ಪುಟ:ಭಾರತ ದರ್ಶನ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೨

ಭಾರತ ದರ್ಶನ

ಅದೇ ಏಪ್ರಿಲ್‌ನಲ್ಲಿ ೧೦೯೨ ಕ್ಕೆ ಇಳಿಯಿತು ; ಪುನಃ ಜುಲೈನಲ್ಲಿ ೧೬:೨ ಕ್ಕೆ ಏರಿತು. ಸಿಡಿಮದ್ದಿನ ಕೈಗಾರಿಕೆ ಮತ್ತು ರಾಸಾಯನಿಕ ಕೈಗಾರಿಕೆಗಳು ಇದರಲ್ಲಿ ಸೇರಿಲ್ಲವಾದ್ದರಿಂದ ಈ ಸಂಖ್ಯೆಗಳು ಅಷ್ಟು ಕರಾರುವಾಕ ಅಲ್ಲ. ಆದರೂ ಅದಕ್ಕೂ ಒಂದು ಬೆಲೆ ಮತ್ತು ಪ್ರಾಮುಖ್ಯತೆ ಇದೆ.

ಸಿಡಿಮದ್ದಿನ ಕಾರ್ಖಾನೆಯೊಂದು ಬಿಟ್ಟರೆ ೧೯೪೨ ನೆ ಜುಲೈನಲ್ಲಿ ಸಹ ಭಾರತದ ಕೈಗಾರಿಕಾ ಪ್ರಗತಿ ಯುದ್ದಕ್ಕೆ ಪೂರ್ವ ಎಷ್ಟಿತ್ತೊ ಅಲ್ಲಿಂದ ಬಹಳ ಮುಂದುವರಿಯಲಿಲ್ಲ. ೧೯೪೨ನೆ ಜುಲೈನಲ್ಲಿ ಸ್ವಲ್ಪ ಉತ್ತಮಗೊಂಡು ೧೨೭ಕ್ಕೆ ಏರಿ ಪುನಃ ಕಡಮೆಯಾಯಿತು. ಆದರೂ ಕೈಗಾರಿಕೆಗಳಿಗೆ ಕೊಟ್ಟ ಸರಕಾರದ ಬೇಡಿಕೆಯ ಬೆಲೆ ಮಾತ್ರ ಏರುತ್ತಲೇ ಇತ್ತು. ೧೯೩೯-೪೦ರಲ್ಲಿ ಅಕ್ಟೋಬರ್‌ನಿಂದ ಮಾರ್ಚಿವರೆಗಿನ ಆರು ತಿಂಗಳಿನಲ್ಲಿ ಅನ್‌ಲಿತ್ ಗೌ ಹೇಳಿಕೆಯಂತೆಯೇ ಅವುಗಳ ಬೆಲೆ ೨೯೦ ಕೋಟಿ ರೂಪಾಯಿ ; ೧೯೪೨ರಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ ೧೩೭ ಕೋಟಿ ರೂಪಾಯಿ.

ಆದ್ದರಿಂದ ಈ ಎಲ್ಲ ದೊಡ್ಡ ಯುದ್ದದ ಬೇಡಿಕೆಗಳನ್ನು ತೆಗೆದುಕೊಂಡರೆ ಕೈಗಾರಿಕೋತ್ಪತ್ತಿ ಹೆಚ್ಚಿತೆಂದಲ್ಲ; ಆದರೆ ಸಾಧಾರಣ ಉತ್ಪತ್ತಿಯನ್ನೆಲ್ಲ ಸಂಪೂರ್ಣ ಯುದ್ದ ಸರಬರಾಜಿಗೆ ತಿರುಗಿಸಿದಂತೆ, ತಾತ್ಕಾಲಿಕವಾಗಿ ಯುದ್ಧದ ಅವಶ್ಯಕತೆ ಪೂರೈಸಿದರೂ ಸಾಮಾನ್ಯ ಜನರ ಅವಶ್ಯಕತೆಯ ಪೂರೈಕೆ ಬಹಳ ಹಿಂದೆಬಿತ್ತು. ಇದರಿಂದ ವಿಶೇಷ ಪರಿಣಾಮಗಳಾದವು. ಲಂಡನ್‌ನಲ್ಲಿ ಭಾರತದ ಪರವಾಗಿ ಸ್ಟರ್ಲಿಂಗ್ ಮೊತ್ತವು ಏರುತ್ತ ಬಂದಿತು ; ಭಾರತದಲ್ಲಿ ಕೇವಲ ಸ್ವಲ್ಪ ಜನರ ಕೈಯಲ್ಲಿ ಹಣ ಸಂಗ್ರಹವಾಯಿತು ; ಜನತೆಗೆ ಬೇಕಾದ ಜೀವನಾವಶ್ಯಕತೆಗಳು ದೊರೆಯದಾದವು ; ಎಲ್ಲರ ಕೈಯಲ್ಲೂ ಕಾಗದದ ಹಣ ಮಾತ್ರ ಹೆಚ್ಚುತ್ತ ಬಂದಿತು ; ಸಾಮಾನುಗಳ ಬೆಲೆ ಅತ್ಯಧಿಕವಾಯಿತು. ೧೯೪೨ರ ಮಧ್ಯದಲ್ಲಿಯೇ ಆಹಾರದ ಅಭಾವ ಆರಂಭವಾಯಿತು. ೧೯೪೩ನೆಯ ಚಳಿಗಾಲದಲ್ಲಿ ಬಂಗಾಲ ಮತ್ತು ಭಾರತದ ಇತರ ಕಡೆಗಳಲ್ಲಿ ಕಾಮದಿಂದ ಕೋಟಿಗಟ್ಟಲೆ ಜನ ಸತ್ತರು. ಯುದ್ಧದ ಹೊರೆಯೂ, ಅದರ ಸಂಬಂಧದಲ್ಲಿ ಅಧಿಕಾರಿವರ್ಗ ಅನುಸರಿಸಿದ ನೀತಿಯೂ ಭಾರತದ ಅಶಕ್ತ ಜನಕೋಟಿಯ ಮೇಲೆ ಬಿದ್ದು ಲಕ್ಷಾಂತರ ಜನರು ಹೊಟ್ಟೆಗಿಲ್ಲದೆ ಹಸಿವಿನಿಂದ ಕ್ಷಯಿಸಲಾರಂಭಿಸಿದರು.

ನಾನು ಕೊಟ್ಟಿರುವ ಅಂಕಿ ಅಂಶಗಳು ೧೯೪೨ಕ್ಕೆ ಮುಗಿಯುತ್ತವೆ. ಈಚಿನವು ನನ್ನಲ್ಲಿ ಇಲ್ಲ. ಅಲ್ಲಿಂದೀಚೆಗೆ ಅನೇಕ ಬದಲಾವಣೆಗಳಾಗಿವೆ. ಪ್ರಾಯಶಃ ಭಾರತದ ಕೈಗಾರಿಕೋದ್ಯಮದ ಇಂಡೆಕ್ ಸಂಖ್ಯೆ ಈಗ ಹೆಚ್ಚಿರಬಹುದು. ಆದರೆ ಈ ಸಂಖ್ಯೆಗಳಿಂದ ದೊರೆಯುವ ಚಿತ್ರದಲ್ಲಿ ಸಹ ಮೂಲ ನಿಲುವಿನಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಅದೇ ನೀತಿಯೇ ಈಗಲೂ ಅನುಷ್ಠಾನದಲ್ಲಿದೆ, ಒಂದರ ಮೇಲೊಂದು ಅದೇ ಸಮಸ್ಯೆಗಳೇ ಏಳುತ್ತಿವೆ ; ತಾತ್ಕಾಲಿಕವಾಗಿ ಅದೇ ರೀತಿ ತೇಪೆ ತಿದ್ದುವ ಕೆಲಸ ನಡೆದಿದೆ ; ಯಾವ ಒಂದು ಯೋಜನೆ ಅಥವ ಸಮಗ್ರ ದೃಷ್ಟಿ ಈಗಲೂ ಇಲ್ಲ ; ಈಗಲೂ ಮುಂದೆಯೂ ಬ್ರಿಟಿಷ್ ಕೈಗಾರಿಕೆಗೆ ಅದೇ ಪಕ್ಷಪಾತ ದೊರೆಯುತ್ತಿದೆ. ಈ ಮಧ್ಯೆ ಜನರು ಆಹಾರವಿಲ್ಲದೆ ರೋಗೋಪದ್ರವಗಳಿಗೆ ತುತ್ತಾಗಿ ಹುಳುಗಳಂತೆ ಸಾಯುತ್ತಿದಾರೆ.
——————
*ಅದು ಸರಿಯಲ್ಲ. ೧೯೪೪ನೇ ಮಾರ್ಚಿ ೯ ರ ಕಲ್ಕತ್ತ ಕ್ಯಾಪಿಟಲ್ ಪತ್ರಿಕೆಯ ಸಂಖ್ಯೆಗಳಂತೆ
(೧೯೩೫-೩೬-೧೦೦) ೧೯೩೮-೩೯ .... .... ೧೧೧.೧
೩೯-೪೦.... .... ೧೧೪.೦
೪೦-೪೧ .... .... ೧೧೭.೩
೪೧-೪೨ .... .... ೧೧೭.೭
೪೨-೪೩ .... ....೧೦೮.೮ (ಅಂದಾಜು)
೪೪ನೆಯ ಜನವರಿ .... ....೧೧೧.೭
ಇದರಲ್ಲಿ ಶಸ್ತ್ರಗಳ ತಯಾರಿಕೆ ಸೇರಿಲ್ಲ. ಈ ರೀತಿ ನಾಲ್ಕು ವರ್ಷಗಳ ಯುದ್ಧದ ನಂತರ
ಕೈಗಾರಿಕೋತ್ಪತ್ತಿ ಯುದ್ಧ ಪೂರ್ವಕ್ಕಿಂತ ಹಿಂದೆ ಬಿದ್ದಿದೆ.