ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬
ಹೂಬಿಸಿಲು

ಅಡ್ಡ ಹೆಸರುಗಳನ್ನು ಆಗಲೇ ಹಾಕಿಟ್ಟಿದ್ದಳು. “ಕಟ್ಟು-ಕನ್ನಡಿ ಹಾಕಿಸೋಣ ತಾ” ಎಂದು ಅವರ ಮಾವ ಕೇಳಿದಾಗ ಕೊಟ್ಟಿರಲಿಲ್ಲ. ನಿಜವಾದ ಕಾರಣವನ್ನು ಮಗನಿಂದ ತಿಳಿದುಕೊಂಡಾಗ ವಕೀಲರು “ಆಗಲಿ, ಅವಳ ಮನಸಿನಂತಾದ ಮೇಲೆಯೇ ಅವಕ್ಕೆ ಕನ್ನಡಿ ಹಾಕಿಸೋಣ” ಎಂದುಕೊಂಡು ಸುಮ್ಮನಾದರು.

ಅವೆಲ್ಲ ವಸ್ತುಗಳನ್ನು ನೋಡಿದೊಡನೆ ಅವಳಿಗೆ ಸಂಕಟ-ವಾಯಿತು. ಹಿಂದಿನ ಮಾತುಗಳೆಲ್ಲ ನೆನಪಾಗಿ ಮೈ ಜುಮ್ಮೆಂದಿತು. ಸೋದರತ್ತೆ ಮಾವ ಹಾಗು ಶಂಕರನಾಮಾ ಇವರ ಜತೆಯು-ಆ ಸ್ವರ್ಗಸುಖವು-ಹಿಂದಿನ ಜನ್ಮದಲ್ಲಿ ಸಿಕ್ಕಿತ್ತೊ ಏನೋ.......... ಇಂದಿನಿಂದ ಇನ್ನೊಂದು ಜನ್ಮಕ್ಕೆ ಪ್ರಾರಂಭವಾಯಿತೋ ಏನೋ? ಎಂದೆನಿಸಿ ಹೋಯಿತು ಲೀಲೆಗೆ.

ಕೂಡಲೆ, ಸರಿರಾತ್ರಿಯಾಗಿದ್ದರೂ ನಿದ್ರೆ ಹೋಗದೆ, ತಟ್ಟನೆ ಶಂಕರನಾಮಾನ ಹೆಸರಿಗೆ ಒಂದು ಪತ್ರವನ್ನು ಬರೆದಳು. ತನ್ನನ್ನು ತೇಗೂರಿನ ವಾಸದಿಂದ ಬೇಗ ತಪ್ಪಿಸಬೇಕೆಂದು ಬಲವಂತ ಮಾಡಿ-ದ್ದಳು. ತನ್ನ ಬಂಧವಿಮೋಚನೆಗಾಗಿ ಸೆರಗೊಡ್ಡಿ ಮೂವರಿಗೂ ಬೇಡಿಕೊಂಡಿದ್ದಳು........ ಆದರೆ ಅಂಚೆಪೆಟ್ಟಿಗೆಯಲ್ಲಿ ಒಗೆಯುವ ಬಗೆ ಹೇಗೆ......?

ಮರುದಿನವೇ ಮಾವನಿಂದ ಪತ್ರ ಬಂದಿತು; ಮುಂಬಯಿಗೆ ಹೊರಡಲಿಕ್ಕೆ ಕೂಡಲೇ ಬರಬೇಕೆಂದು.

ಆದರೆ ಇವಳ ತಂದೆ ಅದರ ಗಂಧವು ಕೂಡ ಇವಳಿಗೆ ಹತ್ತ.ದಷ್ಟು ಜಾಗರೂಕತೆಯಿಂದ ಹೊರಗಿನಿಂದ ಹೊರಗೆಯೇ ಆ ಪತ್ರಕ್ಕೆ “ಅವಳಿನ್ನೂ ಎರಡು ತಿಂಗಳು ಈ ಊರು ಬಿಡಲಿಚ್ಛಿಸುವದಿಲ್ಲ" ವೆಂದು ಪತ್ರ ಬರೆಯಿಸಿಬಿಟ್ಟನು.

ಲೀಲೆ ಬರಲಿಲ್ಲವೆಂದು ಅಸಮಾಧಾನಪಟ್ಟು ಪದ್ಮಾಬಾಯಿಯು ಮುಂಬಯಿಗೆ ಹೋಗಲಿಲ್ಲ. ಪತ್ರದ ಉತ್ತರವನ್ನೋದಿಕೊಂಡು