿರಹಿಯಾದ ಯಕನು ಪುಷ್ಟ ಲಾವರನೆಂಬ ಮೇಘನನ್ನು ದೌತ್ಯಕ್ಕಾಗಿಬೇಡುವಿಕೆ, ಬಹುದೂರದಲ್ಲಿರುವ ತನ್ನ ಪ್ರಿಯತಮೆಯನ್ನು ಜ್ಞಾಪಿಸಿಕೊಂಡು ತಾನು ಬಿಟ್ಟು ಬಂದುದರ ದೆಸೆಯಿಂದ ಪರಸ್ಪರ ಉಂಟಾಗಿರುವ ವಿರಹವೇದನೆ, ಶಾಪಾವಧಿಯುವೀರಿ ತಾನುಬರುವವರೆಗೂ ಉಳಿದುಕೊಳ್ಳಬೇಕೆಂಬ ಆಶಾಪೂರ್ವಕವಾದ ಕೋರಿಕೆ, ದೂತನವಿಚಾರದಲ್ಲಿ ಕಾವ್ಯ ನಿರ್ವಹಣಮಾಡಬಲ್ಲನೆಂಬ ಭರವಸೆ, ಶಕುನಗಳನಂಬುಗೆ, ಮಾರ್ಗಕ್ರಮಾಣವಿವರಣೆ, ವಿರಹಿಣಿಯ ಅವಸ್ತಾ೦ತ ರಗಳು, ನಿರುಪದ್ರವವಾಗಿ ಮಾರ್ಗಕ್ರಮಣಮಾಡಿ ಪತ್ನಿ ಯೊಡನೆ ತನ್ನ ಕ್ಷೇಮ ನಾರೆಯನ್ನು ತಿಳುಹುವುದು, ಮಾರ್ಗದಲ್ಲಿ ದೊರಕುವುವಾದ ತೀರ್ಥ ಕ್ಷೇತಾದಿಗಳ ಮಹಾತ್ಮವರ್ಣನೆ, ದೌತ್ಯವನ್ನು ಕೈಗೊಂಡಮೆಘರಾಜನಿಗೆ ಮಂಗಳಾಶಾಸನ ಇವೇ ಮೊದಲಾದವುಗಳನ್ನು ಸಮ್ಯಕ್ಷರಿಶೀಲಿಸಿ ಮೇಘಸಂದೇಶಕ್ಕಿಂತಲೂ ಇನಿದಾಗಿ ಬರೆಯಬೇಕೆಂದಾಶಿಸಿ ಬಹುತರ ಹಂಸಸಂದೇಶವನ್ನು ಬರೆದಿರಬೇಕಾಗಿ ಬೋಧೆಯಾ ಗುತ್ತದೆ. ಹಂಸಸಂದೇಶವು ಮೇಘಸಂದೇಶದ ಪಡಿನೆಳಲು. ಮೇಘ ಮತ್ತು ಹಂಸ ಸಂದೇಶಗಳಲ್ಲಿ ರಾಮಗಿರಿ ಮತ್ತು ಮಲಯಪರ್ವತಗಳ ಮಧ್ಯದಲ್ಲಿ ಎಲ್ಲಿಯೋ ಕೆಲವು ಪ್ರದೇಶಗಳನ್ನು ಹೊರ್ತು ಹಿಮಾಚಲದಿಂದ ಕನ್ಯಾಕುಮಾರಿಯವರೆಗಿನ ಇಂಡಿಯಾದೇಶದ ಮುಖ್ಯ ಭಾಗಗಳೆಲ್ಲವನ್ನೂ ಹೇಳಿದೆ. ಇವೆರಡು ಸಂದೇಶಕಾವ್ಯ ಗಳಲ್ಲಿಯೂ ಸಮಾನಾರ್ಥದ್ಯೋತಕವಾದ ಶಬ್ದ ಗಳೂ ಶ್ಲೋಕಗಳೂ ವರ್ಣನೆಗಳೂ ಇರುವುವು, ಮಾದರಿಗಾಗಿ ಕೆಲವನ್ನು ಇಲ್ಲಿ ಬರೆದಿದೆ. ಪ್ರಯಾಣಮಾಡುವ ದೂತನಿಗೆ ಹಾಗೆ ಹೊರಡುವ ಮೊದಲು ಮುಖ್ಯ ಪ್ರೀತಿ ಪಾತ್ರರ ಅನುಜ್ಞೆಯನ್ನು ಹೊಂದಿ ಅವರಸಹಾಯವನ್ನು ಕೋರಿದ್ರಯಾಣಮಾಡಲು ನಾಯಕನು ಪೇಳುವಿಕೆ:- (೧) ಆವೃತ್ಮಸ್ವ ಪ್ರಿಯಸಖಮಮುಂ ತುಂಗಮಾಲಿಂಗ್ಯ ಶೈಲಂ ವಂದ್ಯ: ಪುಂಸಾಂ ರಘುಪತಿಪದ್ಮರಂಕಿತಂ ಮೇಖಲಾಸು ಕಲೇ ಕಾಲೇ ಭವತಿ ಭವತೋ ಯಸ್ಯ ಸಂಯೋಗಮೇತ್ಯ | ಸ್ನೇಹಕ್ರಿಶ್ಚಿರವಿರಹಜಂ ಮುಂಚಶೋ ಬಾಷ್ಪಮುಷ್ಠ೦ || ಮೇಘ ಸಂ || ೧೨ || ಪ್ರಣಂ ತ್ವರಹಸಮಯ ಜಾತಹರ್ಷಾಮಿದಾನೀಂ ಪ್ರತ್ಯಾಯಾಸ್ಯ ನ್ನನುನಯ ಶತಿ ಪದ್ಧಿ ಸೀಂ ಸ್ವಾದುವಾಚಾ ಸಾ ತೇ ತಂತ್ರೀಸ್ಟನಸುಭಗಯಾ ಹ್ಯಾ ದಿತೀಹುಭನುಜ್ಞಾಂ ಮನ್ಯ ಕುರ್ಯಾನ್ಮಧುಕರಗಿರಾ ಮೈಥಿಲೀಸೌದೇನ || ಹಂಸ ಸಂದೇಶ ||
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೯೨
ಗೋಚರ