ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೊಡ್ಡಮ್ಮ ನೋಡಿದ ವರ
೫೧

ನಾಲ್ಕೈದು ದಿನಗಳ ತರುವಾಯ ಸೂಟಗೆಂದು ವಿನೋದಕ್ಕಾಗಿ ಪ್ರವಾಸ ಮಾಡಲು ಹೋಗಿದ್ದ ಭಾಸ್ಕರನು ಮರಳಿ ಊರಿಗೆ ಬಂದನು, ತಂದೆಯ ಕಪಟತಂತ್ರವನ್ನು ಗೆಳೆಯರಿಂದ ಸ್ಟೇಶನ್ನಿನಲ್ಲಿಯೇ ಅರಿತುಕೊಂಡು ಬೆಪ್ಪಾದನು.

ತಾನs ಮಾಡಿಕೋತೇನಿ ಆ ಹುಡಿಗೀನ್ನಂತ ಹೇಳಬೇಕಿತ್ತು ನನಗ, ನಾಯೆನ ಬ್ಯಾಡಂತಿದ್ನೆ? ಸ್ವತಃ ನನ್ನ ಕೈಲೆ ಅಪ್ಪನ ತಲೀಮಾಲ ಈಗ ಎರಡು ಸಾರೆ ಹ್ಯಾಂಗೂ ಅಕ್ಷತ ಹಾಕಿದ್ದೆ. ಇನ್ನೂ ಒಮ್ಮೆ ಹಾಕಿದ್ದೆ .. ಅಲ್ಲ, ಲಗ್ನದ ಸುದ್ದಿ, ಕಡಿತನಕಾನೂ ಇಷ್ಟು ಗುಪ್ತಾಗೆರs ಹ್ಯಾಂಗ ಉಳಿತು, ಆ ಹುಡಿಗೇರ ಅವಗ ಮಾಡಿಕೊಳ್ಳಿಕ್ಕೆ ಒಪ್ಪಿದ್ಧರ ಹ್ಯಾಂಗ, ಎಲ್ಲಾನೂ ಆಶ್ಚರ್ಯನ ಆಗೂ ಹಾಂಗದನಪಾ !"

ಒಬ್ಬ ಗಟ್ಟಿಗ ಗೆಳೆಯನು ಉತ್ತರ ಕೊಟ್ಟನು. “ತಮ್ಮಾ, ಅದೆಲ್ಲಾ ನಿಮ್ಮಪ್ಪನ ಹತೀಲಿರೋ ದುಡ್ಡಿನ ಬಲಾ ನೋಡು. ಹುಡಿಗ್ಗೆ ಹುಡಿಗ್ಗೆ - ಸಂಪೂರ್ಣ ಮೋಸ ಮಾಡಿದಾ. ಎಲ್ಲಾರ ಬಾಯಾಗ ದುಡ್ಡು ತುಂಬಿ, ಲಗ್ನದ ಸುದ್ದಿ ಅವರ ಬಾಯಾಗಿಂದ ಹೊರಗೆ ಹೋಗದ್ದಾಗ ಅವರ ಬಾಯಿ ಬಂದಮಾಡಿಬಿಟ್ಟಾ...."

ಭಾಸ್ಕರನಿನ್ನೂ ಅಭ್ಯಾಸದ ಮೂಲಕ ಅವಿವಾಹಿತನು. ಸರೋಜಳಂತೂ ರಂಗರಾಯರ ಪತ್ನಿ ಯಾಗಿದ್ದು ಬಿಟ್ಟಳು. ಆದರೂ ರಂಗರಾಯರು ಬಡ್ಡಿಯ ವ್ಯವಹಾರದಲ್ಲಿ ತಲ್ಲೀನರಾಗಿ ದಿವಾಣಖಾನೆಯಲ್ಲಿ ಕುಳಿತಾಗ, ಒಮ್ಮೊಮ್ಮೆ ಭಾಸ್ಕರನು ಅಳುತ್ತಿದ್ದು ಸರೋಜಳು ಸಂತೈಸುತ್ತಿರುವದನ್ನೂ ಒಮ್ಮೊಮ್ಮೆ ಸರೋಜಳು ಅಳುತ್ತಿದ್ದು ಭಾಸ್ಕರನು ಸಂತೈಸುತ್ತಿರುವುದನ್ನೂ ಪರಮಾತ್ಮನೇನೋ ಎಷ್ಟೋ ಸಾರೆ ಕಂಡಿರುವನೆಂದು ಜನರು ಆಡಿಕೊಳ್ಳುತ್ತಾರೆ....ಅದು ಸಟಿಯೋ, ದಿಟವೋ, ಆ ಪರಮಾತ್ಮನಿಗೇ ಗೊತ್ತು.