ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 18 -

ಮಾವನಾದ ಜಲಾಲುದ್ದೀನ್ ಖಿಲ್ಜಿಯನ್ನು ರಾಜಭಿಲಾಷೆಯಿಂದ ಸಂಹರಿಸುವುದಕ್ಕೆ ಯಾವನು ಹಿಂಜರಿಯಲಿಲ್ಲವೋ, ಸಿಂಹಾಸನವನ್ನು ಹತ್ತುವುದಕ್ಕೆ ಹೋಗಬೇಕಾದ ಮಾರ್ಗದಲ್ಲಿದ್ದ ತನ್ನ ಬಂಧುಬಾಂಧವರನ್ನೂ ಗುರುಹಿರಿಯರನ್ನೂ ನೆಲ್ಲು ಹುಲ್ಲಿನಂತೆ ಕೊಟ್ಟು ಬಿಟ್ಟು ಯಾವನು ಮುಂದೆ ಗದ್ದುಗೆಯನ್ನು ಏರಿದನೋ, ಆ ವಿಶ್ವಾಸಘಾತುಕನೇ, ಆ ಪರಮಪಾಪಿಯೇ ಆತುಲ ಸೈನಿಕರೊಡನೆ ದೇವಗಿರಿಯ ಮುತ್ತಿಗೆಯನ್ನು ತೆಗೆದು ಓಡುವಂತಿದ್ದನು.

ಈ ಸಂಕಷ್ಟಕರವಾದ ಸಮಯವನ್ನು ಹೇಗೆ ಇದಿರಿಸಬೇಕೆಂಬ ವಿಷಯದಲ್ಲಿ ರಾಮದೇವರಾಜನು ತನ್ನ ಸ್ನೇಹಿತ ಸರದಾರರ ಆಲೋಚನೆಯನ್ನು ವಿಚಾರಿಸಿದನು. ರಾಮದೇವನ ಅಳಿಯನಾದ ಹರಪಾಲದೇವನು ಕೋಟೆಯನ್ನು ದಾಟಿ ಯುದ್ಧ ಕೊಡುವುದು ನ್ಯಾಯವಲ್ಲವೆಂದು ಹೇಳಿದನು. ಮಾತು ರಾಜನಿಗೆ ಸಮ್ಮತಿಯಾಯಿತು. “ಅಲ್ಲಾವುದ್ದೀನನು ಎರಡು ಸಲ ಸೋತು ಹೋದನು. ಮೂರನೆಯ ಸಲ ಹಾಕಿದ ಮುತ್ತಿಗೆಯನ್ನು ತಾನೇ ತೆಗೆದು ಈಗ ಪಲಾಯನ ಮಾಡುತ್ತಲಿರುವನು. ತಾನಾಗಿ ಹೀಯಾಳಿಸಿ ಶತ್ರುವನ್ನು ಕೆರಳಿಸಿ, ಹೋಗುವ ಮಾರಿಯನ್ನು ಕರೆದು, ನಮ್ಮ ಸೈನ್ಯವನ್ನು ಆಪತ್ತಿಗೆ ಗುರಿಮಾಡುವುದು ಶ್ರೇಯಸ್ಕರವಲ್ಲ, ಇದಲ್ಲದೆ ಅಲ್ಲಾದ್ದೀನನು ಯಾವ ಕಾರಣದಿಂದ ಪಲಾಯನ ಮಾಡುತ್ತಿರುವನೆಂದು ತಿಳಿಯಬೇಕು, ಅಭೇದ್ಯವಾದ ಕೋಟೆಯೊಳಗೆ ಸುರಕ್ಷಿತವಾಗಿದ್ದ ನಮ್ಮನ್ನು ಹಾವಾಡಿಗನು ಕೊಳಲೂದಿ ಬಿಲದಿಂದ ಹಾವನ್ನು ಹೊರಡಿಸುವಂತೆ - ಅವನು ಸೆಳೆಯಬೇಕೆಂಬ ಉಪಾಯಮಾಡಿದ್ದರೆ, ನಮ್ಮ ಸೈನ್ಯವೆಲ್ಲಾ ನಿರರ್ಥಕವಾಗಿ ಶತ್ರು ಹಸ್ತದಿಂದ ಸಂಹಾರವಾಗಬಹುದು” ಎಂದು ರಾಮದೇವನ ಅಳಿಯನ ಅಭಿಪ್ರಾಯವನ್ನು ಬಲಗೊಳಿಸಿದನು. ಈ ಮಾತು ಕೃಷ್ಣರಾಜನಿಗೆ ಯಾವ ಕಾರಣದಿಂದಲೂ ಸಮ್ಮತವಾಗಲಿಲ್ಲ, ಅವನು ಯುದ್ಧ ಮಾಡಲೇಬೇಕೆಂದು ನಿಂತುಬಿಟ್ಟನು. “ಅಲ್ಲಾವುದ್ದೀನನು ಈಗ ಹಿಮ್ಮೆಟ್ಟಿದರೂ ಮತ್ತೆ ಮತ್ತೆ ಬಾರದೆ ಇರಲಾರನು. ಯಾರೂ ಬಾರದೆ ಹೋದರೂ, ನಮ್ಮ ಸೈನ್ಯವನ್ನು ನಾನೊಬ್ಬನೇ ಕೋಟೆಯ ಹೊರಕ್ಕೆ ಕೊಂಡುಹೋಗಿ, ಶತ್ರುವು ಯಾವ ಉಪಾಯದಿಂದಲಾದರೂ ನನಗೆ ತಲೆಬಾಗಿಸುವಂತೆ ಮಾಡಿ, ದೇವಗಿರಿರಾಜ್ಯವು ನನ್ನನ್ನು ಚಿರಕಾಲ ಸ್ಮರಿಸುವಂತೆ ಮಾಡುವೆನು” ಎಂದು ಕೃಷ್ಣರಾಜನು