ಪುಟ:ಭಾರತ ದರ್ಶನ.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ-೯

ಕೊನೆಯ ಅಂಕ (೩)

ಎರಡನೆಯ ಪ್ರಪಂಚ ಯುದ್ದ ೧, ಕಾಂಗ್ರೆಸ್ಸಿಗೊಂದು ವಿದೇಶಾಂಗ ನೀತಿ.

ಭಾರತದ ಇತರ ಎಲ್ಲ ಸಂಸ್ಥೆಗಳಂತೆ ರಾಷ್ಟ್ರೀಯ ಮಹಾ ಸಭೆಯು ಸಹ ಬಹುಕಾಲ ಒಳನಾಡಿನ ಪ್ರಶ್ನೆಗಳಲ್ಲೇ ಮಗ್ನ ವಿದ್ದು ಅಂತರರಾಷ್ಟ್ರೀಯ ಸಮಸ್ಯೆಗಳಿಗೆ ಯಾವ ಗಮನವನ್ನೂ ಕೊಟ್ಟಿರಲಿಲ್ಲ. ೧೯೨೦ ರಿಂದ ಈಚಿನ ಹತ್ತು ವರ್ಷಗಳಲ್ಲಿ ವಿದೇಶ ಪ್ರಶ್ನೆ ಗಳಲ್ಲಿ ಕಾಂಗ್ರೆಸ್ ಸ್ವಲ್ಪ ಆಸಕ್ತಿ ವಹಿಸಿತು. ಸಣ್ಣ ಸಮಾಜವಾದಿ ಮತ್ತು ಸಮತಾವಾದಿ ಪಕ್ಷಗಳ ಹೊರತು ಬೇರಾವ ಪಕ್ಷಗಳಿಗೂ ಈ ಆಸಕ್ತಿ ಇರಲಿಲ್ಲ. ಮುಸ್ಲಿಂ ಸಂಸ್ಥೆಗಳಿಗೆ ಪ್ಯಾಲಸ್ಟೆನ್ ವಿಷಯದಲ್ಲಿ ಸ್ವಲ್ಪ ಆಸಕ್ತಿ ಇತ್ತು. ಅಲ್ಲಿನ ಮುಸ್ಲಿಂ ಅರಬರೊಂದಿಗೆ ಸಹಾನುಭೂತಿ ತೋರಲು ಆಗಿಂದಾಗ ಕೆಲವು ನಿರ್ಣಯ ಮಾಡುತ್ತಿದ್ದರು, ತುರ್ಕಿ, ಈಜಿಪ್ಟ್ ಮತ್ತು ಇರಾಣ ದೇಶಗಳ ಉತ್ಕಟ ರಾಷ್ಟ್ರೀಯ ಭಾವನೆಯನ್ನು ಸ್ವಲ್ಪ ಹೆದರಿಕೆಯಿಂದಲೇ ನೋಡುತ್ತಿದ್ದರು. ಏಕೆಂದರೆ ಅವುಗಳಲ್ಲಿ ಮತೀಯ ಭಾವನೆ ಇರಲಿಲ್ಲ. ಅವು ಮತಾತೀತ ಚಳವಳಿಗಾಗಿ ದೊಡ್ಡ ದೊಡ್ಡ ಸುಧಾರಣೆಗಳ ಗುರಿ ಇಟ್ಟುಕೊಂಡಿದ್ದವು. ಇದು ಸಂಪ್ರದಾಯ ಶರಣರಾದ ಭಾರತೀಯ ಮುಸ್ಲಿಮರಿಗೆ ಸರಿಬೀಳಲಿಲ್ಲ. ಎಲ್ಲಿಯೂ ರಾಜಕೀಯ ಮತ್ತು ಆರ್ಥಿಕ ಸಾಮ್ರಾಜ್ಯ ಅಧಿಕಾರ ಇರಬಾರದು, ಸಹಕಾರ ಭಾವನೆಯಿಂದ ಸ್ವತಂತ್ರ ರಾಷ್ಟ್ರಗಳು ಬಾಳಬೇಕು ಎಂಬ ಮೂಲತತ್ವಗಳು ಕಾಂಗ್ರೆಸ್ ವಿದೇಶಾಂಗ ನೀತಿಯ ತಳಹದಿಯಾಯಿತು. ಭಾರತದ ಸ್ವಾತಂತ್ರದ ಬೇಡಿಕೆಗೆ ಇದು ಅನುಗುಣವಿತ್ತು. ೧೯೨೦ ರಲ್ಲಿ ವಿದೇ ಶಾಂಗ ನೀತಿಯ ಒಂದು ನಿರ್ಣಯದಲ್ಲಿ ಇತರ ಜನಾಂಗಗಳೊಡನೆ ಸಹಕಾರವೇ ನಮ್ಮ ನೀತಿ ಎಂದೂ, ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಸ್ನೇಹದಿಂದ ಇರುವುದೇ ನಮ್ಮ ಅಭಿಲಾಷೆಯೆಂದೂ ಕಾಂಗ್ರೆಸ್ಸು ಸಾರಿತು. ಇನ್ನೊಂದು ದೊಡ್ಡ ಯುದ್ದ ಒದಗುವ ಸಂಭವವನ್ನೂ ಯೋಚಿಸಿ ಎರಡನೆಯ ಪ್ರಪಂಚ ಯುದ್ಧ ಆರಂಭವಾಗುವ ಹನ್ನೆರಡು ವರ್ಷಗಳ ಮುಂಚೆಯೇ ೧೯೨೭ ರಲ್ಲಿ ಯುದ್ದವೇ ಒದಗಿದರೆ ತನ್ನ ವಿದೇಶಾಂಗ ನೀತಿ ಏನೆಂದು ಕಾಂಗ್ರೆಸ್ ಸ್ಪಷ್ಟ ಸಾರಿತು.

ಅದು ಹಿಟ್ಲರ್ ಇನ್ನೂ ಅಧಿಕಾರಕ್ಕೆ ಬರುವ ಐದಾರು ವರ್ಷಗಳಿಗೆ ಮುಂಚೆ; ಜಪಾನ್ ಮಂಚೂರಿಯಾ ಆಕ್ರಮಿಸುವ ಮುಂಚೆ, ಮುಸೋಲಿನಿ ಇಟಲಿಯಲ್ಲಿ ತನ್ನ ಅಧಿಕಾರ ಬಲಪಡಿಸಿಕೊಳ್ಳುತ್ತಲಿದ್ದರೂ ಪ್ರಪಂಚದ ಶಾಂತಿಗೆ ಕಂಟಕನೆಂಬ ಭಾವನೆಯು ಇನ್ನೂ ಬರುವ ಮುಂಚೆ. ಆಗ ಫ್ಯಾಸಿಸ್ಟ್ ಇಟಲಿಗೂ ಬ್ರಿಟನ್ನಿಗೂ ಸ್ನೇಹ ಭಾಂಧವ್ಯವಿತ್ತು. ಡ್ಯೂಕನನ್ನು ಕಂಡರೆ ಬ್ರಿಟಿಷ್ ರಾಜಕಾರಣಿಗಳು ಹೊಗಳುತ್ತಿದ್ದರು. ಯೂರೋಪಿನಲ್ಲಿ ಅನೇಕ ಸಣ್ಣ ಸಣ್ಣ ಸರ್ವಾಧಿಕಾರಿಗಳಿದ್ದರು. ಬ್ರಿಟನ್ನಿನೊಂದಿಗೆ ಅವರೆಲ್ಲರೂ ಸ್ನೇಹದಿಂದ ಇದ್ದರು. ಇಂಗ್ಲೆಂಡ್ ಮತ್ತು ಸೋವಿಯಟ್ ರಷ್ಯಗಳ ಸಂಬಂಧ ಮಾತ್ರ ಪೂರ್ಣ ಕಡಿದು ಹೋಗಿತ್ತು. ಆದ್ರೂಸ್ ದಂಡಯಾತ್ರೆ ಮುಗಿದು ರಾಯಭಾರಿಗಳನ್ನು ಪರಸ್ಪರ ಹಿಂದಕ್ಕೆ ಕರೆಸಿಕೊಂಡಿದ್ದರು. ರಾಷ್ಟ್ರ ಸಂಘದಲ್ಲಿ, ಅಂತರ ರಾಷ್ಟ್ರೀಯ ಶ್ರಮಜೀವಿ ಸಂಘದ ಕಚೇರಿಯಲ್ಲಿ ಬ್ರಿಟಿಷ್ ಮತ್ತು ಫ್ರೆಂಚರ ನೀತಿಯು ಸ್ಪಷ್ಟ ಪ್ರತಿಗಾಮಿ ಸ್ವಭಾವ ತಾಳಿತು. ಶಸ್ತ್ರ ಸಂನ್ಯಾಸದ ಕೊನೆಗಾಣದ ಚರ್ಚೆಯಲ್ಲಿ ರಾಷ್ಟ್ರ ಸಂಘದ ಪ್ರತಿಯೊಂದು ರಾಷ್ಟ್ರವೂ-ಅಮೆರಿಕದ ಸಂಯುಕ್ತ ಸಂಸ್ಥಾನಗಳು ಸಹ ಸೇರಿ-ವಿಮಾನ ಮುತ್ತಿಗೆಯನ್ನು ಯಾರೂ ಮಾಡಬಾರದೆಂದು ಪೂರ್ಣ ನಿಷೇಧಿಸಲು ಸಿದ್ಧವಿದ್ದವು. ಆದರೆ ಬ್ರಿಟನ್ ಮಾತ್ರ ಕೆಲವು ತಿದ್ದುಪಡಿಗಳೊಂದಿಗೆ ಆ ನಿರ್ಣಯವನ್ನು ಒಪ್ಪಿತು. ಅನೇಕ ವರ್ಷಗಳಿಂದ ಬ್ರಿಟಿಷ್ ಸರಕಾರ ಪೊಲೀಸ್ ಕಾರಗಳಿಗೆಂದು ಇರಾಕ್ ಮತ್ತು ವಾಯವ್ಯ ಪ್ರಾಂತದ ಹಳ್ಳಿಗಳು ಮತ್ತು ಪಟ್ಟಣಗಳ ಮೇಲೆ ಬಾಂಬು ಹಾಕುತ್ತಲಿತ್ತು. ಈ ಹಕ್ಕನ್ನು ಬಿಟ್ಟು ಕೊಡಲು ಬ್ರಿಟನ್