ದೇವರದ ನಾ ಎಂದಿಗಾರ ಸುಮಾರ ಮಾಡೆನ? ” ಎಂದವಳೇ ಸಿದ್ಧಳಾಗಿ ಕೀಲಿಹಾಕಿ ಎದ್ದಳು.
ದಾರಿಯಲ್ಲಿ ಎರಡು ವಸತಿಗಳನ್ನು ಹಾಕಿ, ಮರುದಿವಸ ಹುಣ್ಣಿಮೆಯ ದಿನವೇ ನಸುಕಿನಲ್ಲಿ ಗುಡ್ಡಕ್ಕೆ ಬಂದು ಮುಟ್ಟಿ ದರು. ಅಲ್ಲಿ ಅವನ ಸ್ನಾನಪೂಜಾದಿ ವಿಧಾನಗಳು, ಊಟ ಎಲ್ಲವೂ ಮುಗಿಯ ಬೇಕಾದರೆ ಮಧ್ಯಾಹ್ನವೇ ಆಯಿತು. ಸುದೇವನಿಗೆ ಊರ ಕಡೆಗೆ ಹೋಗಲು ಅಪ್ಪಣೆ ಸಿಕ್ಕಿತು. "ಜ್ವಾಕಿ ಹಾಂ ನನ್ ಮಗನ. ಇಕಾ ಹಿಡಿ ಒಂದ ನಾಕಾರ ರುಪಾಯಿ ನಿನ್ ಹಂತ್ಯಾಕ ಇರ್ಲೀ, ನಿನಗ ತಿನ್ನಾಕ ಉಣ್ಣಾಕ ಬೇಕಾದ್ರ, ಭಾಳ ಜ್ವಾಕೀ ಅಂದೆ ” ಎಂದು ಹೇಳಿ ಮದ್ದಿಟ್ಟು ಕಳಿಸಿದಳು.
ಸಾದೇವನು ಇನ್ನೂ ಮಧ್ಯಾಹ್ನವಿರುವಾಗಲೆ ಊರಿಗೆ ಬಂದು ಮುಟ್ಟಿದನು. ತಾಯಿಯ ಆಗ್ರಹದಿಂದ ಹೊಟ್ಟೆ ಭಾರವಾಗುವಷ್ಟು ಹೋಳಿಗೆಯೂಟವು ಬಿದ್ದಿತ್ತು. ಸಾದೆವನು ಅಷ್ಟು ಮಿತಿ ಮೀರಿ ಎಂದೂ ಉಡವನಲ್ಲ; ಪೈಲವಾನನು. ತನ್ನಳತೆಯಲ್ಲಿಯೆ, ಸಾತ್ವಿಕ-ಪೌಷ್ಟಿಕ ಆಹಾರವನ್ನೇ ಸೇವಿಸುತ್ತಿದ್ದನು, ಆಗಿನ ಆ ಊಟದಿಂದ ಅವನಿಗೆ ನಿದ್ರೆ ಬರಹತ್ತಿತು- ಆಲಸ್ಯವುಂಟಾಯಿತು. ಮನೆಗೆ ಬಂದವನೇ ಮಲಗಿಬಿಟ್ಟವನು ಎಚ್ಚರಾದಾಗ ನೊಡುತ್ತಾನೆ, ರಾತ್ರಿ ಹತ್ತು ಬಡಿದು ಹೋಗಿತ್ತು, ಹಾಲಿನಾಕೆಯ ಮನೆಗೆ ಹೋಗಿ ಸ್ವಲ್ಪ ಚಟದ ಪೂರ್ತಿ ಹಾಲು ಕುಡಿದು ಬಂದನು.
****
ಸುಮಾರು ರಾತ್ರಿಯ ಎರಡು ಗಂಟೆಯಾಗಿರಬಹುದು. ಮೊದಲೇ ಭಾರತ ಹುಣ್ಣಿಮೆ. ಅಂದು ಹಿಟ್ಟು ಚೆಲ್ಲಿದಂತೆ ಬೆಳದಿಂಗಳು ಬಿದ್ದಿತ್ತು. ತಣ್ಣನ್ನ ಚಳಿಯು ಬಿಟ್ಟಿತ್ತು. ಮಧ್ಯರಾತ್ರಿಯಾದುದರಿಂದ ಎಲ್ಲೆಡೆಯಲ್ಲಿಯೂ ಸದ್ದಡಗಿ ಶಾಂತವಾಗಿತ್ತು-ತಣ್ಣಗಾಗಿತ್ತು.
ಛಾವಣಿಯ ಎದುರಿಗೆ ಬಡ್ಡಿಯವರ ತೋಟಕ್ಕೆ ಹೊಂದಿ ಜೋಯಿಸರ ಮನೆತನದ ಹಿರಿಯರು ಕಟ್ಟಿಸಿದ ಒಂದು ಮಾಟಾದ