ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಡೆದುಬಂದ ಲಕ್ಷ್ಮಿ
೯೧

ಹನುಮಪ್ಪನ ಗುಡಿಯು ಇದ್ದದ್ದು ಎಲ್ಲರಿಗೂ ಗೊತ್ತಿದ್ದ ಮಾತಾಗಿದೆ. ಇಷ್ಟು ದಿವಸ ಮೊದಲು ಆ ಗುಡಿಯು ಹಾಳಾಗಿಯೆ ಬಿದ್ದಿತ್ತು. ಕಳ್ಳ-ಕಾಕರ ಕಳವಿನ ಸಾಮಾನುಗಳ ಲೆಕ್ಕದ ಮನೆಯಾಗಿತ್ತಂತೆ; ಆದರೆ ಇತ್ತೀಚಿನ ಮೂರು ನಾಲ್ಕು ವರ್ಷಗಳಿಂದಲೂ ಮುಂಜಾನೆ ಪೂಜೆ ನಡೆಯುತ್ತಿದೆ. ಸಾಯಂಕಾಲಕ್ಕೆ ಮಾತ್ರ ಅಲ್ಲಿ ಯಾರೂ ಸುಳಿಯುವದಿಲ್ಲ; ರಾತ್ರಿಯಾದ ಮೇಲೆ ಹಾಯುವದಂತೂ ದೂರಾಗಿಯೆ? ಉಳಿಯಿತು. ಹಾವುಗಳು, ಕಳ್ಳರು, ದೆವ್ವ-ಭೂತಗಳು ಬರುವದುಂಟು ಕಲಾದ ಮೇಲೆ ಆ ಗುಡಿಯಲ್ಲಿ ಎಂದು ಜನರೆಬ್ಬಿಸಿದ ಗುಲ್ಲೆ? ಇದಕ್ಕೆ ಕಾರಣವಾಗಿದ್ದಿತು.

ಹಾಗಾದರೆ ಇಂತಹ ಸ್ಥಳದಲ್ಲಿ, ಇಂತಹ ಹೊತ್ತಿನಲ್ಲಿ ಆ ಗುಡಿಯಲ್ಲಿ ಯಾರೋ ಗುಜುಗುಜು ಮಾತನಾಡುವಂತಿದೆಯಲ್ಲ ? ಗುಡಿಯ ಬಾಗಿಲು ಪೂರ್ವಾಭಿಮುಖವಾಗಿರುವದರಿಂದ, ಆಗ ಚಂದ್ರಮನು ಏರುತ್ತಲೇ ಹೊರಟಿರುವ ವೇಳೆಯಿದ್ದುದರಿಂದ, ಗುಡಿಯಲ್ಲಿ ಮಂದವಾದ ಚಂದ್ರಪ್ರಕಾಶವು ಬಿದ್ದಿತ್ತು. ಸಣ್ಣದೊಂದು ಹಾಸಿಗೆಯ ಸುರುಳಿ, ಒಂದು ಅರಿವೆಯ ಗಂಟುಇವುಗಳನ್ನು ನಡುವೆ ಇಟ್ಟುಕೊಂಡು, ಹನುಮಪ್ಪನೆದುರಿಗೆ ಇಬ್ಬರು ತರುಣ-ತರುಣಿಯರು ಕುಳಿತಿದ್ದಾರೆ. ತರುಣನು ೨೦-೨೨ ವಯಸ್ಸಿನವನು; ತರುಣಿಗೆ ಹದಿನೇಳು-ಹದಿನೆಂಟು.

ತರುಣಿಯು ಕೇಳಿದಳು"ಈಗ ಹೊಂಟ್ರ ಯಾವ ಗಾಡಿ ಸಿಕ್ಕೀತು? ಗಾಡಿಗೆ ರೊಕ್ಕ ಹ್ಯಾಂಗ?"

"ಮನ್ಯಾಗಿಂದನಕಾ ಸುಳುವಿಲ್ಲದ್ದಾಗ ಹೊ ರ ಬಿ ದ್ದು ಬಂದೀಯೋ ಇಲ್ಲೋ ? ಆ ರೊಕ್ಕದ ಆ ಗಾಡೀದೂ ಪಂಚೇತಿ ನಿನಗ್ಯಾಕ ಬೇಕ, ದುರ್ಪತಿ ? ( ಅವಳ ಹೆಸರು ದ್ರೌಪದಿ. ) ಅಷ್ಟ ಅರುವು ಇಲ್ದ ನಾ ಬರಿದೇನಲ್ಲ ? ಇಕಾ ನೋಡು" ಎಂದು ಪಟಕಾದ ಚುಂಗಿನೊಳಗಿಂದ ಒಂದು ಸಣ್ಣ ಗಂಟನ್ನು ಹೊರಗೆ