ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

414 7 8, 7 Ch. ಅಪಭ್ರಂಶಪ್ರಕರಣ. ಸೂತ್ರಂ || ೨೬೯ || In the beginning ಅ becomes ಉ, ಇ, ತ್ವಾದೇಶಮುಮಿತ್ತ ವೃತ್ತಿಯುಂ ಹತ್ವಮುಮಾ- || or ಹ; after the ಪಾದಿತಮಕ್ಕುಂ ಜ್ಞ- | first syllable en becomes ( or ೯, ಕ್ಯಾದಿಯನುಣಿದು ನಕ್ಕುಮದು ಬಹುಳತೆಯಿಂ || ೨೮೩ || ಪದಚ್ಛೇದಂ,- ಆದಿಯೊಳ್ ಇರ್ದ ಅತ್ವಕ್ಕೆ ಉತ್ಪಾದೇಶಮುಂ ಇತ್ವ ವೃತ್ತಿಯು ಹತ್ವ ಮುಂ ಆಪಾದಿತ: ಅಕ್ಕುಂ, ಜ್ಞತ್ವಕ್ಕೆ ಆದಿಯಂ ಉದ್ದು ( ಅಕ್ಕಂ, ಅದು ಬಹುಳತೆಯಿಂ. ಅನ್ವಯಂ.- ( ಅದು ಬಹುಳತೆಯಿಂ ಆಕ್ಕುಂ ಎಂಬುದನ್ವಯಂ, ಟೀಕು. - ಆವಿಯೊಳ = ಮೊದಲಲ್ಲಿ ; ಇರ್ದತ್ವಕ್ಕೆ = ಇರ್ದಕಾರಕ್ಕೆ; ಉತ್ಪಾದೇಶ ಮುಂ = ಉಕಾರದ ಆದೇಶಮುಂ; ಇತ್ವ ವೃತ್ತಿಯುಂ = ಇಕಾರದ ವರ್ತನೆಯುಂ; ಹತ್ವ ಮುಂ= ಹಕಾರಮು; ಆಪಾದಿತಂ= ಪ್ರತಿಪಾದಿಸಲ್ಪಡುವುದು; ಅಕ್ಕು = ಆಗುವುದು; ಜ್ಞತ್ವಕ್ಕೆ = ಜ್ಞಕಾರಕ್ಕೆ ; ಆದಿಯ= ಮೊದಲಂ; ಉಳಿದು = ಬಿಟ್ಟು; ನಂ = ದ್ವಿತ್ವದ ನಕಾರಂ; ಅದು = ಅದು; ಬಹುಳತೆಯಿಂ= ಬಹುಳತ್ವದಿಂದೆ; ಅಕ್ಕುಂ= ಆಗುವದು. ವೃತ್ತಿ.- ಪದದಾದಿಯಕಾರಕ್ಕುಕಾರಮುಮಿಕಾರಮುಂ ಹಕಾರವು ಮಕ್ಕುಂ; ಆದಿಯಂ ಕಳೆದುಲದ ಸ್ಥಿತ್ವಕ್ಕೆ ದ್ವಿತ್ವದ ನಕಾರಂ ಬಹುಳದಿನಕ್ಕುಂ. ಪ್ರಯೋಗಂ.- ಅತ್ವಕ್ಕುತ್ವಂ-ಅಂಗುಷ್ಠಂ= ಉಂಗುಟಂ; ತ್ವರಿತಂ=ತು ರಿಹಂ. ಅತ್ರಕ್ಕಿಂ -ಭೂಕಂ= ಜಿಗುಳೆ; ಅಂಗಾರ= ಇಂಗಳಂ. ಅತ್ರಕ್ಕೆ ಹತ್ವಂ– ಅಗ್ನಿ = ಹಗ್ಗಿ, - ಜ್ಞಕಾರಕ್ಕೆ ದ್ವಿತ್ವನಕಾರಂ-ವಿಜ್ಞಾನಂ= ಬಿನ್ನಣಂ; ವಿಜ್ಞಾಪನಂ = ಬಿನ್ನ ಸಂ; ಸಂಜ್ಞೆ = ಸನ್ನೆ; ಯಜ್ಞಂ = ಜನ್ನಂ. ಬಹಳಮೆಂಬುದದಿಂದಾಜ್ಞೆಗೆ ಆಣೆಯೆಂದುಂಟು.