ಪುಟ:ಹಳ್ಳಿಯ ಚಿತ್ರಗಳು.djvu/೧೦೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೮೭
ನಗೆಯ ನೀತಿ

ಬಾಯಿಂದ ಹೊರಕ್ಕೆ ಬರುತ್ತದೆ. ಸೌಟಿನಲ್ಲಿ ಬಡಿಸಬೇಕು; ಚಮಚಾದಲ್ಲಿ ಬಡಿಸಕೂಡದು; ಬಾಯಿನೀರನ್ನು ಎಡಗಡೆಗೆ ಮುಕ್ಕುಳಿಸಿ ಉಗಿಯ ಬೇಕು; ಬಲಗಡೆಗೆ ಉಗಿಯಕೂಡದು. ಈಚಲಮರದ ಮೇಲೆ ಬಟ್ಟೆಯನ್ನಿಟ್ಟರೆ ಅದು ಮಡಿಯೋ? ಅಲ್ಲವೋ? ಈ ವಿಷಯಗಳನ್ನೆಲ್ಲಾ ಅವರು ೫-೬ ವರ್ಷಗಳವರೆಗೆ ಸಂಪ್ರದಾಯ ಗ್ರಂಥಗಳನ್ನೆಲ್ಲಾ ವ್ಯಾಸಂಗಮಾಡಿ ತೀರ್ಮಾನ ಮಾಡಿದ್ದಾರೆ.

ಈಗ ಹನ್ನೆರಡು ವರ್ಷಗಳ ಹಿಂದು ಮಾತು. ಆಗ ಮೇಲುಕೋಟೆಯಿಂದ ನಮ್ಮೂರಿಗೆ ರೈಲು ಇರಲಿಲ್ಲ. ಎತ್ತಿನ ಗಾಡಿಯಲ್ಲಿಯೇ ಪ್ರಯಾಣ. ಬೆಳಿಗ್ಗೆ ಹೊತ್ತಿಗೆ ಮುಂಚೆ ಹೊರಡುವುದಕ್ಕೆ ಕಳ್ಳರ ಭಯ; ರಾತ್ರೆ-ಹೊತ್ತು ಮೀರಿ ಪ್ರಯಾಣವನ್ನು ಮುಂದೆ ಸಾಗಿಸಲು ಕಳ್ಳರ ಭಯ. ಹೀಗಾಗಿ ಮೇಲುಕೋಟೆಯಿಂದ ನಮ್ಮೂರಿಗೆ ಬರಲು ಐದು ದಿನಗಳು ಹಿಡಿಯುತ್ತಿದ್ದುವು. ಒಂದು ಸಲ ನಮ್ಮ ಭಾವನವರು ನಮ್ಮೂರಿಗೆ ಬರುತ್ತೇನೆಂದು ಕಾಗದ ಬರೆದುದರಿಂದ ನಮ್ಮ ರೈತನ ಗಾಡಿಯೊಂದನ್ನು ಕಳುಹಿಸಬೇಕಾಯಿತು. ಶ್ರೀಕೃಷ್ಣ ಜಯಂತಿಯಾದ ಮರುದಿವಸವೇ ನಮ್ಮ ಭಾವನವರು ಮೇಲುಕೋಟೆಯಿಂದ ಹೊರಟರು. ಅಯ್ಯಂಗಾರ ಕೃಷ್ಣಜಯಂತಿ ಅಂದರೆ ನಿಮಗೆ ತಿಳಿದೇ ಇದೆ. ಅದರಲ್ಲೂ ವೈದಿಕರಾದವರ ವಿಷಯ ಕೇಳಬೇಕಾದುದೇ ಇಲ್ಲ. ಅವರು ನೂರಾರು ಹೊಸ ತಿಂಡಿಗಳಿಂದ ಕೃಷ್ಣ ಪರಮಾತ್ಮನನ್ನು ತುಷ್ಟಿಪಡಿಸುತ್ತಾರೆ. ನಮ್ಮ ಅಕ್ಕ ನಮ್ಮೂರಲ್ಲೇ ಇದ್ದರು. ಆದುದರಿಂದ ನಮ್ಮೂರಿಗೆ ತಿಂಡಿಯನ್ನು ತರುವುದಕ್ಕೆ, ನಮ್ಮ ಭಾವನವರಿಗೆ ಒಂದು ವಿಶೇಷ ಕಾರಣವಿದ್ದಿತು. ಅವರು ದೊಡ್ಡದಾದ ಒಂದು ಬುಟ್ಟಿಯನ್ನು ತೆಗೆದು ಅದರಲ್ಲಿ ಲಾಡು, ಚಕ್ಕುಲಿ, ಮನವರಂ, ಪೂರಿ, ಮುಂತಾದ ತಿಂಡಿಗಳನ್ನೆಲ್ಲಾ ತುಂಬಿ, ಅದರಮೇಲೆ ಕಾಶಿಯ ಒಂದು ಬಿಳಿಯ ಮಡಿ ಶಾಲುವನ್ನು ಬಿಗಿದು ಕಟ್ಟಿ, ೨-೩ ಪೆಟ್ಟಿಗೆ ಹಾಸಿಗೆಗಳ ಕೂಡ ಗಾಡಿಯಲ್ಲಿ ಹಾಕಿಕೊಂಡು ಊರಿನ ಕಡೆಗೆ ಹೊರಟರು. ೫ ದಿವಸ ಕಳೆದ ಮೇಲೆ ಪದ್ಧತಿಯಂತೆ ಊರ ಹತ್ತಿರಕ್ಕೆ ಬಂದರು.

ನಾವು ಕಳುಹಿಸಿದ್ದ ಗಾಡಿಯವನು ನಮ್ಮೂರಿಗೆ ಎರಡು ಮೈಲು ದೂರದ ರಾಮೋಹಳ್ಳಿಯವನು. ಅಲ್ಲಿ ನಮ್ಮ ಜಮೀನನ್ನೆಲ್ಲ ಅವನೇ