ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ 15 ಶಿಷ್ಯನಂ ಮಾಡಿಕೊಂಡಿರುತಿರ್ದು ಮುಕ್ತರಾಗಲಾಗಿಯಾಮೇಲೆ ಯುತ್ತ ರದಿಕ್ಕಿನ ಕೃಪಾ ದೇವೀನದೀತೀರದಲ್ಲಿ ಗೃಹಸ್ಥಾಶ್ರಮದಲ್ಲಿರುತಿರ್ದ ಮಾಧವಭಟ್ಟನೆಂಬಾತಂ ದಕ್ಷಿಣದೇಶಕ್ಕೆ ಬಂದು ಕುಂತಳದೇಶದೊಳ ಗಣ ಪಂಪಾಕ್ಷೇತ್ರದಲ್ಲಿ ನಿಂದು ಭಾಗ್ಯಾಪೇಕ್ಷಿಯಾಗಿ ಶ್ರೀಚಕ್ರ ಯಂತ್ರವು ರಶ್ಚರಣಮಂ ಮಾಡುತ್ತುಮಿರಲಾಗಿ ಅಮ್ಮನವರು ಪ್ರಸನ್ನ ರಾಗಿ ನಿನಗಿ ಹಜನ್ಮದಲ್ಲಿ ಭಾಗ್ಯಪ್ರಾಪ್ತಿಯಲ್ಲಮುತ್ತರ ಜನ್ಮದಲ್ಲಿ ಕೆಟ್ಟೇನನಲಾಗಿ ಯಾಮಾತಂ ಮನದಕೊಂಡು ಆ ಮಾಧವಭಟ್ಟಂ ಶಂಕರಾಚಾದ್ಯರ ಶಿಷ್ಯರಾದ ವಿದ್ಯಾಶಂಕರರಿಂದ ಸನ್ಯಾಸಾಶ್ರಮವನಂಗೀಕರಿಸಿ ವಿದ್ಯಾರಣ್ಯ ರೆಂದು ಪ್ರಸಿದ್ಧ ನಾಮಾಂಕಿತರಾಗಿರುತುಮಿರಲಾಗಿ, ಈ ದೇಶಮಂ ಜೈನ 5 ಕಿರಾತರಿ ಮುಂತಾದವರ್ಕಳಾಕ್ರಮಿಸಿ ತಮ್ಮ ತಮ್ಮ ಇಚ್ಛಾನುಕೋ ಅಮಿರ್ವ ರೀತಿಯೊಳಿ ನಡೆಕೊಳ್ಳಲಿ, ಈ ಮಂಡಲದೊಳೊಂದು* ಪಟ್ಟಣ ಮಂ ನಿರ್ಮಾಣಂಗೈನಿ ದುಷ್ಮನಿಗ್ರಹ ಶಿಷ್ಟಪರಿಪಾಲನವಂ ಮಾ ನಡೆ ಕೊಳ್ಳಂತು ರಾಯಪಟ್ಟವಂ ಕಟ್ಟುವುದು ” ಎಂದು ಅಮ್ಮನವರಿಂ ಸ್ಪಷ್ಟವಾಗಲಾಗಿ ಆ ಸ್ಪಪ್ರಾರ್ಥವಂ ಮನದೊಟ್ಟು ಕತಿಪದದಿವಸಂ ವರ್ತಿಸುತ್ತು ಮಿರಲಾಗಿ ಯುತ್ತರದೇಶದಿಂದೆ ಸಹೋದರರಾದ ಹರಿಹರ ಬುಕ್ಕರೆಂಬ ಬಡಕ್ಷತ್ರಿಯರು ಈ ದಕ್ಷಿಣರಾಜ್ಯಕ್ಕೆ ತಂದು ಕುರುಬರಲ್ಲಿ ನಂಟತನವಂ ಮಾಡಿ ಹೆಣು ತಂದು ಮದುವೆಯಾಗಿ ಸುಖವಾಸಿಗಳಾಗಿ ರುತ್ತುಮಿರಲಾಗಿ ಅವರೆಳೆ ಪಿರಿಯನಾದ ಹರಿಹರಗೆ ನೀನುಂ ಬುಕ್ಕ ನುಂ ಸಹ ವಿದ್ಯಾರಣ್ಯರ ಬಳಿಗೆ ಹೋಗಿ ಆಶ್ರಯಿಸಲಾಗಿ ಮಹದೈಶಂ ಬಂದೀತೆಂದು ಸ್ಪಷ್ಟ ವಾಗಲಾಗಿ ಆಮೇಲೆ ಆ ಹರಿಹರಬುಕ್ಕರ ಹಂಪೆಗೆ ಎಂದು ವಿದ್ಯಾರಣ್ಯವಂ ಕಂಡು ಸಂಧಿಸಿ ಸ್ನಾಭಿಪ್ರಾಯವನುಸಿರಲಾಗಿ ಆಗ ವಿದ್ಯಾರಣ್ಯರ ಹಂಪೆಯಸ್ಥಳದವರಂ ಕರೆಯಿಸಿ ವಿಚಾರವಂ ಮಾಡ ಲಾಗಿ ಅವಸೆ-ಆದುದು:- ಪೂರ್ವದೊಳೆ ಸೂರವಂಶಜನಾದ ತ್ರಿಶಂ ಕುಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ರಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾ ಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ ಈ ಲಿಂಗದ ಮಹಿಮೆಯಂ