ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xii ಕಾಲವೂ ಚರ್ಚಾಸ್ಪದವಾಗಿವೆ. ಇವುಗಳಲ್ಲಿ ಅಚ್ಚುತರಾಯನಾದಮೇಲೆ ಕೃಷ್ಣರಾಯನು 8೦ವರ್ಷ ಆಳಿದನೆಂದೂ, ವೀರನರಸಿಂಹನಾದಮೇಲೆ ಸಾಳ್ವ ನರಸಿಂಹನಾಳಿದನೆಂದೂ ಯಾವ ಚರಿತ್ರಕಾರರೂ ಹೇಳುವುದಿಲ್ಲ, ಆದರೂ ನರಸರಾಜನು ತನ್ನ ಅವಸಾನಕಾಲದಲ್ಲಿ ತನ್ನ ಪಟ್ಟದ ಹೆಂಡತಿಯ ಮಗನಾದ ಅಚ್ಯುತರಾಯನಿಗೆ ಪಟ್ಟವನ್ನು ಕಟ್ಟಿ ಭಂಗಾರದವಳ ಮಗ ನಾದ ಕೃಷ್ಣರಾಯನು ಯುವರಾಜನಾಗಿದ್ದುಕೊಂಡು ರಾಜ್ಯವಾಳ ಬೇಕೆಂದು ನೇಮಿಸಿದುದಾಗಿ ಒಂದು ಕಥೆಯು ಪ್ರಚಾರದಲ್ಲಿದೆ. 1 ಮೊದಲ ನೆಯ ಹರಿಹರರಾಯನಿಂದ ಸಾಳ್ವ ನರಸಿಂಗನ ವರೆಗೆ ಹದಿಮೂರು ಜನ ರಾಜರು ಆದಂತೆ ಯಾರೂ ಹೇಳುವುದಿಲ್ಲ. ಸಾಮಾನ್ಯವಾಗಿ ಏಳುಜನರು ಪಟ್ಟಕ್ಕೆ ಬಂದಂತೆ ತಿಳಿಸುತ್ತಾರೆ. ಈ ಶ್ಲೋಕದಲ್ಲಿ ಹೇಳಿರುವಂತೆ ಹದಿಮೂರು ಜನರೇ ಆಳಿದ್ದರೆ ಕೆಲವರು ಬಹು ಸ್ವಲ್ಪ ಕಾಲ ಆಳಿರಬೇಕು. ಇನ್ನು ಕೆಲವರ ಕಾಲದಲ್ಲಿ ಶಾಸನಗಳಲ್ಲಿ ಇಲ್ಲದಿರ ಬಹುದು ; ಒಬ್ಬನು ರಾಜನಾಗಿ ಆಳುತ್ತಿದ್ದಾಗ ಆತನ ತಮ್ಮ ಅಥವಾ ಮಗನ ಹೆಸರಿನಲ್ಲಿಯೂ ಕೆಲವುವೇಳೆ ಶಾಸನಗಳು ಹುಟ್ಟಿರಬಹುದು : ಇವೇ ಮೊದಲಾದ ಕಾರಣಗಳಿಂದ ವಿಜಯನಗರದ ರಾಜ್ಯವನ್ನು ಆಳಿದ ಅರಸರ ಪರಂಪರೆಯು ಇದುವರೆಗೂ ಸರಿಯಾಗಿ ವ್ಯವಸ್ಥಿತವಾಗಿಲ್ಲ. ಅದು ಹೇಗಾದರೂ ಇರಲಿ, ಮೇಲಿನ ಶ್ಲೋಕದಲ್ಲಿ ಬರತಕ್ಕ ಹದಿಮೂರು ಅಕ್ಷರಗಳಿಗೂ, ಹರಿಹರ , ಬುಕ್ಕ I, ಹರಿಹರ II, ವಿರೂಪಣ (ವಿರೂಪಾಕ್ಷ ? ) 1 ಬುಕ್ II, ದೇವರಾಯ 1, ರಾಮಚಂದ್ರ, ವಿಜಯ, ದೇವರಾಯ [I, ವಿರೂಪಾಕ್ಷ 5 1 ' ನೀತಿಚಿಂತಾಮಣಿ ” ಯನ್ನು ನೋಡಿ 2 ಹೀಗೆ 1404 ರಲ್ಲಿ ಸ್ವಲ್ಪ ಕಾಲ ವಿರೂಪಾಕ್ಷನು ಆಳಿದಂತೆ ತೋರುತ್ತದೆ. 3 ಈ ಪದ್ಧತಿಗೆ ಕೆಳದಿನೃಪವಿಜಯದಲ್ಲಿಯೇ ಒಂದು ಉದಾಹರಣೆ ಇದೆ. ಪುಟ ೫೯೬, 4 ವಿರಪಣ್ಣನಾಗರೆ ಎರಡನೆಯ ಹರಿಹರನ ತಮ್ಮನಾಗಬಹುದು; ನಿರೂ ನ 'ಕ್ಷನ - ದರೆ ಅವನ ಜೈಪುತ್ರನಾಗಬಹುದು, (ಎರಡನೆಯವನಲ್ಲ). 5 ಈಶನು ಎರಡನೆಯ ದೇವರಾಯನ ಹಿರಿಯಮಗನಾಗಿರಬಹುದೇ? ಈತನು ಬಹಳ ಸ್ವಲ್ಪ ಕಾಲವಾಳಿರಬಹುದು,