ಇಷ್ಟೆಲ್ಲ ತಾಯಿಮಕ್ಕಳ ಮಾತು-ಕತೆಗಳಾಗುವಷ್ಟರಲ್ಲಿ ದ್ಯಾಂವಕ್ಕನ ಕಿವಿಗೆ ಉಧೋ ಉಧೋ ಎಂಬ ಗರ್ಜನೆಯು, ಸುಮಾರು ಒಂದು ಕೂಗಳತೆಯ ಮೇಲಿಂದ ಕೇಳಬಂದಿತು, ಆಗ ಚುಮುಚುಮು ಬೆಳಗಾಗಿತ್ತು. ಕೈಯಲ್ಲಿ ಕಂದೀಲನ್ನು ಹಿಡಿದುಕೊಂಡ ದ್ಯಾಂವಕ್ಕ ಹೊರಗೆ ಬಂದಳು. ಕೊಲ್ಲಾರಿಯನ್ನು ಕಟ್ಟಿ ಸವಾರಿ-ಯಿಂದ ಸಜ್ಜಾಗಿ, ಕೂಟನ ಹತ್ರ ಒಂದು ಬಂಡಿಯು ಬರುತ್ತಿದ್ದಂತೆ ಮಸುಮಸುಕಾಗಿ ಕಂಡಿತು. ಚಿಗುರುಗೊಡಿಗೆ ಗೊಂಡೆಗಳನ್ನಿಳಿಬಿಟ್ಟುಕೊಂಡು, ಹಣೆಗೆ ಕನ್ನಡಿಯ ಹಣೆಕಟ್ಟು ಕಟ್ಟಿಕೊಂಡು, ಮೈಗೆ ಬಣ್ಣದ ನಕ್ಷತ್ರಗಳನ್ನು ಬರೆಯಿಸಿಕೊಂಡು, ಡುಬ್ಬದ ಮೇಲೆ ಜೂಲು ಹಾಕಿಕೊಂಡು ಶೃಂಗಾರವಾಗಿ, ಕೊರಳೊಳಗಿನ ಗಂಟೆಗಳ ಮಂಜುಳನಾದ-ದೊಡನೆ, ತಾಳದಲ್ಲಿ ಹಾರಿಗ್ಗಾಲನ್ನು ಪುಟಿಸುತ್ತ ಬರುತ್ತಿರುವ ಹೋರಿಗಳು ಕಂಡವು. ಬಂಡಿಯೊಳಗಿನ ಜನರು ಉಧೋ ಎಂದ ಕೂಡಲೆ, ಅದನ್ನೇ ತಾವೂ ಹೇಳುತ್ತಿರುವವೋ ಎನ್ನುವಂತೆ ಹುರುಪಿ. ನಿಂದ ಹೊಡೆದ ಆ ಹೋರಿಗಳ ಡುರುಕಿಯನ್ನು ಕೇಳಿದ ಬಳಿಕಂತೂ, ದ್ಯಾಂವನಕ್ಕನಿಗೆ ತನ್ನ ತಮ್ಮ ಬಂದನೆಂಬುದು ಮನದಟ್ಟಾಯಿತು. ಅಷ್ಟರಲ್ಲಿ ಗಾಡಿಯು ಬಾಗಿಲಿಗೇ ಬಂದಿತು, ಒಳಗಿನಿಂದ ಸೊಸೆಯು ಜಿಗಿದವಳೇ "ಎತ್ತೀ, ಬಂದ್ವ ” ಎನ್ನುತ್ತ ಕಾಲಿಗೆ ಬಿದ್ದಳು. ಸೊಸೆಗೆ ಪ್ರೀತಿಯಿಂದ ಲಟಿಕೆ ಮುರಿದು, ಒಳಗೆ ಹೋಗಿ ಕಾಲಿಗೆ ನೀರು ತಂದು ಕೊಟ್ಟು, ದ್ಯಾಂವಕ್ಕ ಎಲ್ಲರಿಗೂ ಫಲಾಹಾರಕ್ಕೆ ಹಾಕಿದಳು. ಅವಳ ತಮ್ಮನೂ ಅಕ್ಕನನ್ನು ಸಂತೋಷಗೊಳಿಸಲಿಕ್ಕೆಂದು ಸವಾರಿ ಬುಟ್ಟಿಯ ತುಂಬ ಫರಾಳವನ್ನು ಮಾಡಿ ತಂದಿದ್ದನು.
"ಎಕ್ಕಾ, ಮೋಟಾರಿಗೆ ಹೋಗೂನೋ, ಏನು ಇದ ಬಂಡ್ಯಾಗನs ಹೊಂಡತೀಯೊ ?” ಕೇಳಿದ. ಆದಕ್ಕೆ ದ್ಯಾಂವಕ "ಅದ್ಯಾಕೋ ತಮ್ಮಾ, ಹಿಂತಾ ನಸುಕಿನ್ಯಾಗ ನಾನ್ನ ಮನಿತಂಕಾ ಬಸವಣ್ಣ ದೇವರು ಕರ್ಯಾಕ ನಡಕೊಂಡ ಬಂದಿರಲಾಕ-