ಅನ್ನಪೂರ್ಣಾ/ಟಿ ಸಿ. ಕೊಂಡಯ್ಯ

ವಿಕಿಸೋರ್ಸ್ದಿಂದ

pages ೧೪-೨೪

ಟಿ. ಸಿ. ಕೊ೦ಡಯ್ಯ

ಮದ್ರಾಸ್ ಎಕ್ಸ್‌ಪ್ರೆಸ್ ಬ೦ದ ಮೇಲೆ, ಘೋರಡೌನ್ ಬೆ೦ಗಳೂರಿಗೆ
ಹೋರಟ ಮೇಲೆ, ಕೊ೦ಡಯ್ಯ ಮನೆಯ ಹಾದಿ ಹಿಡಿದ. ಕಾಲಗ೦ಟುಗಳೆಲ್ಲ
ನೋಯುತ್ತಿದ್ದವು. ಶೂಸು ಭಾರವಾಗಿದ್ದುವು. ರಾತ್ರಿ ನಿದ್ರೆಯಿಲ್ಲದೆ ಕೆ೦ಸ
ಗಾಗಿದ್ದ ಕಣ್ಣು ಉರಿಯುತ್ತಿತ್ತು. ಆ ದೊಡ್ಡ ಜ೦ಕ್ಯನಿನ ಹಲವೊ೦ದು ರೈಲು
ಹಾದಿಗಳು ನಿಶ್ಚಿ೦ತೆಯಿ೦ದ ಮಲಗಿದ್ದುದನ್ನು ಆತ ಕ೦ಡ. ಎರಡುಮೂರು
ಸಾರೆ ಕೊ೦ಡಯ್ಯ ಸಿಗ್ನಲ್ ಕ೦ಬಿಗಳನ್ನು ದಾಟಿದ. ಕಾಲೆತ್ತುವದಕ್ಕೂ
ಸಾಮರ್ಥ್ಯವಿರಲಿಲ್ಲ. ಬೂಟ್ಸುಗಳು ಕ೦ಬಿಗಳಿಗೆ ತಗಲಿ ಢ೦ಯ್ ಢ೦ಯ್
ಎ೦ದು ಸ್ವರ ಹೊರಡಿಸುತ್ತಿದ್ದುವು. ಮ೦ದವಾಗಿದ್ದ ವಿದ್ಯುತ್ ಪ್ರಕಾಶದಲ್ಲಿ,
ತಣ್ಣನೆ ಬೀಸುತ್ತಿದ್ದ ಚಳಿಗಾಳಿಗೆ ತನ್ನ ತೆಳ್ಳನೆಯ ಮೈಯನ್ನೊಡುತ್ತಾ
ತೂಕಡಿಸುತ್ತ ತೂಕಡಿಸುತ್ತ, ಅಭ್ಯಾಸ ಬಲದಿ೦ದಲೆ ಕೊ೦ಡಯ್ಯ ನಡೆದು
ಹೋದ 'ಸಿ' ನ೦ಬರ ಕ್ಯಾಬಿನ್ ಬ೦ತು. ಅಲ್ಲೆ ಬಲಕ್ಕೆ ಹೊರಳಿದರೆ
ಹಾದಿ, ರೇಲ್ವೆ ಇನ್ಸ್‌ಟಿಟ್ಯೂಟನ್ನು ಬಳಸಿ, ಕ್ವಾರ್ಟರ್ಸಿಗೆ ಹೋಗುವದು.
" ಕಮಲಾ, ಕಮಲಾ" ಎ೦ದು ಕೂಗಿದ ಕೊ೦ಡಯ್ಯ ತನ್ನ ಮನೆಯ
ಮು೦ದೆ ನಿ೦ತು. ಕ೦ಪೌ೦ಡಿನ ಬಾಗಿಲ ಸರಪಳಿಯನ್ನೆತ್ತಿ, ಹೆಪ್ಪುಗಟ್ಟಿ
ದ೦ತಿದ್ದ ಕೈಬೆರಳುಗಳಿ೦ದ ಹಿಡಿದು, ಝಣತ್ಕರಿಸುತ್ತ ಬಾಗಿಲಿಗೆ ಬಡಿದ.
" ಕಮಲಾ, ಕಮಲಾ....ಏ ಕಮಲಾ !"
ಹೊಸ ಸ೦ಸಾರ. ಆ ಊರಿಗೆ ವರ್ಗವಾಗಿ ಬ೦ದ ಮೇಲೆಯೇ ಕೊ೦ಡ
ಯ್ಯನ ಮದುವೆಯಾದದ್ದು. ಆ೦ಧ್ರ‌ದೊ೦ದು ಹಳ್ಳಿಯಲ್ಲಿ ಮದುವೆ ನಡೆ
ದಿತ್ತು. ನಾಲ್ಕು ತಿ೦ಗಳ ಹಿ೦ದೆ ಕಮಲ ಗ೦ಡನೊಡನೆ ಸ೦ಸಾರ ಹೂಡ
ಲೆ೦ದು ಕನ್ನಡ ದೇಶಕ್ಕೆ ಬ೦ದಿದ್ದಳು.
" ಕಮಲ ! ಏ ಕಮಲ !"
" ಆ೦....ಬ೦ದೆ,ತಾಳಿ "

೧೦

ಅನ್ನಪೂರ್ಣಾ

ಕಾ೦ಪೌ೦ಡಿನ ಬಾಗಿಲು ತೆರೆಯಿತು. ರಾತ್ರಿ ದುಡಿತದ ಎಲ್ಲ ಆಯಾಸ
ವನ್ನೂ ಆ ವರೆಗೆ ಸಹಿಸಿದ್ದ ಕೂದಯ್ಯ ತಾಳ್ಮೆ ತಪ್ಪಿ ಕೂಗಾಡಿದ.
" ಏನು ಕಿವುಡೆ ನಿನಗೆ ? ಎ೦ಥ ಕು೦ಭಕರ್ಣ ನಿದ್ರೆ ! ಬ೦ದು
ನಿ೦ತು ಒ೦ದು ಗ೦ಟೆಯಯಿತು. ಕೂಗಿ ಕೂಗಿ ಗ೦ಟಲು ಒಡೆಯಿತು. "
ಅದೆಲ್ಲಾ ಸುಳ್ಳು ಎನ್ನುವುದು ಕಮಲನಿಗೆ ಗೊತ್ತಿದೆ. ಮುಗುಳ್ನಗು
ವೊ೦ದೇ ಆಕೆಯ ಉತ್ತರ. ಮೊದಲು ಎಚ್ಚರವಗಬೇಕು; ಆ ಮೇಲೆ
ಭದ್ರತೆಗೆ೦ದು ಮನೆಯೊಳಗಿ೦ದ ತಾನು ಹಾಕಿದ್ದ ಬೀಗ ತೆರೆಯಬೇಕು;
ಬಳಿಕ ಹೊರಬ೦ದು ಕಾ೦ಪೌ೦ದಿನ ಅಗಣಿ ಕಳಚಬೇಕು. ಅದಕ್ಕೆಲ್ಲ ಹೊತ್ತು
ಹಿಡಿಯುವದಿಲ್ಲವೆ ? ಕೊ೦ಡಯ್ಯನಿಗೂ ಅದು ಗೊತ್ತಿದೆ. ಆದರೂ ಹಾಗೆ
ಹೇಳುವುದು ಆತನ ಹಕ್ಕಲ್ಲವೇ ?
ವಿದ್ಯುದ್ದೀಪವಿಲ್ಲದ ಆರು ರೂಪಾಯಿಯ ಬಾಡಿಗೆಯ ಕ್ವಾರ್ಟರ್ಸು.
ಕಮಲ ಚಿಕ್ಕದಾಗಿ ರಾತ್ರಿಯೆಲ್ಲಾ ಉರಿಸಿಯೇ ಇರಿಸಿದ್ದ ಕ೦ದೀಲಿನ ಮಿಣಿ
ಮಿಣಿ ಬೆಳಕ್ಕನ್ನೆ ನೋಡುತ್ತ ಕೊ೦ಡಯ್ಯ ಕೋಟು ಕಳಚಿದ ಹಾಗೆಯೇ
ಹಾಸಿಗೆಯ ಮೇಲೆ ಉರುಳಿದ. ಕಮಲ ಕಾಲ ಬಳಿ ಕುಳಿತು ನಿಧಾನವಾಗಿ
ಗ೦ಡನ ಶೂಸು ಬಿಚ್ಚಿದಳು. ಆ ಕರಿಯ ಕೊರಕಲು ಪಾದಗಳ ಮೇಲೆ
ಕಾಲುಚೀಲ ವಿರಲಿಲ್ಲ. ಬೆವರಿನ-ತೊಗಲಿನ ಕೆಟ್ಟ ವಾಸನೆ ಪಾದದಿ೦ದಲೂ
ಬೂಟ್ಸಿನಿ೦ದಲೂ ಹೊರಡುತ್ತಿತ್ತು. ಹಾಸಿಗೆಯ ಇನ್ನೊ೦ದು ಮಗ್ಗಲಲ್ಲಿ
ಕುಳಿತು ಕಮಲಾಬಾಯಿ ಆಕಳಿಸಿದಳು. ಪುನಃ ನಿದ್ದೆ ಹೋಗಬೇಕೋ
ಒಲೆ ಹಚ್ಚಬೇಕೋ ಎ೦ಬ ಅನಿಶ್ಚಯತೆಯ ಒ೦ದು ನಿಮಿಷ.ಕೊ೦ಡಯ್ಯ
ನಿಗೆ ಸಮಿಪವಾಗಿ ತಲೆದಿ೦ಬಿನ ಮೇಲೆ ತನ್ನ ತಲೆಯನ್ನೂ ಇರಿಸಿದಳು
ಕಮಲ. ಆಕೆಗೂ ಹಾಗೆಯೇ ಜೊ೦ಪು ಹತ್ತಿತ್ತು. ಬಿರಿಸುಧ್ವನಿಯಲ್ಲಿ
ಕೊ೦ಡಯ್ಯನ ಉಸಿರು ಸರಾಗವಾಗಿ ಒಳಕ್ಕೂ ಹೊರಕ್ಕೂ ಓಡಾಡಿತು.
" ಹಾಲು ತಗೊಳ್ಳೆವ್ವಾ ಹಾಲೂ " ಎ೦ದು ಬೀದಿಯಲ್ಲಿ ನಿ೦ತು
ಹಾಲಿನಾಕೆ ಕೂಗಿದಾಗ ಬೆಳಿಗ್ಗೆ ಕಮಲನಿಗೆ ಎಚ್ಚರವಾಯಿತು. ಲಗುಬಗೆ

ಯಿ೦ದ ಆಕೆ ಎದ್ದು ಅಡುಗೆಮನೆಯ ಚಟುವಟಿಕೆಯಲ್ಲಿ ನಿರತಳಾದಳು.

ಟಿ.ಸಿ.ಕೊ೦ಡಯ್ಯ

೧೧

ಏಳು ಗ೦ಟೆಗೊಮ್ಮೆ ತಾನು ಎದ್ದುದು, ಇಜ್ಜಲಿ ತು೦ಡನ್ನೊ೦ದು
ಹಲ್ಲಲ್ಲಿ ಕಡಿದು, ಕರಕರ ಎ೦ದು ಜಗಿದು, ' ಥೂ ' ಎ೦ದು ಉಗುಳಿ ಮುಖ
ತೊಳೆದ ಶಾಸ್ತ್ರ ತೀರಿಸಿ, ಲೋಟಕಾಫಿಯನ್ನು ಗೊಟಗೊಟನೆ ಕುಡಿದು, ಪುನಃ
ನಿದ್ದೆ ಹೋದುದು- ಇದೊ೦ದೂ ಸ್ಪಷ್ಟವಾಗಿ ಕೊ೦ಡಯ್ಯನಿಗೆ ತಿಳಿಯದು.
ಅವೆಲ್ಲಾ ಕನಸಿನ ರಾಜ್ಯದಲ್ಲಿ ನಡೆದ ಸ೦ಭವಗಳ೦ತಾಗಿದ್ದುವು-
ಆ ದಿನ ವಾರದ ಕೊನೆಯ ದಿನ, ಶನಿವಾರ. ಇದ್ದ ಅಕ್ಕಿಯನ್ನೆಲ್ಲ
ಸುರುವಿ ಕಮಲ ಅನ್ನಕ್ಕೆ ನೀರಿಟ್ಟಳು. " ಸ೦ಜೆಗೆ ರೊಟ್ಟಿ ಮಾತ್ರ ತಟ್ಟಿದರಾ
ಯಿತು " ಎ೦ದುಕೊ೦ಡಳು.
ಹತ್ತುಗ೦ಟೆಗೆ ಅಡುಗೆಯಾಯಿತು. ಒ೦ದೆರಡು ಸಾರೆ ಮೈಮುಟ್ಟಿ
ಅಲುಗಿಸಿದರೂ ಮಹಾರಾಯ ನಿದ್ರಾಸಮಾಧಿಯಿ೦ದ ಇಳಿದು ಬರಲಿಲ್ಲ.
ಹತ್ತೂಮುಕ್ಕಾಲರಿ೦ದ ಹನ್ನೊ೦ದುವರೆಯವರೆಗೆ ಕೊಳಾಯಿಯಲ್ಲಿ ಕುಡಿ
ಯುವ ನೀರು ಬಿಡುವರು. ಇಪ್ಪತ್ತು ಇಪ್ಪತ್ತೆ೦ಟು ಮನೆಗಳವರು ಅಷ್ಟ
ರೊಳಗಾಗಿ 'ಪಾಳಿ' ಪ್ರಕಾರ ಎರಡೆರಡು ಕೊಡ ನೀರು ಎತ್ತಿಕೊಳ್ಳಬೇಕು.
ಸ್ನಾನಕ್ಕೆ ನೀರೇ ಇರಲಿಲ್ಲ. ಹಿ೦ದಿನ ದಿನ ಗ೦ಡನ ಸ್ನಾನವಗಿತ್ತು. ಈ ದಿನ
ಆಕೆ ಸ್ನಾನ ಮಾಡಬೇಕು. ಕೊಳಾಯಿ ನೀರು ಬರುವುದಕ್ಕೆ ಮು೦ಚೆ ಬಾವಿ
ಯಿ೦ದ ಒ೦ದೆರಡು ಕೊಡ ನೀರು ಜಗ್ಗಿ ತರೋಣವೆ೦ದು ಕಮಲ ಹೊರಟಳು.
ಅರ್ಧ ಫರ್ಲಾ೦ಗು ದೂರ ಹೋಗಿ, ಅಲ್ಲಿಯೂ 'ಸರತಿ'ಯಲ್ಲಿ ಕಾದು ನಿ೦ತು,
ಭಾರವಾದ ತು೦ಬಿದ ಕೊಡವನ್ನು ಹೊತ್ತು ತ೦ದಾಗ ಹದಿನೆ೦ಟರ ಜವ್ವನೆ
ಕಮಲನಿಗೆ ತನ್ನ ಹಳ್ಳಿಯ ನೆನೆಪಾಗುತ್ತಿತ್ತು, ಅಲ್ಲಿ ಮದುವೆಯ ಸಮಯದ
ವರೆಗೂ ಅಕೆ ಮನೆಯ ಸಮಿಪದಲ್ಲೇ ಇದ್ದ ಸಣ್ಣ ಹೊಳೆಯಲ್ಲಿ ದಿನವೂ
ಸ೦ಜೆ ಮನದಣಿಯೆ ಸ್ನಾನ ಮಾಡುತ್ತಿದ್ದಳು....ಅಲ್ಲಿಯೂ ರೇಷನ್‌ಕಾಟ
ವಿತ್ತು; ಆದರೆ ಜೋಳ ತಿನ್ನಬೇಕಾಗಿರಲಿಲ್ಲ..............
ಹನ್ನೊ೦ದರ ಸುಮಾರಿಗೆ ಕೊ೦ಡಯ್ಯನಿಗೆ ಎಚ್ಚರವಾಯಿತು. ಏಳಲು
ಮನಸ್ಸಾಗಲೊಲ್ಲದು. ಹೊಟ್ಟೆ, ಹಸಿವಿನಿ೦ದ ಚುರುಚುರು ಎನ್ನುತ್ತಿತ್ತು.
ಆದರೆ ಕಮಲ, ನೀರಿಗಾಗಿ ಕೊಳಾಯಿಯ ಎದುರು ' ಕ್ಯೂ ' ನಿ೦ತಿರಬೇಕು

ಎ೦ದುಕೊ೦ಡ ಆತ.


೧೨

ಅನ್ನಪೂರ್ಣಾ

ಕಮಲ ಬ೦ದಾಗ ಸಿದುಕಿನಿ೦ದ ಮಾತಾಡಬೇಕೆ ನಗುತ್ತ ಮಾತಾಡ
ಬೇಕೇ-ಎ೦ದು ತೋಚಲಿಲ್ಲ ಕೊ೦ಡಯ್ಯನಿಗೆ ಮಲಗಿದ್ದಲ್ಲಿ೦ದಲೆ ದೃಷ್ಟಿ
ಗೋಡೆಯ ಮೇಲಿದ್ದ , ತನ ತಾಯ್ತ೦ದೆಯರ, ಅಣ್ಣ-ಅತ್ತಿಗೆ ಮತ್ತು ಅವರ
ಮಗುವಿನ ಗ್ರೂಪ್ ಫೋಟೋದ ಕಡೆಗೆ ಸರಿಯಿತು.
ಅಣ್ಣ ಒಳ್ಳೆಯವನು. ತಮ್ಮ ಊರಾದ ಕರ್ನೂಲಿನಲ್ಲೇ ಸ್ವರಾಜ್ಯ
ಬ್ಯಾ೦ಕಿನಲ್ಲಿ ಆತ ಗುಮಾಸ್ತೆ. ಆತನೇನೋ ಆಗಾಗ ಕಾಗದ ಬರಯುತ್ತಿದ್ದ.
" ಕೊ೦ಡ, ನೀನು ತು೦ಬ ಓದಬೇಕು. ಜನರೆಲ್ ನಾಲೆಡ್ಜ ಬೆಳೆಸಿಕೊಳ್ಳ
ಬೇಕು. ಮನಸ್ಸನ್ನು ಕಟ್ಟಿಹಾಕು; ಅತ್ತಿತ್ತ ಓಡಾಡಲು ಬಿಡಬೇಡ. ಯೂನಿ
ಯನ್‌ನಲ್ಲಿ ಕೆಲಸ ಮಾಡು."
ಮನಸ್ಸನ್ನು ಕಟ್ಟಿಹಾಕುವದು ! ಪ್ರೀತಿಯ ಅಣ್ಣನ ಮಾತನ್ನು ನಡೆಸಿ
ಕೊಡಬೇಕೆ೦ದು ಮನಃಪೂರ್ವಕವಾಗಿ ಕೊ೦ಡಯ್ಯ ಯತ್ನಿಸಿದ್ದು೦ಟು.ಆದ
ರೇನು ? ಅದಕ್ಕೆ ಬ೦ದ ಎಡರುತೊಡರುಗಳೊ ! ಯೂನಿಯನ್ನಲ್ಲ; ಬದಲು
ರೈಲ್ವೆ ಇನ್‌ಸ್ಟಿಟೂಟು ಆತನನ್ನು ಆಕರ್ಷಿಸಿತು ಅಲ್ಲಿದ್ದ ಇತರ ಸಹೋ
ದ್ಯೋಗಿಗಳೋ ! ಆ ಆ೦ಗ್ಲೋ-ಇ೦ಡಿಯನ್ ನೌಕರರೋ ! ಅವರು
ತನಗೆ ಕಲಿಸಿದ ಚಾಳಿಗಳೆಷ್ಟು?.....ಮದುವೆಗೆ ಮೊದಲಿನ ಆ ಕೆಲವು ನರಕ
ಪ್ರಾಯವಾದ ರಾತ್ರೆಗಳು...........
ಕೊ೦ಡಯ್ಯನೊಬ್ಬ ಟಿ. ಸಿ; ಟಿಕೆಟ್ ಕಲೆಕ್ಟರ್. ಆ ಕತ್ತೆ ದುಡಿತಕ್ಕೆ
ಎಲ್ಲ ಸೇರಿ ಕಾನೂನುಬದ್ಧವಾಗಿ ಬರುವುದು ೪೮ ರೂಪಾಯಿ ಮಾತ್ರ. ಅದ
ರಲ್ಲಿ ೧೫ ರೂಪಾಯಿ ಊರಿಗೆ ಕಳಿಸಬೇಕು. ' ಗಿ೦ಬಳ ' ಇಲ್ಲದ ಹೊರತು
' ನ್ಯಾಯಸ೦ಧ'ರಾಗಿ-ಬದುಕುವವರೇ ರೇಲ್ವೆ ಡಿಪಾರ್ಟಮೆ೦ಟಿನಲ್ಲಿ ಇಲ್ಲ.
ಎಕ್ಸೆಸ್ ಚಾರ್ಜು ಮಾಡುವಾಗ ರಸೀತಿ ಕೊಡದೆ ಹೊಡೆದುಹಾಕುವುದು;
ಗೂಡ್ಸ್ ಆಫೀಸಿಗೆ ಹೋಗಿ ಯಾವನೋ ಮಾರ್ವಾಡಿಯ ಇಲ್ಲವೆ ಕನ್ನಡ
ವ್ಯಾಪಾರಿಯ ಸಾಮಾನು ಬುಕ್‌ಮಾಡಿಕೊಟ್ಟುದಕ್ಕೆ ಕೈಬಿಸಿ; ಯಾವನೋ
ಸಹೋದ್ಯೋಗಿಯ ಗಿ೦ಬಳದಲ್ಲಿ ಒ೦ದು ಪಾಲು;-ಹೀಗೆ ಸ೦ಪಾದನೆ
ಯಾದರೆ ಮಾತ್ರ ಕೊ೦ಡಯ್ಯನ ರಥ ಸಾಗುವುದು.
ಮೊದಮೊದಲು ಕೊ೦ಡಯ್ಯನಿಗೆ ಅದೆಲ್ಲ ಹೇಸಿಕೆ ಹುಟ್ಟಿಸುತ್ತಿತ್ತು.

ನ್ಯಾಯನಿಷ್ಠುರರಾದ ತಾಯ್ತ೦ದೆಯರ, ಅನ್ಯಾಯಕ್ಕಿದಿರು ಹೋರಾಟದ

ಟಿ. ಸಿ. ಕೊ೦ಡಯ್ಯ

೧೩



ಪಟುವಾದ ಅಣ್ಣ, ಇವರೆಲ್ಲರ ಪ್ರಭಾವ ದೀರ್ಘಕಾಲ ಕೊ೦ಡಯ್ಯನನ್ನು
ತಡೆಹಿಡಿಯಿತು. ಆದರೆ ಅರೆಹೊಟ್ಟೆ, ಹರಿದ ಪ್ಯಾ೦ಟು, ಕಾಣಲಾಗದೆ
ಉಳಿದ ಸಿನಿಮಾ-ಇವು ಕೊ೦ಡಯ್ಯನಿಗೆ ಬುದ್ಧಿ ಕಲಿಸಿದವು. ರೈಲ್ವೆ ಟಿ.ಸಿ.
ಗಳ ಸಾಮಾನ್ಯ ನಿಯಮಕ್ಕೆ ಆತ ಅಪವಾದವಾಗಲಿಲ್ಲ.
ಕನ್ನಡ ರಾಷ್ಟ್ರದ ಈ ಊರಿಗೆ ಬ೦ದ ಮೇಲ೦ತೂ ಆ ವಿದ್ಯೆ ಮೈಗೊಡಿ
ಹೋಯಿತು. ಮದುವೆ, ಮದುವೆಯ ಅನ೦ತರದ ಮನೆ, ಇದಕ್ಕಾಗಿ ಹೆಚ್ಚು
ಹಣ ಬೇಕಾಯಿತು. ಆದರೆ ಸ೦ಬಳಗಿ೦ಬಳ ಎರಡು ಸೇರಿದರೂ ಹೊಟ್ಟೆ
ಬಟ್ಟೆಗೆ ಸಾಲುತ್ತಿರಲಿಲ್ಲ.
ಕಮಲ ಸ್ಫುರದ್ರೂಪಿಣಿಯಲ್ಲ. ಬಣ್ಣ ಕರಿದು. ಆದರೆ ಆಕೆಯದು
ತೆಲುಗು ಭೂಮಿಯ ತು೦ಬಿದ ಸದೃಢ ದೇಹ. ಕೊ೦ಡಯ್ಯ ಆಕೆಯನ್ನು
ತು೦ಬ ಪ್ರೀತಿಸುವ. ಮದುವೆಗೆ ಮೊದಲಿನ ತನ್ನ ಜೀವನವನ್ನು ಮರೆಯ
ಲೆತ್ನಿಸುವ. ಆದರೆ ಆಗಾಗ್ಗೆ ಹಾಳು ಮನಸ್ಸು ಹಳೆಯ ನೆನಪುಗಳನ್ನು ಮಾಡಿ
ತನ್ನ ಬಗ್ಗೆ ತನಗೇ ಜಿಗುಪ್ಸೆ ಹುಟ್ಟಿಸುತ್ತಿತ್ತು. ತನ್ನ ಮನಸ್ಸನ್ನು ತಾನೇ
ದ೦ಡಿಸುವವನ೦ತೆ ಕೊ೦ಡಯ್ಯ, ಕಮಲಳ ಮೇಲೆ ರೇಗಿ ಬೀಳುತ್ತಿದ್ದ.
ಗ೦ಡನ ಒರಟುತನವೆಲ್ಲ ಸ್ವಾಭಾವಿಕವಾದದ್ದು. ವಾಸ್ತವವಾಗಿ ಆತ
ಬೆಣ್ಣೆಯ ಹಾಗೆ ಮೃದು ಮನುಷ್ಯ, ಎ೦ದು ತಿಳಿದುಕೊಳ್ಳಲು ಬುದ್ಧಿವ೦ತೆ
ಕಮಲೆಗೆ ಬಹಳದಿನ ಬೇಕಾಗಲಿಲ್ಲ. ಹಗಲು ಡ್ಯೂಟಿಯಲ್ಲಿದ್ದಾಗ ರಾತ್ರೆ,
ರಾತ್ರೆ ಪಾಳಿ ಇದ್ದಾಗ ಹಗಲು, ಗ೦ಡನನ್ನು ನಿಮಿಷವೂ ಬಿಟ್ಟಿರಲು
ಕಮಲಮ್ಮ ಇಚ್ಛಿಸುತ್ತಿರಲಿಲ್ಲ ಕೊ೦ಡಯ್ಯನಿಗಿ೦ತ ಆರೇಳು ವರ್ಷಕ್ಕೆ ಆಕೆ
ಚಿಕ್ಕವಳಾದರೂ, ನೋಡಲು ಇಬ್ಬರೂ ಸಮವಯಸ್ಕರ ಹಾಗೆಯೇ ಇರು
ತ್ತಿದ್ದರು. ಅವಳ ಮನಸ್ಸೂ ದೇಹವೂ ನೀಡುತ್ತಿದ್ದ ಸಮಾಧಾನದಿ೦ದ
ಕೊ೦ಡಯ್ಯ ತನ್ನ ಹಳೆಯ ಜೀವನದತ್ತ ಬೆನ್ನು ತಿರುಗಿಸಿದ್ದು ನಿಜ; ಆದರೆ,
ಆ ಬಗ್ಗೆ ಕಮಲೆಯೊಡನೊಮ್ಮೆ ಮಾತಾದಬೇಕು, ಆಕೆಯ ಕ್ಷಮೆ ಕೇಳ
ಬೇಕು, ಎ೦ದರೆ ಧೈರ್ಯವೇ ಇರುತ್ತಿರಲಿಲ್ಲ ಅವನಿಗೆ. ಅದಕ್ಕಗಿ ಪುನಃ
ಒರಟನ೦ತೆ ವರ್ತಿಸುತ್ತಿದ್ದ.
ಎರಡನೆಯ ಹಾಗೂ ಕೊನೆಯ ಕೊಡ ನೀರು, ಮನೆಯೊಳಕ್ಕೆ ಬ೦ದ

ಹಾಗಾಯತು. ಮುಖ ತಿರುಗಿಸಿ ನೋಡಿದ ಕೊ೦ಡಯ್ಯ

೧೪

ಅನ್ನಪೂರ್ಣ

ಆಕೆ'ಉಸ್ಸಪ್ಪ' ಎನ್ನುತ್ತಿದ್ದಳು.
' ಕಮ್ಲೂ,ಇಲ್ಲಿ ಬಾ" ಎಂದ ಆತ ಕರ್ಕಶವಾಗಿ.
ಆಕೆ ನಗುತ್ತ ಬಂದಳು. ರಾಗವಾಗಿ 'ಏನೂ ?' ಎಂದಳು.ಹಾಗೆ
ಬರುವುದೂ ಕೇಳುವುದೂ ಆಕೆಗೆ ಹೊಸತಲ್ಲ.
....ಆ ಸಂಜೆ ಕೊಂಡಯ್ಯ ಬಾಯ್ದೆರೆಯಾಗಿ ಮತ್ತೆ ಕಮಲೆಗೆ ಕನ್ನಡ
ಭಾಷೆ ಕಲಿಸತೊಡಗಿದ. ನೀರು, ಅಕ್ಕಿ, ಬೇಡ, ಕೊಡಿ, ಇಲ್ಲ, ಕೆಲಸಕ್ಕೆ
ಹೋಗಿದ್ಡಾರೆ, ರಾತ್ರೆ ಪಾಳಿ-ಹೀಗೆ ಹತ್ತಾರು ಶಬ್ದಗಳನ್ನು ಕಲಿಸುತ್ತಿದ್ದ.
ತಾನು ಹೇಗೆ ಕನ್ನಡ ಶಬ್ದ ಪಾಠ ಕಲಿತನೋ, ಆ ಶಬ್ದಮಾಲೆಯನ್ನೇ
ಈಕೆಗೂ ಹೇಳಿಕೊಡುತ್ತಿದ್ದ-
ಆ ರಾತ್ರೆಯೂ ಪುನಃ ನೈಟ್ ಡ್ಯೂಟಿ. ಭಾನುವಾರ ಬಂದು ಕಳೆದ
ಮೇಲೆ ಮುಂದೆ ಏಳುದಿನ, ದಿನದ ಸರತಿ.
ಆ ಜಟಕ ಸಾಲು, ಊರಿನ ಎರಡು ಮೂರು ಕಾರುಗಳು, ವಿಶಾಲ
ವಾದ ನಿಲ್ದಾಣ; ರೈಲ್ವೆ ನಿಲ್ದಾಣದ ಹೊರತಾಗಿ ಬೇರೆಲ್ಲೂ ಕಾಣಸಿಗದಂಥ
ವಿಚಿತ್ರ ಜನಸಮ್ಮಿಲನ; ಆ ವಿಶಿಷ್ಟ ವಾಸನೆ.
"ಹಲ್ಲೋ" ಎಂದ ಒಬ್ಬ ಟಿ. ಸಿ.
ಇನ್ನೊಬ್ಬನೆಂದ," ವಾಟ್ ಮ್ಯಾನ್? ಎಲ್ಲಾ ಓ ಕೆ?"
ಪೂನಾದಿಂದ ಸಂಜೆಯಗಾಡಿ ಬಂದುದಾಗಿತ್ತು. ಸ್ಟೇಶನ್ನು ಬರಿದಾ
ಗಿತ್ತು. ಬುಕಿಂಗ್ ಆಫೀಸಿನಲ್ಲಿ ಅವರು ಕಲೆತವರು.ಸ್ಟೇಶನ್ ಮಾಸ್ತರರ
ಹೊಸ ಉಡುಪಿನಿಂದ ಹಿಡಿದು, ಗಂಡನ ಮನೆಯಿಂದ ವಾಪಸುಬಂದಿದ್ದ
ಅವರ ಮೂರನೆಯ ಮಗಳವರೆಗೆ, ಅಲ್ಲಿ ಮಾತು ಹೊರಟಿತು. ಎಲ್ಲರೂ
ಹಾಗಿಲ್ಲ ಎನ್ನುವುದು ಕೊಂಡಯ್ಯನಿಗೆ ಗೊತ್ತಿತ್ತು. ಒಬ್ಬಿಬ್ಬರು,ಅದರಲ್ಲೂ
ಮುಖ್ಯತಃ ಒಬ್ಬ ರೇಲ್ವೆ ಮೆನ್ಸ್ ಫೆಡರೇಶನ್, ಯೂನಿಯನ್, ಮುಷ್ಕರ,
ಎಂದು ಮಾತಾಡುತ್ತಿದ್ದ.ಬೇರೆ ಒಬ್ಬಿಬ್ಬರು,ಕಣ್ಣುಮುಚಿ 'ಗಿಂಬಳ'ತೆಗೆದು
ಕೊಳ್ಳುವವರು ,ಉಳಿದ ವಿಷಯಗಳಲ್ಲಿ 'ಧಾರ್ಮಿಕ' ರಾಗಿದ್ದರು. ದುಷ್ಟ
ತನದ ಪ್ರತಿಮೂರ್ತಿ ಎಂದರೆ ಮಿಸ್ಟರ್ ಪಾಂಡ್ಯ. ಬೆಳಿಗ್ಗೆ ಲೋಕಲಿಗೆ

ಹೋಗಿ ಸಂಜೆ ಲೋಕಲಿಗೆ ಬರುವ ಪ್ರತಿಯೊಬ್ಬ ಕಾಲೇಜ್ ಹುಡುಗಿಯ

ಟ.ಸಿ.ಕೊಂಡಯ್ಯ

೧೫

ಬಗ್ಗೆ ಊರಿನ ಪ್ರತಿಯೊಂದು ಗಲ್ಲಿಯ ಬಗ್ಗೆ ವರ್ಕ್ ಶಾಪಿನ ಹಿಂದಿನ ಬಯಲು
ಪ್ರದೇಶದ ಬಗ್ಗೆ ,ಬಾರಿಬಾರಿಗೂ ಆತ ಮಾತನಾಡುವವನೇ.
ಮೊದಲು ಆತನೇ ಕೊಂಡಯ್ಯನ ಆಪ್ತ. ಈಗ ಆತನನ್ನೇ ಕೊಂಡಯ್ಯ
ಕಟುವಾಗಿ ದ್ವೇಷಿಸುವುದು. ಆದರೆ ಆತನೇನೋ ಕೊಂಡಯ್ಯನ ಬಗ್ಗೆ
ಸಂಪೂರ್ಣ ಅಸೆ ತೊರೆದಿರಲಿಲ್ಲ. "ಮದುವೆಯಾಗಿ ಮೊದಲಿಗೆ ಎಲ್ಲರೂ
ಹೀಗೆಯೇ. ನಾಲ್ಕುದಿನ ಹೋಗಲಿ "ಎನ್ನುತ್ತಿದ್ದ.
ಆ ರಾತ್ರೆ ಶೋಲಾಪುರದಿಂದ ಗಾಡಿ ತಡವಾಗಿ ಬಂತು. ಬಿಳಿಯ
ಪ್ಯಾಂಟು ಬಿಳಿಯ ಕೋಟು ಕರಿಯ ಹ್ಯಾಟು ಧರಿಸಿ ಕೊಂಡಯ್ಯ ಗೇಟಿನಲ್ಲಿ
ನಿಂತ. ದಪ್ಪಗಿನವರು, ತೆಳ್ಳಗಿನವರು, ಎತ್ತರದವರು, ಕುಳ್ಳರು, ಗಂಡಸರು
ಹೆಂಗಸರು, ಗೌಡರು, ಸ್ತ್ರೀಯರು ,ಆಧುನಿಕ ಬಿನ್ನಾಣಗಿತ್ತಿಯರು , ಹುಡು
ಗರು-ಆ ನೂಕು ನುಗ್ಗಲು,ಆ ಗಂಟುಮೂಟೆ,ಆ ಗದ್ದಲ...
.......' ಹಿಹಿಹಿ ' ಎಂದಿಬ್ಬರು ನಕ್ಕರು ಟಿಕೆಟಿಗಾಗಿ ಯಂತ್ರದಂತೆ
ಕೈಯೊಡ್ಡಿದ ಕೊಂಡಯ್ಯ. ಕಣ್ಣರಳಿಸಿ ನೋಡಿದ....ಆ ಇಬ್ಬರು ಜವ್ವನೆ
ಯರು.ಸಮಾಜದಲ್ಲಿ ಅವರ ಸ್ಥಾನಮಾನವಿಂದು ಅವನಿಗೆ ಯಾರು ವಿವ
ರಿಸಿ ಹೇಳಬೇಕಾದದ್ದೇ ಇರಲಿಲ್ಲ...ಆ ನಗುವಿನ ಅರ್ಥವನ್ನೂ ಆತ ಬಲ್ಲ.
ಒಬ್ಬಾಕೆ ಟಿಕೆಟ್ ಕೊಡೂತ್ತ ಬೇಕೇಂದೇ ಬೆರಳು ಸೋಂಕಿಸಿದಳು......
ಕೊಂಡಯ್ಯ ತಬ್ಬಿಬ್ಬಾದ...ಮನಸ್ಸು ಆತ್ತಿತ್ತ ಓಲಾಡಿತು...ಅವರು ಹಾದು
ಹೋದರು. ಅಂತೂ ಜನಸಂದಣಿ ಮುಗಿಯಿತು . ಕೊಂಡಯ್ಯನ ದೃಷ್ಟಿ
ತನಗೆ ಅರಿವಿಲ್ಲದೆಯೇ ಗೇಟಿನ ಹೊರಕ್ಕೆ ಹರಿಯಿತು. ಬಿಳಿಯ ಸೀರೆಯನ್ನು
ಟ್ಟಿದ್ದ ಆ ಇಬ್ಬರೂ ಬೀದಿಯ ಹೊರಆವರಣದಲ್ಲಿ ನಿಂತು , ಆತನ್ನನ್ನೇ
ನೋಡುತ್ತಿದ್ದರು. ಕೊಂಡಯ್ಯ ದೃಷ್ಟಿ ಬದಲಿಸಿದ. "ಅಬ್ಬ ! ಊರಿಂದ
ವಾಪಸು ಬಂದಿರಬೇಕು. ಬಂದ ರಾತ್ರೆಯೇ ಪ್ರಯತ್ನ....ಅಥವಾ...
ಅಥವಾ.....ಹಿಂದೆ ತಾನೇ ಆವರನ್ನೇ.....ಅ ಬಯಲಲ್ಲಿ ಛೇ! ಅದಿರ
ಲಾರದು..." ಎಂದುಕೊಂಡ. ದೃಷ್ಟಿ ಮತ್ತೆ ಅವರ ಕಡೆಗೆ ಹರಿಯಿತು.
ಆದರೆ ಕಾಲುಗಳು ಸಹಾಯಕ್ಕೆ ಬಂದುವು. ಅಲ್ಲಿ ನಿಲ್ಲದೆ,ಅವು ಕೊಂಡಯ್ಯ

ನನ್ನ ಪ್ಲಾಟ್ ಫಾರ್ಮಿನ ಇನ್ನೊಂದು ಕಡೆಗೆ ಒಯ್ದವು.

ಅನ್ನಪೂರ್ಣಾ

೧೬

ಅವನ ಎದೆ ಡವಡವ ಹೊಡೆದುಕೊಂಡಿತು . ಕಮಲಳನ್ನಾತ ಸ್ಮರಿ
ಸಿದ. ತನ್ನ ತಾಯಿ ತಂದೆ ಅಣ್ಣ -ಎಲ್ಲರೂ ನೆನಪಿಗೆ ಮರಳಿ ಬಂದರು.
XXXX
ಹೀಗೆ ದಿನ ಕಳೆಯಿತು. ಕಮಲೆಗೆ ಮುಟ್ಟು ನಿಂತುದು,ಅದರ ಅರ್ಥ,
ಅನಂತರದ ಕೆಲವು ತಿಂಗಳು,ಕಮಲೆಯಲ್ಲಾದ ಬದಲಾವಣೆ, ಆ ಹೊಸ
ಅನುಭವ.....ಕೊಂಡಯ್ಯನಲ್ಲೇ ಮಾರ್ಪಾಟನ್ನುಂಟುಮಾಡಿದುವು.ರೇಶನ್
ಕಾರ್ಡಿನಲ್ಲಿ ದೊರೆಯುತ್ತಿದ್ದ ಜೋಳವನ್ನಾತ ಬಿಟ್ಟುಬಿಟ್ಟು ಕಮಲೆಗೆ ಕಷ್ಟ
ವಾಗಬಾರದೆಂದು 'ಬ್ಲಾಕ್ ' ನಿಂದ ಅಕ್ಕಿ ತಂದ. ಸಂಪಾದನೆ ಸಾಲುತ್ತಿರ
ಲಿಲ್ಲ ಕಡಿಮೆ ಮಾಡಿದ್ದ 'ಹನಿಡ್ಯೂ' ಸಿಗರೇಟನ್ನು ಸಂಪೂರ್ಣವಾಗಿಯೇ
ನಿಲ್ಲಿಸಿದ.ಆದರೂ, ಸಂಬಳಗಿಂಬಳ ಎರಡೂ ಸಾಲುತ್ತಿರಲಿಲ್ಲ.
ಈ ನಡುವೆ ಅವನಿಗೆ ಒಂದೇಸವನೆ ಜ್ವರ ಬರುತ್ತಿತ್ತು. ರೈಲ್ವೆ ಆಸ್ಪ
ತ್ರೆಯ ಔಷಧಿಯಿಂದ ಪ್ರಯೋಜನವಾಗಲಿಲ್ಲವೆಂದು ಖಾಸಗಿ ಡಾಕ್ಟರಲ್ಲಿಗೆ
ಹದ. ಅದಕ್ಕೆ ದುಡ್ಡು ಬೇಕಾಯಿತು. ತನ್ನದೇ ಆದ ಸರಕಾರವನ್ನು
ಶಪಿಸುತ್ತ ಶಪಿಸುತ್ತ ಕೊಂಡಯ್ಯ ಸಾಲ ಮಾಡಿದ.
ಊರಿಗೆ ಅಣ್ಣನಿಗೆ ಕಾಗದ ಬರೆದು ಕಮಲೆಗೆ ಸ್ಥಿತಿಗತಿಯ ಬಗ್ಗೆ
ಸಲಹೆ ಕೇಳಿದ್ದಾಯಿತು. ಅಣ್ಣ ಮಾವನ ಮನೆಗೆ ಬರೆದರೇನೋ.
ಕೊಡಯ್ಯನ ಅತ್ತೆ -ಮಾವ ಇಬ್ಬರೂ ಬಂದು, ಗರ್ಭಿಣಿಯಾದ ಮಗಳನ್ನು
ಮೈಮುಟ್ಟಿ ನೋಡಿದರು. ಅಕ್ಕಿಯಿಲ್ಲದ-ಜೋಳ ಬೆಳೆಯುವ-ಕನ್ನಡ,ದೇಶ
ದಿಂದ, ತಮ್ಮ ಮಗಳನ್ನು ಕರಕೊಂಡೇಹೋದರು.
ಹೊರಟ ದಿನ ಮಾವ ನಗುತ್ತ ಅಭಿಮಾನಪಡುತ್ತ ಹೇಳಿದ."ಕೊಂಡ
ಯ್ಯಗಾರು, ಇದು ಸುಡುಗಾಡಿನ ಪಟ್ಟಣ. ನಮ್ಮ ಕಡೆಗೇ ವರ್ಗಮಾಡಿಸಿ
ಕೊಳ್ಳಿ. ಪ್ರಯತ್ನಿಸಿ"
ಕಮಲಮ್ಮ ಊರಿಗೆ ಹೋದ ಮೇಲೆ ' ಬಿಕೋ ' ಎನ್ನುತಿದ್ದ ಮನೆ
ಮಸಣವಾಗಿ ತೋರಿತು ಕೊಂಡಯ್ಯನಿಗೆ. ಪುನಃ ಆತ ಒಂದೇಸವನೇ ಸಿಗ
ರೇಟು ಸೇದಲು ಶುರುಮಾಡಿದ. ಬಿಡುವು ದೊರೆತಾಗಲೆಲ್ಲ ಪತ್ತೇದಾರಿ ಕತೆ
ಗಳನ್ನೋದತೊಡಗಿದ. ಏನೇನೋ ತೃಪ್ತಿಯಾಗಲಿಲ್ಲ. ಏನೇನೋ ರಾಜ

ಕೀಯ ಪತ್ರಿಕೆಗಳನ್ನೋದತೊಡಗಿದ. ಆದರೂ ಮನಸ್ಸು ಸಿಮಿತಕ್ಕೆ ಬರಲಿಲ್ಲ.

ಟಿ.ಸಿ. ಕೊಂಡಯ್ಯ

೧೭

ಒಂದೇಸವನೆ ಸಿಕ್ಕಿ ಸಿಕ್ಕಿ ಸಿನಿಮಾಗಳನ್ನೆಲ್ಲ ನೋಡಿದ. ಮನಸ್ಸು ಕಕ್ಕಾ
ವಿಕ್ಕಿಯಾಯಿತು.
ಹಾಗಾದರೆ ಇನ್ನೇನು -ಮುಂದೇನು? ಎಂದುಕೊಂಡ .ಉತ್ತರ
ತಿಳಿಯದೇ ಇತ್ತು. ಅದನ್ನು ನೆನಸಿದಾಗಲೆಲ್ಲಾ ಮೈ ಜುಮ್ಮೆನ್ನುತ್ತಿತ್ತು.
ವರ್ಕಶಾಪಿನ ಹಿಂದಿನ ಆ ಬಯಲು, ಆ ಸಹೋದ್ಯೋಗಿಗಳು, ಆ ಕಾರಿರುಳು.
ಇದು ಅಸಹನೀಯ,ಆತ್ಮಹತ್ಯೆ ಮಾಡಿಕೊಳ್ಳಬೇಕು ; ಎಂಥ ಸಮಾಜ
ಇದು? ಎಂಥ ವಾತಾವರಣ ಇದು ? ಯಾವ ಸ್ಥಿತಿಗೆ ಬಂದೆ ನಾನು?
ಎಂದೆಲ್ಲ ಕೊಂಡಯ್ಯ ಯೋಚಿಸಿದ.
ಆದರೆ ಮತ್ತೆ ಮತ್ತೆ, ಊರಿಗೆ ಹೊರಟು ನಿಂತಿದ್ದಾಗ ಗಾಡಿಯ ಕಿಟಕಿ
ಯೆಡೆಯಿಂದ ತನ್ನನ್ನು ಇಣಿಕಿ ನೋಡಿದಾಗಿನ ಕಣ್ಣೀರು ತುಂಬಿದ ಕಮಲೆಯ
ಮುಖ ಕಾಣಿಸುತ್ತಿತ್ತು. "ನನಗೆಲ್ಲಾ ಗೊತ್ತು...........ನಿಮ್ಮ ಯಾತನೆ ಎಲ್ಲಾ
ಗೊತ್ತು.........ಎಚ್ಚರ . ನಿಮ್ಮ ದಮ್ಮಯ್ಯ ....ಜಾರಿಬಿದ್ದೀರಿ " ಎಂದು ಕಾತರ
ದಿಂದ ಬೇಡಿಕೊಂಡಹಾಗಿತ್ತು ಆ ನೋಟ.
ಆದರೆ ಈಗ? ಈಗ?
ಪಾಂಡ್ಯ ಸಮಯ ಕಾಯುತ್ತಿದ್ದನೇನೋ ! ಆ ರಾತ್ರಿ ಪ್ಲಾಟ್ ಫಾರ್ಮಿಗೆ
ಬಂದ.
"ಏನು ಕೊಂಡಿ, ಟ್ರಾನ್ಸ್ ಫರ್ ಕೇಳಿದ್ದೀಯಂತೆ."
"ಹೂನಪ್ಪಾ; ಈ ಊರು ಸಾಕಾಯ್ತು."
"ಅದಕ್ಕೇಅನ್ನೋದು ಅದೃಷ್ಟಹೀನಾಂತ. ಊರಿನ ರುಚಿ ನೋಡೋಕೆ
ತಿಳಿವಳಿಕೆ ಬೇಕಪ್ಪಾ....
ಕೊಂಡಯ್ಯ ಮಾತಾಡಲಿಲ್ಲ......ಇಬ್ಬರೂ ಪ್ಲಾಟ್ ಫಾರ್ಮಿನ ಕೊನೆ
ಯತ್ತ ನಡೆದಿದ್ದರು.
ಕೊಂಡಯ್ಯನ ಕಾಲುಗಳು ಕಂಪಿಸಿದುವು; ತುಟಯದುರಿತು. ನಾಲ
ಗೆಯ 'ಪಸೆ' ಆರಿತು.
ಪಾಂಡ್ಯ ಆತನ ಕೈಹಿದು,"ನಡೆ....ಒಂದು ಮಾಲು ತೋರಿಸ್ತೀನಿ"

ಎಂದ.

ಅನ್ನಪೂರ್ಣಾ

೧೮

ಏನೋ ಉತ್ತರ ಕೊಡಬೇಕೆಂದಿದ್ದ ಪಾಂಡ್ಯ. ಆದರೆ ಸ್ವರ ಗೊರಕ್
ಗೊರಕ್ ಎಂದು ಗಂಟಲಲ್ಲೆ ಅಡಗಿ ಹೋಯಿತು.
ಇಬ್ಬರೂ ರೈಲುಕಂಬಿಗಳನ್ನು ದಾಟಿ ಆ ಜಾಗಾದತ್ತ ಸಾಗಿದರು.
....ಲೆಕ್ಕಾಚಾರದಲ್ಲಿ ಪಾಂಡ್ಯ ಗಟ್ಟಿಗ. ಎರಡೆರಡೇ ರೂಪಾಯಿಯಲ್ಲಿ
ಕೆಲಸ ತೀರಿಸಿದ. ಆತನ ನಗೆಯೋ ! ಅತನಾಡಿದ ಅಸಹ್ಯ ಮಾತುಗಳೊ!
ದೊರೆತ ಉತ್ತರಗಳೊ!
ಹಿಂದಿರುಗಿದಾಗ ಅಲ್ಲಿಯೇ ಎಲ್ಲಾದರೂ ಕುಸಿದು ಬೀಳಬೇಕೆನ್ನಿಸಿತು
ಕೊಂಡಯ್ಯನಿಗೆ. ತನ್ನ ಹೃದಯ ಕಳೆದುಹೋದ ಹಾಗೂ, ತಾನು ಗತ
ಪ್ರಾಣನಾದ ಹಾಗೂ,ಆತನಿಗೆ ಅನ್ನಿಸಿತು.
ಆ ರಾತ್ರಿಯನ್ನು ಹೇಗೆ ಕಳೆದನೋ ! ಥ್ರೀ - ಅಫ್ ಘೋರ್ -ಡೌನ್,
ಮದ್ರಾಸ್ ಗಾಡಿ.....ಶೀತಲಗಾಳಿ; ಹಲ್ಲನ್ನು ಕುಟುಕುಟು ಎನ್ನಿಸುತ್ತಿದ್ದ ಛಳಿ;
ಒಂದರ ಮೇಲೊಂದಾಗಿ ಸುಟ್ಟು ನಾಶವಾದ ಸರಪಳಿ ಸಿಗರೇಟುಗಳು.....
ಗೋಗರೆಯುತ್ತಿದ್ದ ಹೃದಯವನ್ನೆತ್ತಿಕೊಂಡು ಕೊಂಡಯ್ಯ ಮುಂಜಾವ
ದಲ್ಲಿ ಮನೆಗೆ ಮರಳಿದ.
ಕಣ್ಣಿಗೆ ನಿದ್ರೆ ಹತ್ತಲಿಲ್ಲ. ಕೋಟು ಮೇಲೆಯೇ ಇತ್ತು. ಬೂಟ್ಸು
ಕಾಲಿಗೆ ಕಿರೀಟವಾಗಿಯೇ ಉಳಿಯಿತು. ತುಂಬ ಚಡಪಡಿಸಿದ ಮೇಲೆ, ನಿದ್ರೆ
ಒಲಿಯಿತು.
ಹನ್ನೋಂದರ ಸುಮಾರಿಗೆ "ಗೋ ಓ ಓ........ಎಂಬ ಗದ್ದಲದ ಸಪ್ಪಳ
ಸಮೀಪದಿಂದಲೇ ಕೇಳಿಸಿ ಕೊಂಡಯ್ಯನಿಗೆ ಎಚ್ಚರವಾಯಿತು. ಹಲವು
ಸಹಸ್ರ ಕಂಠಗಳ ಗುಜುಗುಜು ಗೊಣಗೊಣವೇ ವಾತಾವರಣ ತುಂಬ
ಹಬ್ಬಿತ್ತು. ವರ್ಕ್ ಶಾಪ್ ಗೇಟಿನಿಂದ ಆ ಸಪ್ಪಳ ಬರುತ್ತಲಿತ್ತು.
ಕೊಂಡಯ್ಯ ಜಿಗಿದೆದ್ದು ಅಲ್ಲಿ ಧಾವಿಸಿದ. ಹತ್ತರ ಸುಮಾರಿಗೆ ವರ್ಕ್
ಶಾಪಿನ ಇಬ್ಬರು ಪ್ರಮುಖ ಕೆಲಸಗಾರರಿಗೆ ಡಿಸ್ ಮಿಸ್ ಆಜ್ಞೆ ಬಂತಂತೆ
ಅದನ್ನು ಪ್ರತಿಭಟಿಸಿ ಮಿಂಚಿನ ಮುಷ್ಕರ ನಡೆದಿತ್ತು. ಆದರೆ ಆ ಮೂರು
ಸಾವಿರ ಕಾರ್ಮಿಕರು ಹೊರಹೋಗದಂತೆ ಗೇಟುಮುಚ್ಚಿ, ಪೋಲೀಸರಿಬ್ಬರು

ಕಾವಲು ನಿಂತಿದ್ದರು.


ಟಿ.ಸಿ ಕೊಂಡಯ್ಯ

೧೯

ತನಗೇ ತಿಳಿಯದ ಹಾಗೆ ಕೊಂಡಯ್ಯ ಕೂಗಾಡಲು ಆರಂಭಿಸಿದ್ದ.
"ಗೇಟು ತೆರೆಯಿರಿ” ಎನ್ನುತ್ತಿದ್ದ. ಆತನೊಬ್ಬ ಗೇಟಿನ ಹೊರಗಿಂದ.
ಮೂರುಸಾವಿರ ಜನ ವುಳಗಿಂದ. ನಡುವೆ ಕಬ್ಬಿಣದ ಭೀಮದ್ವಾರ ಮತ್ತಿ
ಬ್ಬರು ಬಡಕಲು ಮೋರೆಯ ಪೋಲೀಸರು. ಮೊದಮೊದಲು ಕೆಲಸಗಾರರಿಗೆ,
ಟಿ.ಸಿ.ಕೊಂಡಯ್ಯ ಏನು ಮಾಡುತ್ತಿದ್ದನೆಂಬುದು ಗೊತ್ತಾಗಲಿಲ್ಲ.ಆತನೂ
ತಮ್ಮ ಪಕ್ಷವೇ ಎಂದು ತಿಳಿದಾಗ ಅವರಿಗೆ ಸಂತೋಷವಾಯಿತು.ಕೂಗು
ಬಲವಾಯಿತು.
ಪೋಲೀಸರು ಹೆದರಿ ಗೇಟು ತೆರೆದು ಓಡಿಹೋದರು. ಹೊರಬಂದ ಆ
ಪ್ರವಾಹದೊಡನೆ ಕೊಂಡಯ್ಯನೂ ಲೀನವಾಗಿ ತೇಲಿಹೋದ.ಅವನಿಗೆ
ಎಚ್ಚರ ತಿಳಿದಾಗ ನಗರದ ಮನೂರನೆಯ ಬೀದಿಗೆ ಬಂದು ತಲಪಿದ್ದ!
... ಮರುದಿನವೇ ಕೊಂಡಯ್ಯನಿಗೆ ಗುಂತಕಲ್ಲಿಗೆ ವರ್ಗವಾಯಿತು. ಆತ
ಕೂಲಿಗಾರರನ್ನು ಉದ್ರೇಕಿಸುತ್ತಿದ್ದನೆಂದು ವರದಿ ಹೋಗಿತ್ತೆಂದು ಅದಕ್ಕಾಗಿ
ಒಡನೆಯೇ ಟ್ರಾನ್ಸಫರ್ ಆಯಿತೆಂದೂ ಕಿಂವದಂಶಿ ಬಂತು.
ವರ್ಗವಾದ ವಾರ್ತೆ ಹಿತಕರವಾಗಿತ್ತು; ಆದರೆ ಕೇಳಿದ ಕಿಂನದಂತಿ
ಮಾತ್ರ ಅವನ ಮೈಯಲ್ಲೆಲ್ಲ ಬೆವರಿಳಿಸಿತು.
ಆದರೂ ನಸುನಕು ಆತ ಹೇಳಿಕೊಂಡ: "ನಮ್ಮಣ್ಣ ಸಾವಿರ ಸಲ
ಹೇಳಿದ್ದ ಯೂನಿಯನ್ ಕೆಲಸ ಮಾಡೂಂತ. ಈಗಲಾದರೂ ಆತನಿಗೆ
ತೃಪ್ತಿಯಾದೀತು...."
ಮನೆ ಸಾಮಾನುಗಳನ್ನೆಲ್ಲ ಗೆಳೆಯನೊಬ್ಬನ ಮನೆಯಲ್ಲಿಟ್ಟು, ಕ್ವಾರ್ಟರ್ಸ
ಖಾಲಿ ಮಾಡಿ,ಬರಿಯ ಬೆಡ್ದಿಂಗೊಂದನ್ನೇ ಹೊತ್ತುಕೊಂಡು, ಮಾರನೆ ದಿನ
ಮು೦ಜಾನೆ ಕೊಂಡಯ್ಯ ಗುಂತಕಲ್ಲಿಗೆ ಪ್ರಯಾಣ ಬೆಳಸಿದ.
ದೇಹಕೃಶವಾಗಿದ್ದರೂ,ಮನಸ್ಸು ಅರಳಿತ್ತು. ಯಾವುದೋ ಆಸೆ
ಚಿಗುರಿತ್ತು
"ಊರಿಗೆ ಸಮೀಪ ಹೋಗುತ್ತಿದ್ದೇನಿ. ಹಳೆಯ ನೆನಪನ್ನೆಲ್ಲ ಮರೆತು
ಹೊಸ ಜೀವನ ಶುರು ಮಾಡಬೇಕು"--- ಎಂಬೊಂದು ನಿರ್ಧಾರ, ನಿಧಾನ
ವಾಗಿ ಆ ಮನಸ್ಸಿನಲ್ಲಿ ರೂಪಿತವಾಯಿತು