ಈಗಿರುವ ಕೆಲವು ಕೈಗಾರಿಕೆಗಳು, ಮುಖ್ಯವಾಗಿ ಬಟ್ಟೆ ಗಿರಣಿಗಳು, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, ಸೆಣಬಿನ ಕೈಗಾರಿಕೆ ಬಹಳ ಅಭಿವೃದ್ಧಿ ಪಡೆದಿವೆ ನಿಜ. ಕೈಗಾರಿಕೋದ್ಯಮಿಗಳಲ್ಲಿ, ಯುದ್ದ ಕಂಟ್ರಾಕ್ಟರುಗಳಲ್ಲಿ, ಕಳ್ಳ ಪೇಟೆಯ ಲಾಭ ಬಡಕರಲ್ಲಿ ಕೋಟ್ಯಧೀಶ್ವರರ ಸಂಖ್ಯೆ ಹೆಚ್ಚಿದೆ. ಹೆಚ್ಚಿನ ವರಮಾನ ತೆರಿಗೆ ವಿಧಿಸಿದ್ದರೂ ಭಾರತದಲ್ಲಿ ಮೇಲ್ಮಟ್ಟದ ಕೆಲವು ಜನರ ಕೈಯಲ್ಲಿ ಅಪಾರ ಹಣ ಸಂಗ್ರಹವಾಗಿದೆ. ಆದರೆ ಕೂಲಿಗಾರರ ಸ್ಥಿತಿ ಮಾತ್ರ ಸ್ವಲ್ಪವೂ ಉತ್ತಮಗೊಂಡಿಲ್ಲ. ಲೇಬರ್ ನಾಯಕರಾದ ಶ್ರೀ ಎನ್. ಎಮ್. ಜೋಶಿ ಕೂಲಿಗಾರರ ಪರಿಸ್ಥಿತಿ ಯುದ್ಧ ಕಾಲದಲ್ಲಿ ಇನ್ನೂ ಹದಗೆಟ್ಟಿದೆ ಎಂದರು. ಜಮೀನುದಾರರು, ಮಧ್ಯ ತರಗತಿಯ ವ್ಯವಸಾಯಗಾರರು ಮುಖ್ಯವಾಗಿ ಪಂಜಾಬ ಮತ್ತು ಸಿಂಧ ಪ್ರಾಂತ್ಯಗಳಲ್ಲಿ ಲಾಭ ಪಡೆದಿದ್ದಾರೆ. ಆದರೆ ವ್ಯವಸಾಯವನ್ನೇ ನಂಬಿರುವ ಬಡಜನಕೋಟಿಯು ಯುದ್ದ ಪರಿಸ್ಥಿತಿಯಿಂದ ಪೆಟ್ಟು ತಿಂದು ಬಹಳ ನಷ್ಟ ಹೊಂದಿದ್ದಾರೆ. `ಹಣದ ಬೆಲೆಯ ಇಳಿತದಿಂದ ಮತ್ತು ಸಾಮಾನಿನ ಧಾರಣೆ ಏರುವಿಕೆಯಿಂದ ಕೊಳ್ಳುವವರಂತೂ ಕುಗ್ಗಿ ಹೋಗಿದ್ದಾರೆ.
೧೯೪೨ ರ ಮಧ್ಯಭಾಗದಲ್ಲಿ ಭಾರತದಲ್ಲಿ ಇರುವ ಕೈಗಾರಿಕೆಗಳನ್ನು ಪರೀಕ್ಷೆಮಾಡಿ ಯುದ್ದ ಕಾರಗಳಿಗಾಗಿ ಯಾವ ರೀತಿ ವಸ್ತು ನಿರ್ಮಾಣ ಹೆಚ್ಚಿಸಬೇಕೆಂದು ಸಲಹೆಮಾಡಲು ಅಮೆರಿಕೆಯ ಗ್ರೇಡಿ ಸಮಿತಿಯು ಭಾರತಕ್ಕೆ ಬಂದಿತು. ಅವರಿಗೆ ಬೇಕಾಗಿದ್ದುದು ಯುದ್ದಕ್ಕೆ ಸಹಾಯವಾಗಲೆಂದು ಮಾತ್ರ. ಪ್ರಾಯಶಃ ಇಂಡಿಯಾ ಸರಕಾರಕ್ಕೆ ಒಪ್ಪಿಗೆ ಇಲ್ಲದೆ ಆ ಸಮಿತಿಯ ವರದಿ ಬೆಳಕಿಗೆ ಬರಲೇ ಇಲ್ಲ. ಅವರ ಕೆಲವು ಸಲಹೆಗಳೇನೋ ಬೆಳಕಿಗೆ ಬಂದವು. ಪವರ್ ಆಕ್ಕೋಹಾಲ್ ತಯಾರಿಕೆ, ಹೆಚ್ಚಿನ ಉಕ್ಕಿನ ತಯಾರಿಕೆ, ಹೆಚ್ಚು ವಿದ್ಯುಚ್ಛಕ್ತಿ ಉತ್ಪಾದನೆ, ಅಲ್ಯುಮಿನಿಯಮ್ ಮತ್ತು ಶುದ್ದ ಗಂಧಕದ ಉತ್ಪಾದನೆ ಮತ್ತು ಬೇರೆ ಬೇರೆ ಕೈಗಾರಿಕೆಗಳನ್ನು ಉತ್ತಮಗೊಳಿಸುವುದು ಇವೇ ಕೆಲವು ಅವರ ಸಿಫಾರಸುಗಳು, ಅಮೆರಿಕದಂತೆ ಸರ ಕಾರದ ಅಧೀನ ಒಳಪಡದ ಪೂರ್ಣಾಧಿಕಾರದ ಸ್ವತಂತ್ರ ಸಂಸ್ಥೆಗಳು ವಸ್ತುನಿರ್ಮಾಣದ ಪ್ರಗತಿ ನೋಡಿ ಕೊಳ್ಳುತ್ತಿರಬೇಕೆಂದು ಸಹ ಸಲಹೆ ಮಾಡಿದರು. ಮಹಾ ಯುದ್ಧದ ಪರಿಸ್ಥಿತಿಯಿಂದ ಸಹ ಯಾವ ವ್ಯತ್ಯಾಸ ಹೊಂದದ, ಇಂಡಿಯ ಸರ್ಕಾರದ ಅನಿಶ್ಚಿತ, ನಿಧಾನ, ದಕ್ಷತೆ ಶೂನ್ಯ, ರೀತಿನೀತಿಗಳು ಪ್ರಾಯಶಃ ಗ್ರೇಡಿ ಸಮಿತಿಯವರಿಗೆ ಸರಿಬರಲಿಲ್ಲವೆಂದು ತೋರುತ್ತದೆ. ಪೂರ್ಣ ಭಾರತೀಯರಿಂದಲೇ ನಡೆಯುತ್ತಿದ್ದ ತಾತಾ ಉಕ್ಕಿನ ಕಾರ್ಖಾನೆಯ ದಕ್ಷತೆ ಕಂಡು ಮೆಚ್ಚಿದರು, ತಮ್ಮ ತಾತ್ಕಾಲಿಕ ವರದಿಯಲ್ಲಿ “ ಭಾರತೀಯ ಕೂಲಿಗಾರರ ಉತ್ತಮ ಕೆಲಸವನ್ನಾದರೂ ನಿರ್ವಹಿಸಬಲ್ಲ ಶಕ್ತಿ ಕಂಡು ಈ ಸಮಿತಿಗೆ ತೃಪ್ತಿಯಾಗಿದೆ: ಭಾರತೀಯರು ಕುಶಲಕರ್ಮಿಗಳು, ಕೆಲಸದ ಭದ್ರತೆ, ಉತ್ತಮ ತೃಪ್ತಿಕರ ಸನ್ನಿವೇಶ ಮಾತ್ರ ದೊರೆತರೆ ಅವರು ಉದ್ಯೋಗ ಕುಶಲರು ಮತ್ತು ನಂಬಿಕಸ್ಥರು ” ಎಂದು ಹೇಳಿದ್ದಾರೆ.*
ಕಳೆದ ಎರಡು ಮೂರು ವರ್ಷಗಳಲ್ಲಿ ರಾಸಾಯನಿಕ ಕೈಗಾರಿಕೆಯು ಭಾರತದಲ್ಲಿ ತುಂಬ ಪ್ರಗತಿ ಹೊಂದಿದೆ ; ಹಡಗು ನಿರ್ಮಾಣ ಕಾರವೂ ಮುಂದುವರಿದಿದೆ ; ವಿಮಾನ ತಯಾರಿಕೆಯೂ ಶೈಶವಾವಸ್ಥೆಯಲ್ಲಿದೆ. ಯುದ್ಧ ಕಾಲದ ಎಲ್ಲ ಕೈಗಾರಿಕೆಗಳೂ-ಸೆಣಬು, ಮತ್ತು ಬಟ್ಟೆ ಗಿರಣಿಗಳು ಸಹ- ಹೆಚ್ಚಿನ ತೆರಿಗೆ ವಿಧಿಸಿದ್ದರೂ ಅಪಾರ ಲಾಭ ಸಂಪಾದಿಸಿವೆ. ಬೇಕಾದಷ್ಟು ಬಂಡವಾಳವೂ ಸಂಗ್ರಹವಾಗಿದೆ. ಹೊಸ ಕೈಗಾರಿಕೋದ್ಯಮಗಳಿಗೆ ಹೊಸ ಬಂಡವಾಳ ಎತ್ತಬಾರದೆಂದು ಸರಕಾರ ಬಂಡವಾಳ ಶೇಖರಣೆಗೆ ನಿರ್ಬಂಧ ಹಾಕಿತ್ತು. ಈಚೆಗೆ ಈ ನಿರ್ಬಂಧ ಸಡಿಲಿಸಿದ್ದರೂ ಯುದ್ಧ ಮುಗಿಯುವವರೆಗೆ ಏನೂ ಆಗಲಾರದು. ಈ ಸ್ವಲ್ಪ ಅವಕಾಶದಿಂದ ದೊಡ್ಡ ಕೈಗಾರಿಕೋದ್ಯಮಿಗಳಲ್ಲಿ ಕಾಠ್ಯ ಚಟುವಟಿಕೆ ಹೆಚ್ಚಿ ದೊಡ್ಡ ಕೈಗಾರಿಕಾ ಯೋಜನೆಗಳು ರೂಪುಗೊಳ್ಳುತ್ತಿವೆ. ಕೈಗಾರಿಕಾ ಪ್ರಗತಿಗೆ ಅವಕಾಶವೇ ಇಲ್ಲದಿದ್ದ ಭಾರತ ಸಹ ದೊಡ್ಡ ಕೈಗಾರಿಕೋದ್ಯಮದ ಮುಂಬೆಳಗಿನಲ್ಲಿರುವಂತೆ ತೋರುತ್ತಿದೆ.
* ಗ್ರೇಡಿ ಸಮಿತಿಯ ವರದಿಯನ್ನು ಪ್ರಕಟಿಸದಿದ್ದುದಕ್ಕೆ ಮುಂಬೈ ನಗರದ 'ಕಾಮರ್ಸ್' ಪತ್ರಿಕೆ ೧೦೪೨ನೇ ನವಂಬರ್ ೨೮ರಲ್ಲಿ-
"ಈ ದೇಶದ ಕೈಗಾರಿಕಾ ಪ್ರಗತಿಗೆ ಅಡ್ಡ ಬರಬೇಕೆಂದು ಪಾಶ್ಚಾತ್ಯ ದೇಶಗಳ ಪ್ರಬಲ ಬಲಿಹ ವಿದೇಶೀ ಬಂದ ವಲಗಾರರು ವಿಶ್ವ ಪ್ರಯತ್ನ ಮಾಡುತ್ತಿದ್ದಾರೆಂಬುದನ್ನು ಮರೆಯಲಾಗದು, ಯುದ್ಧಾನಂತರದಲ್ಲಿ ಇದೇಶಗಳಿಂದ ತಮಗೆ ಯಾವ ಪೈಪೋಟಿಯೂ ಇರಬಾರದೆಂದೇ ಅವರ ಉದ್ದೇಶ” ಎಂದು ಹೇಳಿದೆ.