ಪುಟ:ಹಳ್ಳಿಯ ಚಿತ್ರಗಳು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮

ಹಳ್ಳಿಯ ಚಿತ್ರಗಳು

ಸಾಗುವಳಿ ಮಾಡಿದ್ದ. ಬಹಳ ನಂಬಿಕಸ್ಯ. ಆವನ ಹಳ್ಳಿಯು ರಸ್ತೆಯ ಮಗ್ಗುಲಲ್ಲಿಯೇ ಇದೆ. ಗಾಡಿಯು ತನ್ನ ಹಳ್ಳಿಯ ಬಳಿಗೆ ಬಂದ ಕೂಡಲೇ, ಅವನ ಎತ್ತುಗಳು ಅಭ್ಯಾಸದಿಂದ ಗಾಡಿಯನ್ನು ಹಳ್ಳಿಯ ಕಡೆಗೆ ಎಳೆದವು. ಗಾಡಿಯವನು ನಮ್ಮ ಭಾವನವರನ್ನು ಕುರಿತು "ಸ್ವಾಮಿ ತಾವು ಹೋಗಿ ಬಿಡಿ, ಎತ್ತುಗಳನ್ನು ಎರಡು ಗಂಟೆ ಮನೆಯ ಮುಂದೆ ಬಿಟ್ಟು ಸುದಾರಿಸ್ಕೊಂಡು, ಸ್ವಲ್ಪ ಹುಲ್ಲು ತಿನ್ನಿಸಿ ಗಾಡೀನ ಹೊಡ್ಕೊಂಡು ಬರ್‍ತೇನೆ" ಎಂದ. ಭಾವನವರಿಗೂ ಗಾಡಿಯಲ್ಲಿ ಕೂತು, ಕುಲಕಾಡಿ ಸೊಂಟವೆಲ್ಲಾ ನೋವು ಹತ್ತಿತ್ತು. ಅವರು ಹಾಗೆಯೇ ಮಾಡು” ಎಂಬುದಾಗಿ ಹೇಳಿ ಮಡಿಚೀಲವನ್ನು ಮಾತ್ರ ಹೆಗಲಿನ ಮೇಲೆ ಇಟ್ಟುಕೊಂಡು, ಗಾಡಿಯಿಂದ ಇಳಿದು ಮನೆಗೆ ಬಂದರು. ಬಂದವರೇ ನಮ್ಮನ್ನೆಲ್ಲಾ ಕುರಿತು ಒಂದುತಟ್ಟಿ ತುಂಬ ತಿಂಡಿ ತಂದಿದೀನಿ. ಸುಮ್ಮನೆ ಇರಿ. ಎಲ್ಲರಿಗೂ ಬೇಕಾದ ಹಾಗೆ ಕೊಡ್ತೀನಿ; ಒಂದು ಘಳಿಗೆ ತಡೀರಿ, ತಿಂದು ತೇಗುವಿರಂತೆ” ಎಂಬುದಾಗಿ ಹೇಳಿದರು.

ಮಧ್ಯಾಹ್ನ ಊಟವಾಯಿತು. ನಾವು ಜಗಲಿಯ ಒಂದು ಮೂಲೆಯಲ್ಲಿ ಕುಳಿತು, 'ಚೌಕಬಾರವನ್ನು' ಆಡುತ್ತಾ ಎಷ್ಟು ಹೊತ್ತಿಗೆ ತಿಂಡಿಯು ಬಂದೀತೋ ಎಂದು ನಿರೀಕ್ಷಿಸುತ್ತಿದ್ದೆವು. ನಮ್ಮ ತಂದೆಯವರೂ ಭಾವನವರೂ ಮತ್ತೊಂದು ಜಗಲಿಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಭಾವನವರು "ಗಾಡಿಯವನು ನಂಬಿಕಸ್ತ, ಯೋಗ್ಯ, ಸಹನಾವಂತ" ಎಂದೂ ಮುಂತಾಗಿ ಹೇಳುತ್ತಿದ್ದರು. ಅವರ ಮಾತು ಪೂರ್ಣವಾಗುವುದಕ್ಕೆ ಮುಂಚಿತವಾಗಿಯೇ, ಗಾಡಿಯವನು ಮಡಿ ಶಾಲುವಿನಿಂದ ಸುತ್ತಿದ್ದ ಅವರ ಬುಟ್ಟಿಯನ್ನು ತಲೆಯಮೇಲೆ ಹೊತ್ತುಕೊಂಡು ಬಾಗಿಲಿಗೆ ಬಂದನು. ಅವನನ್ನು ನೋಡಿದ ಕೂಡಲೆ ನಮ್ಮ ಭಾವನವರು "ಮುಠಾಳ ಅನ್ಯಾಯ ಮಾಡಿಬಿಟ್ಟೆಯೆಲ್ಲ!” ಎಂದರು. ಒಂದು ಘಳಿಗೆ ಮುಂಚೆ ಹೊಗಳುತ್ತಿದ್ದವರು, ಈಗ ಬೈಯುವುದಕ್ಕೆ ಕಾರಣವೇನೆಂದು ನಮ್ಮ ತಂದೆಯವರಿಗೆ ತಿಳಿಯಲಿಲ್ಲ. ಭಾವನವರು ಕೋಪದಿಂದ ಗಾಡಿಯವನನ್ನು ಕುರಿತು "ಇದನ್ಯಾಕೆ ತೆಗೆದುಕೊಂಡು ಬಂದೆ, ಗಾಡಿ ಎಲ್ಲಿ?” ಎಂದರು. ಗಾಡಿಯವನು ಗಾಡಿಯನ್ನು ನನ್ನ ಮಗ ರಾತ್ರಿಗೆ ಹೊಡೆದುಕೊಂಡು