ಪುಟ:ಹಳ್ಳಿಯ ಚಿತ್ರಗಳು.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಗೆಯ ನೀತಿ

೮೯

ಬರ್ತಾನೆ. ಬರಿಯ ಕೈಯಲ್ಲಿ ಯಾಕೆ ಹೋಗಬೇಕು ಅಂತ ಇರೋದರಲ್ಲೆಲ್ಲಾ ದಪ್ಪವಾದ ಗಂಟನ್ನೇ ಹೊತ್ತುಕೊಂಡು ಬಂದೆ” ಎಂದನು. ನಮ್ಮ ಭಾವನವರು “ನೀ ಹಾಳಾದೆ" ಎಂದರು. ಅನಂತರ ನಮ್ಮನ್ನು ಕುರಿತು ಆ ಶಾಲುವನ್ನು ಬಿಚ್ಚಿಕೊಂಡು ನೀರಿನಲ್ಲಿ ನೆನೆಸಿ ಹಾಕಿಬಿಡಿ. ತಿಂಡಿ ಅವನಿಗೇ ಆಯಿತು. ದಾರಿಯಲ್ಲಿ ಕೂಡ ಒಂದು ಚೂರನ್ನೂ ತಿನ್ನದೆ ತಂದೆ” ಎಂದರು.

ನಾನು ಶಾಲುವನ್ನೇನೋ ಬಿಚ್ಚಿ ನೆನಸಿದೆ. ಆದರೆ ತಿಂಡಿಯನ್ನೂ ಬಿಡಲಿಲ್ಲ. ಭಾವನವರಿಗೆ ಹೇಳದೆ ಹುಡುಗರೆಲ್ಲಾ ಗುಟ್ಟಾಗಿ ತಿಂದು ಹಾಕಿಬಿಟ್ಟೆವು. ಭಾವನವರು ಒಂದು ತಿಂಗಳಾದರೂ ಈ ವಿಷಯ ಮರೆಯಲಿಲ್ಲ. ಮಾತೆತ್ತಿದರೆ ಗಾಡಿಯವನಿಗೆ ಬೈಗಳದ ಸುರಿಮಳೆಯಾಗುತ್ತಿದ್ದಿತು. ಅವರ ಕೂಗಾಟವನ್ನು ನೋಡಿ ನಾವು ನಕ್ಕದ್ದೂ ನಕ್ಕದ್ದೆ.

೩. ಭಾವನವರ ನುಡಿ

ನಮ್ಮ ಭಾವನವರು ತಮ್ಮ ತಂದೆಯ ಶ್ರಾದ್ಧವನ್ನು ಮಾಡಬೇಕಾಯಿತು. ಆವತ್ತಂತೂ ಅವರ ಮುಡಿಗೆ ಮಿತಿಯೇ ಇರಲಿಲ್ಲ. ಮಾತನಾಡಿದರೆ ಎಲ್ಲಿ ಮೈಲಿಗೆಯಾಗಿಬಿಡುತ್ತದೆಯೋ ಎಂಬುದಾಗಿ ಆ ದಿವಸವೆಲ್ಲಾ ನಮ್ಮೊಂದಿಗೆ ಬರಿಯ ಸಂಜ್ಞೆಯಿಂದಲೇ ಸಂಭಾಷಣೆ, ಅವರು ಶ್ರಾದ್ಧ ಮಾಡಿ ಮುಗಿಸುವ ಹೊತ್ತಿಗೆ ಭಾರಿ ಅಶ್ವಮೇಧ ಯಾಗವನ್ನು ಮಾಡಿದಂತೆ ಆಗುತ್ತಿತ್ತು. ಹೋಮವೆಲ್ಲಾ ಆಗಿ 'ಬ್ರಾಹ್ಮಣ'ರಿಗೆ ಎಲೆ ಹಾಕುವುದೇ ಮೂರು ಗಂಟೆ. “ಬ್ರಾಹ್ಮಣ"ರಿಗೆ ಆದನಂತರ ನಮ್ಮ ಭಾವನವರಿಗೂ, ನಮಗೂ, ಉಳಿದವರಿಗೂ ಊಟವಾಗುವ ಪದ್ದತಿ. ಇರಲಿ, ಆ ದಿವಸ ಬ್ರಾಹ್ಮಣರು ಊಟಕ್ಕೆ ಕುಳಿತಿದ್ದರು. ಆಗತಾನೆ ಪರಿಶೇಚನವನ್ನು ಮುಗಿಯಿಸಿ ಒಂದೆರಡು ತುತ್ತು ಊಟಮಾಡಿದ್ದರು. ಶೂದ್ರರ ಧ್ವನಿ ಕೇಳಬಾರದೆಂದು, ಬೀದಿಯ ಬಾಗಿಲಿಗೆ ಅಗಣಿ ಹಾಕಿಬಿಟ್ಟಿದ್ದೆವು. ನಮ್ಮ ರೈತ ಬೀದಿಯ ಬಾಗಿಲಿಗೆ ಬಂದು ೨-೩ ಸಲ ಕೂಗಿದ ಅಂತ ಕಾಣುತ್ತೆ. ಅದು ನಮಗ್ಯಾರಿಗೂ ಕೇಳಿಸಲಿಲ್ಲ. ಅನಂತರ ಅವನು ಬೀದಿಯ ಕಡೆಯಿಂದ ನಡುಮನೆಯ ಕಿಟಕಿಯಲ್ಲಿ ತಲೆಯಿಟ್ಟು ಇಣಿಕಿನೋಡಿದ. ನೋಡಿದಕೂಡಲೆ