೨೨೬ ಸಂಸ್ಕೃತಕವಿಚರಿತೆ ಕಾಲ:-ಅರ್ಜುನವರ್ಮನು ವಿ. ಸಂ. ೧೧೬೭-೧೨೭೨ರ ವರೆಗೆ ಎಂದರೆ ಕ್ರಿ. ಶ ೧೨೧೦-೧೨೧೫ರ ವರೆಗೆ ಆಳಿದುದಾಗಿದೆ. ಕ್ರಿ. ಶ. ೧೨೧೧-೧೨೧೩ ಮತ್ತು ೧೨೧೫ರಲ್ಲಿ, ಅರ್ಜುನವರ್ಮನು ಕೊಟ್ಟ ಮೂರು ತಾಮ್ರಶಾಸನಗಳಿರುವುವು. ಮದನನು ಸುಮಾರು ಕ್ರಿ. ಶ. ೧೨೧೩ರ ಸುಮಾರಿನಲ್ಲಿ ಗ್ರಂಥರಚನೆ ಮಾಡಿರ ಬೇಕಾಗಿ ಭಾಸವಾಗುತ್ತದೆ. ಇದೇ ಕಾಲವನ್ನೆ ಡಾ|| ಹಲ್ವ ಜರವರು ಸಾಧಿ ಸಿರುವರು.* ಗ್ರಂಥ:-ಇವನು (ಪಾರಿಜಾತಮಂಜರಿ' ಎಂಬ ನಾಟಕೆಯನ್ನು ಬರೆ ದಿರುವನು ಇದಕ್ಕೆ ವಿಜಯ' ಎಂದೂ ಹೆಸರಿರುವುದು, ಇದರಲ್ಲಿ ಅರ್ಜುನ ವರ್ಮನಿಗೂ, ಗುರ್ಜರರಾಜನಾದ ಚಾಲುಕ್ಯವಂಶದ ಜಯಸಿಂಹನಿಗೂ ನಡೆದ ಯುದ್ಧ ವಿಚಾರವೂ, ಜಯಸಿಂಹನ ಪರಾಜಯವೂ ವರ್ಣಿತವಾಗಿರುವುದಲ್ಲದೆ ಅರ್ಜುನವರ್ಮನು ಪಾರಿಜಾತಮಂಜರಿ ಅಥವಾ ವಿಜಯಶ್ರೀಯನ್ನು ಮೋಹಿಸಿ ರಾಜಿಯಾದ ಸರ್ವಕಲೆಯ ಇಷ್ಟದಂತೆ ವಿಜಯಶ್ರೀ'ಯನ್ನು ಮದುವೆಯಾದುದು ಹೇಳಿದೆ, ಪ್ರಕೃತ ಅಚ್ಚಾಗಿ ದೊರೆತಿರುವುದು ಎರಡು ಅಂಕಗಳು ಮಾತ್ರ. ರಾಜ ಮತ್ತು ಕುಸುಮಾಕರ ಈ ಇಬ್ಬರು ಮಾತ್ರ ಸಂಸ್ಕೃತದಲ್ಲಿಯೂ ಉಳಿದವರು ಪ್ರಾಕೃತದಲ್ಲಿಯೂ ಮಾತನಾಡುವರು, ಗದ್ಯ ಭಾಗವು ಶೂರಸೇನ ಶೈಲಿಯಲ್ಲಿಯೂ, ಪದ್ಯಭಾಗವು ಮಹಾರಾಷ್ಟ್ರ ಶೈಲಿಯಲ್ಲಿಯೂ ಹೇಳಲ್ಪಟ್ಟಿರುವುದು, ಅರ್ಜುನವರ್ಮನ ಪಟ್ಟದರಾಣಿಯಾದ ಸರ್ವಕಲೆಯು ಕುಂತಲರಾಜನ ಮಗಳೆಂಬುದು:- ಸಮುಚ ಯೇನ ಯಾ ಸೃಷ್ಟ ಕಲಾನಾಂ ಪರಮೇಷ್ಠಿ ನಾ ಕುಂತಲೇಂದ್ರಸುತಾ ಸೇಯ ರಾಜ್ಞಾ: ಸರ್ವಕಲಾ ಪ್ರಿಯಾ || ೧-೧೧ ಎಂದು ಸೂತ್ರಧಾರನ ಹೇಳಿಕೆಯಿಂದ ಸ್ಪಷ್ಟ ಪಡುವುದು. ಇದರ ಶೈಲಿಯು ರತ್ನಾವಳಿಯನ್ನು ಹೊವುದು. ಮಾದರಿಯ ಶ್ಲೋಕಗಳು- ವಿರಹೇ ನಂನಮೇಕಸ್ಯ ದುಃಖೇನ ಲಭತೇ ಸುಖಂ ಸುಖೇನ ಚೇತರೋ ದುಃಖಂ ಪ್ರೇವ ಹಿ ಕುಟಿಲಾ ಗತಿಃ || ೨-೩೮ ರಾಜನ ಹೇಳಿಕೆ ಧಮ್ಮೋsಯಂ ಸಹಕಾರಸುಂದರಯುವಾ ಚೈತ್ರಾ ನಿಲಾಂದೋಲನೆ - ರುದ್ಯುಕ: ಪರಿರಿಪ್ಪ ಈ ಪ್ರಿಯತಮಾಂ ವಾಮಾಂಗ ವಿಶ್ರಂಭಿಣೀಂ ಏಷಾಷ್ಯ ರ್ಧಸುವಾಸಿನೀ ನವಲತಾ ನಮ್ರಾಭವಂತೀ ಭ್ರಶಂ ನಿರ್ಬಂಧೇನ ಪರಾಲ್ಮುಖೀ ನ ಸಹಪೇ ವೈಯಾತ್ಯ ವಾರ್ತಾಮಸಿ || ೨-೪೫
- Introduction to Parijathamanjari by Dr E, Hult2schr P. 5