೧೯೩೯ ರ ಕೊನೆಯಲ್ಲಿ ಅಥವ ೧೯೪೦ ರ ಆದಿಯಲ್ಲಿ ಭಾರತದಲ್ಲಿ ವಿಮಾನ ಕೈಗಾರಿಕೆ ಆರಂಭಿಸಲು ಪ್ರಯತ್ನ ನಡೆಯಿತು. ಪುನಃ ಅಮೆರಿಕೆಯ ಕಾರ್ಖಾನೆಯೊಂದಿಗೆ ಒಪ್ಪಂದ ಮಾಡಿಕೊಂಡು ಇಂಡಿಯ ಸರಕಾರಕ್ಕೂ, ಕೇಂದ್ರ ಸೈನ್ಯ ಕಚೇರಿಗೂ ಒಪ್ಪಿಗೆ ಕೊಡಲು ಆತುರದ ತಂತಿಗಳು ಹೋದವು. ಉತ್ತರವೇ ಇಲ್ಲ. ಪದೇ ಪದೇ ಜ್ಞಾಪಿಸಿದ್ದಕ್ಕೆ ಯೋಜನೆ ಒಪ್ಪಲು ಸಾಧ್ಯವಿಲ್ಲವೆಂದು ಉತ್ತರ, ಇಂಗ್ಲೆಂಡ್ ಮತ್ತು ಅಮೆರಿಕೆಯಲ್ಲಿ ವಿಮಾನ ಕೊಳ್ಳಲು ಸಾಧ್ಯವಿರುವಾಗ ಭಾರತದಲ್ಲಿ ವಿಮಾನ ತಯಾರಿಸುವುದೆಂದರೇನು ?
ಯುದ್ದಕ್ಕೆ ಮುಂಚೆ ಅನೇಕ ಔಷಧಗಳು, ಔಷಧದ್ರವ್ಯಗಳು, ಮತ್ತು ವ್ಯಾಕ್ಸಿನ್‌ಗಳು ಜರ್ಮನಿ ಯಿಂದ ಭಾರತಕ್ಕೆ ಬರುತ್ತಿದ್ದವು. ಯುದ್ಧದಿಂದ ಇದು ನಿಂತುಹೋಯಿತು. ಮುಖ್ಯ ಕೆಲವು ವ್ಯಾಕ್ಸಿನ್ ಗಳನ್ನೂ ಔಷಧಿಗಳನ್ನೂ ಭಾರತದಲ್ಲಿಯೇ ತಯಾರಿಸಲು ಏರ್ಪಾಟು ಮಾಡಬೇಕೆಂದು ಸಲಹೆ ಮಾಡ ಲಾಯಿತು. ಕೆಲವು ಸರಕಾರಿ ಸಂಸ್ಥೆಗಳಲ್ಲಿ ಸುಲಭವಾಗಿ ತಯಾರಿಸಲು ಸಾಧ್ಯವಿತ್ತು. ಸರಕಾರವು ಇದನ್ನೂ ಒಪ್ಪಲಿಲ್ಲ. ಏನು ಬೇಕಾದರೂ ಇಂಪೀರಿಯಲ್ ಕೆಮಿಕಲ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಪಡೆಯಬಹುದೆಂದು ವಾದಮಾಡಿತು. ಅದೇ ವಸ್ತುವನ್ನು ಭಾರತದಲ್ಲಿ ಇನ್ನೂ ಸುಲಭ ಬೆಲೆಯಲ್ಲಿ ಮಾಡಬಹುದೆಂದೂ, ಯಾವ ಲಾಭ ಬಡಕತನವೂ ಇಲ್ಲದೆ ಯುದ್ದಕ್ಕೂ ಸಾರ್ವಜನಿಕರಿಗೂ ಉಪಯೋಗವಾಗುವುದೆಂದೂ ತಿಳಿಸಿದರೆ ಮುಖ್ಯ ರಾಜನೀತಿಯ ದೃಷ್ಟಿ ಬೇರೆ ಇರುವಾಗ ಅಲ್ಪ ವಿಷಯಗಳಿಗೆ ಗಮನ ಕೊಡಲು ಸಾಧ್ಯವಿಲ್ಲವೆಂದು ಉತ್ತರ ಬಂದಿತು. “ ಸರ್ಕಾರ ವ್ಯಾಪಾರ ಸಂಸ್ಥೆಯಲ್ಲ ” ಎಂಬ ವಾದ !
ಸರಕಾರವೇನೋ ವ್ಯಾಪಾರ ಸಂಸ್ಥೆಯಲ್ಲವೆನ್ನುವುದು ನಿಜ. ಆದರೆ ವ್ಯಾಪಾರ ಸಂಸ್ಥೆಗಳಲ್ಲೇ ಅದರ ಆಸಕ್ತಿ ಹೆಚ್ಚು. ಅವುಗಳಲ್ಲಿ ಇಂಪೀರಿಯಲ್ ಕೆಮಿಕಲ್ಸ್ ಒಂದು ಮುಖ್ಯ ಸಂಸ್ಥೆ. ಈ ದೊಡ್ಡ ಸಂಸ್ಥೆಗೆ ವಿಶೇಷ ಸೌಲಭ್ಯ ಕೊಡಲಾಯಿತು. ಈ ಸೌಲಭ್ಯಗಳಲ್ಲದೇನೇ ಅದರ ಸೌಕಯ್ಯವೂ ಸಂಪತ್ತೂ ಅಪಾರವಿತ್ತು. ಪ್ರಾಯಶಃ ತಾತಾ ಕಂಪೆನಿಯೊಂದನ್ನು ಬಿಟ್ಟರೆ ಬೇರೆ ಯಾರಿಗೂ ಅದ ರೊಡನೆ ಪೈಪೋಟಿ ನಡೆಸಲು ಸಾಧ್ಯವಿರಲಿಲ್ಲ. ಈ ಸೌಕಯ್ಯಗಳಲ್ಲದೆ ಅದಕ್ಕೆ ಇಂಡಿಯ ಸರಕಾರ ಮತ್ತು ಇಂಗ್ಲೆಂಡಿನ ಅತ್ಯುನ್ನತ ಅಧಿಕಾರಿವರ್ಗದ ಬೆಂಬಲವಿತ್ತು, ವೈಸರಾಯ್ ಪದವಿ ಬಿಟ್ಟ ಕೆಲವು ತಿಂಗಳಲ್ಲೇ ಲಾರ್ಡ್ ಲಿನ್ಲಿತ್ಗೊ ಅದರ ಡೈರೆಕ್ಟರ್ ಆದ. ಇಂಗ್ಲೆಂಡಿನ ಭಾರಿ ಬಂಡವಾಳಗಾರರಿಗೂ ಇಂಡಿಯ ಸರಕಾರಕ್ಕೂ ಸಂಬಂಧ ಏನಿತ್ತು ಮತ್ತು ಅದು ಭಾರತ ಸರಕಾರದ ನೀತಿಯನ್ನು ಹೇಗೆ ರೂಪಿಸುತ್ತಿತ್ತು ಎಂಬುದಕ್ಕೆ ಇದೊಂದು ನಿದರ್ಶನವೇ ಸಾಕು, ಭಾರತದ ವೈಸರಾಯ್ ಪದವಿಯಲ್ಲಿರುವಾಗ ಸಹ ಇಂಪೀರಿಯಲ್ ಕೆಮಿಕಲ್ಸ್‌ನಲ್ಲಿ ಲಾರ್ಡ್ಲಿನ್‌ಲಿತ್ಗೊ ದೊಡ್ಡ ಷೇರುದಾರನಾಗಿರಬೇಕು. ಏನೆ ಇರಲಿ ಭಾರತದೊಂದಿನ ಸಂಬಂಧದ ಘನತೆ ಮತ್ತು ವೈಸರಾಯ್ ಆಗಿ ದೊರೆತ ವಿಶೇಷ ವಿಷಯಜ್ಞಾನ ಎಲ್ಲವೂ ಈಗ ಇಂಪೀರಿಯಲ್ ಕೆಮಿಕಲ್ಸ್ ಕಂಪೆನಿಗೆ ದೊರೆತಿದೆ.
“ಯುದ್ಧ ಸಾಮಗ್ರಿ ಒದಗಿಸುವುದರಲ್ಲಿ ನಾವು ಅದ್ಭುತ ಸಾಹಸ ಸಾಧಿಸಿದ್ದೇವೆ. ಭಾರತದ ಸಹಾ ಯದ ಪ್ರಾಮುಖ್ಯತೆ ಮತ್ತು ಬೆಲೆ ಅತ್ಯಧಿಕವಿದೆ. ಮೊದಲು ಆರು ತಿಂಗಳಲ್ಲಿ ನಮ್ಮ ಬೇಡಿಕೆಯ ಬೆಲೆ ಸುಮಾರು ೨೯ ಕೋಟಿ ರೂಪಾಯಿಗಳೂ ಅನಂತರ ೧೯೪೨ನೆಯ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ ೧೩೬ ಕೋಟಿ ರೂಪಾಯಿಗಳೂ ಇತ್ತು. ೧೯೪೨ನೆಯ ಅಕ್ಟೋಬರ್‌ವರೆಗಿನ ಒಟ್ಟು ಬೆಲೆ ೪೨೮ ಕೋಟ ರೂಪಾಯಿ. ಇದರಲ್ಲಿ ಸಿಡಿಮದ್ದಿನ ಕಾರ್ಖಾನೆಗಳಲ್ಲಿ ನಡೆದ ಕೆಲಸದ ಬೆಲೆ ಸೇರಿಲ್ಲ. ಅದೂ ಅಪಾರ ವಿದೆ.” ಎಂದು ೧೯೪೨ನೆ ಡಿಸೆಂಬರ್‌ನಲ್ಲಿ ಲಾರ್ಡ್ ಲಿನ್ ಲಿತ್ಗೆ ಹೇಳಿದ. ಇದರಲ್ಲಿ ಎಳ್ಳಷ್ಟೂ ಸುಳ್ಳಲ್ಲ. ಅದರ ನಂತರ ಯುದ್ಧ ಸಲಕರಣೆಗಳ ಸರಬರಾಜಿಗಾಗಿ ಭಾರತವು ಮಾಡಿದ ಸಹಾಯ ಇನ್ನೂ ಇಮ್ಮಡಿಸಿದೆ. ಇದರಿಂದ ಹೆಚ್ಚು ಕೈಗಾರಿಕಾ ಪ್ರಗತಿಯಾಗಿರಬೇಕು ಅಥವ ವಸ್ತು ನಿರ್ಮಾಣ ಕಾರ್ ಅಧಿಕಗೊಂಡಿರಬೇಕು ಎಂದು ಊಹೆ ಮಾಡಬಹುದು. ಆದರೆ ಆ ಊಹೆಗೆ ಯಾವ ಆಧಾರವೂ ಇಲ್ಲ. ೧೯೩೫ ರ ಕೈಗಾರಿಕೋತ್ಪತ್ತಿ ೧೦೦ ಎಂದು ಆಧಾರವಾಗಿ ಇಟ್ಟುಕೊಂಡರೆ ೧೯೩೮-೩೯ರಲ್ಲಿ ೧೧೧>೧ ; ೧೯೩೯-೪೦ರಲ್ಲಿ ೧೧೪-೦, ೧೯೪೦-೪೧ರಲ್ಲಿ ೧೧೨-೧ ರಿಂದ ೧೨೭; ೧೯೪೨ ನೇ ಮಾರ್ಚಿಯಲ್ಲಿ ೧೮೮-೯;