ಬಕಪಕ್ಷಿ
ಕಟ್ಟೆ; ಕಟ್ಟಿಗೆಯದೊಂದೇ ಅಡ್ಡೆ; ಹೊಲೆಯರ ತಿಮ್ಮನದೊಂದೇ ಮನೆ. ಊರ ನಡುವೆ ಮೂರು ಕಿರಾಣೀ ಅಂಗಡಿಗಳ ಮಳಗಿಯ ಸಾಲೊಂ- ದಿದ್ದಿತು. ಇತ್ತೀಚೆಯ ಹತ್ತು ವರುಷಗಳಲ್ಲಿ, ಪೇಟೆಯ ಮಧ್ಯದಲ್ಲಿ ಉಡುಪಿಯ ಸಿ. ಮೇಘಶ್ಯಾಮಾಚಾರ್ಯರ ಚಹಾ-ಫಲಾಹಾರದ ಅಂಗಡಿಯೊಂದು, ಗುರುಪಾಲ ಸಾಹುಕಾರರ ಹಿಡಕು-ಮುಡಕು ಬೆಳ್ಳಿ-ಬಂಗಾರದ ಸಾಮಾನುಗಳ ಸರಾಫೀ ಅಂಗಡಿಯೊಂದು, ಹಜರತಖಾನನ ಸಿನ್ನರ ಬಿಡಿಯ ಅಂಗಡಿಯೊಂದು, ಇವಿಷ್ಟಾಗಿ ಬಿಟ್ಟಿವೆ; ಸಾಯಂಕಾಲದ ಹೊತ್ತಿನಲ್ಲಿ ಸಿ.ಮೇಘಶ್ಯಾಮಾಚಾರ್ಯರು ತಮ್ಮ ಹೋಟೆಲಿನಲ್ಲಿ ಇತ್ತೀಚೆ ತಂದಿದ್ದ ತಮ್ಮ ಕಿಟ್ಸನ್ ಲಾಯಿಟು ಹೊತ್ತಿಸತೊಡಗಿದರೆಂದರೆ ಊರಿಗೆ ಊರೇ: ಸೋಜಿಗಬಟ್ಟು ನೋಡುತ್ತ ನಿಲ್ಲುವದಂತೆ. ಹೆಣ್ಣು ಮಕ್ಕಳು ಸಹ ನೀರಿನ ನೆವಮಾಡಿ ಬಗಲೊಳಗೆ ಒಂದೊಂದು ಕೊಡವಿಟ್ಟುಕೊಂಡು ಸರಿಯಾಗಿ ಆ ವೇಳೆಗೆ ಆ ದಾರಿಯಿಂದ ಹಾಯುತ್ತಿದ್ದರಂತೆ. ಹಲಕೆಲವರು ಹಿರಿ- ಯರಂತೂ ಬಾಯಿಯಲ್ಲಿ ಬೊಟ್ಟಿಟ್ಟು, "ನೋಡಿದಿರಾ ಸೋಜಿಗಾನ, ಆಗಿನ ಊರೂರಿಗೂ ಈಗಿನ ಊರೂರಿಗೂ ಎಷ್ಟು ವ್ಯತ್ಯಾಸ? ಆಗಿನದು ಹಳ್ಳಿ ಆಗಿದ್ದರ ಈಗಿನದು ಬಂಬೈ ಆಗೇದ ಬಂಬೈ...." ಎನ್ನುವರು.
ಊರ ಹೊರಗೆ ಆ ಸಾಧುವಿನ 'ಊರೂರಪ್ಪಾ' ಎಂಬ ಹೆಸ- ರಿನ ಶಿಲಾಲೇಖವುಳ್ಳ ಒಂದು ಸಮಾಧಿ, ಎದುರಿಗೊಂದು ಅಶ್ವತ್ಥಕಟ್ಟಿ, ಕಟ್ಟೆಯ ಮೇಲೊಂದು ಭರಮಪ್ಪದೇವರ ಕಲ್ಲು. ಇದೇ ಈ ಕಟ್ಟೆಯ ಮೇಲೆ ಊರೂರಪ್ಪನು ಗುಡುಗುಡಿಯನ್ನು ಸೇದು, ಬಂದ ಭಕ್ತರ ಕಷ್ಟ ಪರಿಹಾರಾರ್ಥವಾಗಿ ಕುಳ್ಳಿರುತ್ತಿದ್ದನಂತೆ. ಇರಲಿ.
ನಮ್ಮಜ್ಜನ ಮನೆಮಾರು, ಹಾಲು ಉಕ್ಕಿದಂತೆ, ಧನ-ಧಾನ್ಯ- ಸಂತತಿ-ಸಂಪತ್ತಿಗಳಿಂದ ಉಕ್ಕಿ ಬಂದದ್ದು ಆ ಮಹಾರಾಯನ ಪುಣ್ಯ- ದಿಂದಲೇ ಅಂತೆ. ನಮ್ಮ ತಾಯಿ ತಂದೆಗಳು ನನಗಿದನ್ನು ಹೇಳುತ್ತಿದರು.