ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ (ಕ್ರಿಸ್ತ ಸತ್ಯಂ ಹಾಲಿಕತ್ವವ ಈ ಸಮುಚಿತಾ ಸಕ್ರಸ್ಯ ಗೋವಾಹನ ವಕ್ರೋಕ್ತಿ ಜಿತೋ ಹಿಮಾದ್ರಿಸುತಯಾ ಸ್ಮರೋ ಹರಃ ಪಾತು ವಃ | ಹರವಿಜಯದ ಎರಡು ಶ್ಲೋಕಗಳನ್ನು ಮಾದರಿಗಾಗಿ ಬರೆಯುವೆವು. ತರಳಪಲ್ಲ ವತಾಕರಾ ಬಳ್ ಸಮಧುಮುಲ್ಲಸಿತಭ್ರಮರೋತ್ಸಲಂ | ಕುಸುಮಕ್ಷಮಿವಾರ್ಪಯಿತುಂ ಲತಾ ವಿವಲಿತಾ ಬಲಿತಾಪಹತಸ್ತಯೋಃ || ೩-೧೮ ಮಧುಮಾಸದ ಸಮಾಗಮದಿಂದ ಪ್ರಪುಲ್ಲವಾದ ಬಾಲಲತೆಗಳು ಆರಕ್ಕೆ ವರ್ಣವಾಗಿರುವ ಪಲ್ಲವಗಳೆಂಬ ತಮ್ಮ ಕರಗಳಲ್ಲಿ ಮಕರಂದದಿಂದ ಪೂರ್ಣವಾದ ಪುಷ್ಪಗಳೆಂಬ ಪಾನಪಾತ್ರೆಗಳನ್ನು ಹಿಡಿದುಕೊಂಡು ತರುಣಿಯರು ತಮ್ಮ ಮನ ದನ್ನರಿಗೆ ಮದಿರಾಪೂರ್ಣವಾದ ಪಾನಪಾತ್ರೆಯನ್ನು ಕೊಡುವಂತೆ ವೃಕ್ಷಗಳಿಗೆ ಸನುರ್ಸಿಸುತ್ತಿರುವುವು. ಏಷಾ ವಿಶಾಲವಿಶಿಖಾಮುಖವಿಪ್ರಕೀರ್ಣ ಹಮ್ಮೊ೯ಪಕಾರಕುಸುಮಪ್ರವಣಾಳಿಪತ್ತಿಃ || ಅಭತ್ಯ ಬಂಧುಜನತೇವ ನಿಶಾಂಧಕಾರ ಮರ್ಕಾ೦ಶುಭಿನ್ನ ಮನುಶೋಚತಿ ತಾರನಾದೈಃ || ೨೯-೫೩ ನಿಶಾಂಧಕಾರವು ಪ್ರಪಂಚದಲ್ಲೆಲ್ಲಾ ನಿರಂಕುಶಪ್ರಭುತ್ವವನ್ನು ಮಾಡು ಇರಲು ಹಠಾತ್ತಾಗಿ ಚಂಡಕಿರಣನು ಬಂದು ಕತ್ತಲೆಯನ್ನು ಬೆತ್ತಲೆಯನ್ನಾಗಿ ಮಾಡಲೋಸುಗ ಪ್ರಪಂಚವನ್ನಾಕ್ರಮಿಸಲು ದಿಕ್ಕಾಪಾಲಾಗಿ ಬಹಳ ಅನರ್ಥಕ್ಕೆ ಸಿಲ್ಕಿ ಕಂಗಾಲಾಗಿ ಹೋಗಿರುವ ಅಂಧಕಾರವನ್ನು ಕಷ್ಟ ಕಾಲದಲ್ಲಿ ಸಮಾಧಾನ ಪಡಿಸುವುದಕ್ಕಾಗಿ ಬಂದ ಬಂಧುಜನರಂತೆ ಭ್ರಮರಗಳು ಝೇಂಕಾರವೆಂಬ ರೋದನಧ್ವನಿಯಿಂದ ಸಂತೈಸುವಂತೆ ಕಾಣುವುದು. ಭ ಟೂ ಶಿವ ಸ್ವಾ ಮಿ ಹೆಸರಿನಿಂದ ಇವನು ಬ್ರಾಹ್ಮಣನಾಗಿರಬೇಕೆಂದು ತೋರುತ್ತದೆ. ಇವನು ಕ್ರಿ. ಶ. ೮೫೫-೮೮೪ರಲ್ಲಿ ಕಾಶ್ಮೀರದಲ್ಲಿ ಆಳಿದ ಅವಂತಿವರ್ಮನ ಆಶ್ರಯದಲ್ಲಿ (( ಕಪ್ಪಣಾಭ್ಯುದಯ” ವೆಂಬ ಮಹಾಕಾವ್ಯವನ್ನು ಬರೆದುದಾಗಿ ತಿಳಿಯಬರು ಇದೆ. ಇದು ಇದುವರೆಗೂ ಮುದ್ರಿತವಾಗದೆ ಇನ್ನೂ ಹಸ್ತಲಿಖಿತಪ್ರತಿಯಲ್ಲಿರು ವುದು, ಕಲ್ಲಣನ ರಾಜ ತರಂಗಿಣಿಯಲ್ಲಿ,