ಪುಟ:ಭಾರತ ದರ್ಶನ.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೩೭೫

ಸಿದ್ಧವಿರಲಿಲ್ಲ. ಈ ರೀತಿ ರಾಷ್ಟ್ರ ಸಂಸ್ಥೆಯಲ್ಲಿ ಮತ್ತು ಶಸ್ತ್ರ ಸಂನ್ಯಾಸ ಸಮ್ಮೇಳನದಲ್ಲಿ ಸಾಮಾನ್ಯ ಒಪ್ಪಂದ ವಾಗದಂತೆ ಬ್ರಿಟನ್ ಅಡ್ಡ ಬಂದಿತು.

ವೀಮಾರ್ ಜನತಾರಾಜ್ಯ ಘಟನೆಯ ಜರ್ಮನಿಗೆ ರಾಷ್ಟ್ರ ಸಂಘದ ಪೂರ್ಣ ಸದಸ್ಯತ್ವ ದೊರಕಿತ್ತು, ಯುರೋಪಿನ ಅನಿರ್ಬಾಧಿತ ಶಾಂತಿ ಸ್ಥಾಪನೆಗೆ ಮತ್ತು ಬ್ರಿಟಿಷ್ ರಾಜನೀತಿ ನೈಪುಣ್ಯಕ್ಕೆ ಲೊಕಾರ್ನೊ ಒಂದು ಮುಂಚೂಣಿ ಎಂಬ ಶಹಬಾಸ್‌ಗಿರಿಯ ಸುರಿಮಳೆ ಸುರಿದಿತ್ತು. ರಷ್ಯವನ್ನು ಬಹಿಷ್ಕರಿಸಿ ಪ್ರತ್ಯೇ ಕಿಸಿ ಅದರ ವಿರುದ್ದ ಯುರೋಪಿನಲ್ಲಿ ಒಂದು ಬಲವಾದ ಕೋಟೆ ಕಟ್ಟುವದೇ ಈ ಎಲ್ಲ ಘಟನೆಗಳ ಪರಿಣಾಮವಾಯಿತು. ರಷ್ಯ ಆಗತಾನೆ ತನ್ನ ಕ್ರಾಂತಿಯ ಹತ್ತನೆಯ ವಾರ್ಷಿಕೋತ್ಸವವನ್ನು ಆಚರಿಸಿ ತುರ್ಕಿ, ಇರಾಣ, ಆಫ್ಘಾನಿಸ್ತಾನ ಮತ್ತು ಮಂಗೋಲಿಯ ಮುಂತಾದ ಪೌರಾತ್ಯ ದೇಶಗಳೊಡನೆ ಸ್ನೇಹ ಬಾಂಧವ್ಯ ಬೆಳೆಸಿತ್ತು.

ಚೀನಾ ಕ್ರಾಂತಿಯೂ ಬಹಳ ಮುಂದುವರಿದು ರಾಷ್ಟ್ರೀಯ ಸೈನ್ಯಗಳು ಅರ್ಧ ಚೀಣ ಆಕ್ರಮಣ ಮಾಡಿದ್ದವು. ಬಂದರುಗಳಲ್ಲಿ ಮತ್ತು ದೇಶದ ಒಳಗೆ ಬ್ರಿಟಿಷ್ ಮತ್ತು ಇತರ ವಿದೇಶೀ ವ್ಯಾಪಾರಸ್ಥರೊಡನೆ ಘರ್ಷಣೆ ಆರಂಭವಾಗಿತ್ತು. ಆ ಮೇಲೆ ಅಂತಃಕಲಹಗಳು ಹುಟ್ಟಿ ಕೂಮಿಂಟಾಂಗ್ ಪಕ್ಷ ಒಡೆದು ಎರಡು ಪಂಗಡಗಳಾಗಿತ್ತು. ಯುರೋಪಿಯನ್ ರಾಷ್ಟ್ರಗಳು ಬ್ರಿಟನ್ ಮತ್ತು ಫ್ರಾನ್ಸಿನ ನಾಯಕತ್ವದಲ್ಲ, ಪೌರಾತ್ಯ ರಾಷ್ಟ್ರಗಳು ರಷ್ಯದ ನಾಯಕತ್ವದಲ್ಲ ಎರಡು ಗುಂಪುಗಳಾಗಿ ಪ್ರಪಂಚದ ಪರಿಸ್ಥಿತಿಯನ್ನು ಹದಗೆಡಿಸಿ ಯುದಾ ಭಿಮುಖವಾಗಿ ಓಡುತ್ತಿರುವಂತೆ ಕಂಡಿತು. ಅಮೆರಿಕೆಯ ಸಂಯುಕ್ತ ಸಂಸ್ಥಾನಗಳು ಈ ಎರಡು ಗುಂಪುಗಳಿಂದಲೂ ದೂರ ನಿಂತಿತು. ಸಾಮ್ಯವಾದ ಅವರಿಗೆ ಸೇರದ ಕಾರಣ ರಷ್ಯದಿಂದ ದೂರ ನಿಂತರು. ಬ್ರಿಟಷ್ ನೀತಿಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಬ್ರಿಟಿಷ್ ಬಂಡವಾಳ ಮತ್ತು ಕೈಗಾರಿಕೆ ಯೊಂದಿಗೆ ಅವರು ಪೈಪೋಟಿ ನಡೆಸಬೇಕಾಗಿತ್ತು. ಆದ್ದರಿಂದ ಬ್ರಿಟಿಷರಿಂದಲೂ ದೂರನಿಂತರು. ಅಲ್ಲದೆ ಯುರೋಪಿನ ಜಗಳಗಳಲ್ಲಿ ತಾವೇಕೆ ಪ್ರವೇಶಿಸಬೇಕೆಂಬ ಭಯವೂ ಮತ್ತು ತಮ್ಮ ಪಾಡಿಗೆ ತಾವು ಇದ್ದರಾಯಿತೆಂಬ ನೀತಿಯೂ ಇದಕ್ಕೆ ಕಾರಣವಾಯಿತು.

ಈ ಪರಿಸ್ಥಿತಿಯಲ್ಲಿ ಭಾರತೀಯರ ಅಭಿಪ್ರಾಯ ಸೋವಿಯಟ್ ರಷ್ಯ ಮತ್ತು ಪೌಾತ್ಯ ದೇಶಗಳ ಕಡೆಗೆ ಒಲಿಯುವುದು ಅನಿವಾರವಾಯಿತು. ಅನೇಕರ ಮನಸ್ಸು ಸಮಾಜವಾದದ ಕಡೆ ಒಲಿದರೂ ಬಹು ಮತವು ಸಾಮ್ಯವಾದ ಒಪ್ಪಿತೆಂದಲ್ಲ. ಚೀನಾ ಕ್ರಾಂತಿಯ ವಿಜಯವು ಭಾರತದ ಸ್ವಾತಂತ್ರ್ಯೋದಯದ ಸಂಕೇತವೆಂದೂ ಏಷ್ಯದಲ್ಲಿ ಯುರೋಪಿಯನ್ ಆಕ್ರಮಣದ ಅವಸಾನದ ಸೂಚನೆ” ಎಂದೂ ಅದನ್ನು ಉತ್ಸಾಹದಿಂದ ಸ್ವಾಗತಿಸಲಾಯಿತು. ಡಚ್ಚರ ಪೂರ್ವ ಇಂಡಿಯ, ಇಂಡೋ ಚೀನಾ, ಪಶ್ಚಿಮ ಏಷ್ಯದ ರಾಷ್ಟಗಳು, ಈಜಿಪ್ಟ್ ಮುಂತಾದ ದೇಶಗಳ ರಾಷ್ಟ್ರೀಯ ಚಳವಳಿಗಳಲ್ಲಿ ತುಂಬ ಆಸಕ್ತಿ ವಹಿಸಿದೆವು. ಬ್ರಿಟನ್ ಸಿಂಗಪುರವನ್ನು ನಾವಿಕಾಪಡೆಯ ಒಂದು ದೊಡ್ಡ ಮೂಲ ಕೇಂದ್ರ ಮಾಡಿದ್ದೂ, ಸಿಂಹಳದಲ್ಲಿ ಟ್ರಂಕೋಮಾಲೆ ಬಂದರು ಅಭಿವೃದ್ಧಿ ಪಡಿಸಿದ್ದೂ ಮುಂಬರುವ ಯುದ್ದದಲ್ಲಿ ತನ್ನ ಸಾಮ್ರಾಜ್ಯವನ್ನೂ ಸಾಮ್ರಾಜ್ಯ ಶಕ್ತಿಯನ್ನೂ ಭದ್ರಪಡಿಸಿಕೊಂಡು ಸೋವಿಯಟ್ ರಷ್ಯವನ್ನೂ ಮತ್ತು ಬಲಗೊಳ್ಳುತ್ತಿದ್ದ ಪೌರ್ವಾತ್ಯ ದೇಶಗಳ ರಾಷ್ಟ್ರೀಯ ಚಳವಳಿಗಳನ್ನೂ ಮುರಿಯಲು ಬ್ರಿಟನ್‌ ಮಾಡುತ್ತಿರುವ ಸನ್ನಾಹವೆಂದು ಕಂಡಿತು.

೧೯೨೭ ರಲ್ಲಿ ರಾಷ್ಟ್ರೀಯ ಮಹಾ ಸಭೆಯು ತನ್ನ ವಿದೇಶಾಂಗ ನೀತಿ ರೂಪಿಸಲು ಆರಂಭಿಸಿದ್ದು ಈ ಹಿನ್ನೆಲೆಯಲ್ಲಿ, ಭಾರತವು ಯಾವ ಸಾಮ್ರಾಜ್ಯದ ಯುದ್ಧದಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದೂ, ಭಾರತ ಜನತೆಯ ಅಭಿಮತ ಪಡೆಯದೆ ಯಾವ ಸಂದರ್ಭದಲ್ಲಿ ಯುದ್ಧಕ್ಕೆ ಸೇರುವಂತೆ ಭಾರತವನ್ನು ಬಲಾತ್ಕರಿಸಲಾಗದೆಂದೂ ಘೋಷಿಸಲಾಯಿತು. ಮುಂದಿನ ವರ್ಷಗಳಲ್ಲಿ ಇದೇ ಘೋಷಣೆಯನ್ನು ಮೇಲಿಂದ ಮೇಲೆ ಸಾರಿ ಅದರಂತೆ ಪ್ರಚಾರ ಮಾಡಿದೆವು. ಇದು ಕಾಂಗ್ರೆಸ್ಸಿನ ಮೂಲ ತತ್ವಗಳಲ್ಲಿ ಒಂದಾಗಿ ಕೊನೆಗೆ ಭಾರತದ ಸಾಮಾನ್ಯ ನೀತಿಯೂ ಆಯಿತು. ಯಾವ ಸಂಸ್ಥೆ ಯೂ, ವ್ಯಕ್ತಿಯೂ ಈ ನೀತಿಗೆ ವಿರೋಧ ವ್ಯಕ್ತಪಡಿಸಲಿಲ್ಲ.