________________
= d . ಅಸಮಾಧಾನ ನಿವಾರಣೆ ಪೈಗಂಬರ ಮಹಮ್ಮದನು ಬಳಿಕ, ರಾಜ್ಯದ ಖಜಾನೆಗೆಂದು ತೆಗೆದಿಟ್ಟಿದ್ದ ಐದ ನೆಯ ಒಂದು ಪಾಲಿನ ಭಾಗದಿಂದ ಮಕ್ಕಾ ನಗರ ದವರಿಗೆ ಮಹಮ್ಮದನು ಕೆಲವು ಪಾರಿತೋಷಿಕ ಗಳನ್ನು ಕೊಟ್ಟನು. ಮದೀನಾ ನಗರದಿಂದ ಬಂದಿ ದ್ದವರು ಕೆಲವರಿಗೆ ಇದರಿಂದ ಅಸಮಾಧಾನವುಂಟಾಯಿತು, ತನ್ನ ಸ್ವಜನರೆಂಬ ಅಭಿಮಾನದಿಂದ ಮಹಮ್ಮದನು ಅವರಿಗೆ ಹೆಚ್ಚು ಪಾರಿ ತೋಟಕಗಳನ್ನು ಕೊಟ್ಟನೆಂದು ಅವರೆಲ್ಲರೂ ಮಾತನಾಡಿಕೊಳ್ಳು ತಿದ್ದುದು ಹೇಗೆ ಮಹಮ್ಮದನ ಕಿವಿಗೆ ಬಿದ್ದಿತು. ರಾಷ್ಟ್ರದ ಮೇಲೆ ರಾಷ್ಟ್ರ, ವನ್ನು ಗೆದ್ದು ಪ್ರಭುವಾಗಿದ್ದ ಮಹಮ್ಮದನು ನಿರಂಕುಶ ಪ್ರವೃತ್ತಿಯುಳ್ಳವನಾಗಿದ್ದಲ್ಲಿ ಅವರನ್ನು ಕ್ರೂರ ದಂಡನೆಗೆ ಗುರಿ ಮಾಡ ಬಹುದಾಗಿದ್ದಿತು ; ಆದರೆ ಸಾತ್ವಿಕ ಪ್ರಕೃತಿಯುಳ್ಳವನಾಗಿದ್ದುದ ರಿಂದ ಹಾಗೆ ಮಾಡದೆ ಅವರನ್ನು ತನ್ನ ಬಳಿಗೆ ಕರೆಯಿಸಿ, “ ನಾನು ಸಾಮಾನುಗಳ ಹಂಚಿಕೆಯಲ್ಲಿ ಪಕ್ಷಪಾತ ಬುದ್ಧಿಯಿಂದ ವರ್ತಿಸಿದೆ ನೆಂದು ನಿಮ್ಮಲ್ಲಿ ಕೆಲವರಿಗೆ ಅಸಮಾಧಾನವಾಗಿರುವುದಂತೆ; ಇದು ನಿಜವೆ?” ಎಂದು ಕೇಳಿದನು. ಅವರು ಅಹುದೆಂದು ಹೇಳಲು ಮಹಮ್ಮದನು, ನೀವೆಲ್ಲರೂ ಅಧರ್ಮದ ದಾರಿಯನ್ನು ಹಿಡಿ ದಿದ್ದಾಗ ನಾನು ಬಂದು ನಿಮ್ಮನ್ನು ಸನ್ಮಾರ್ಗಕ್ಕೆ ತಂದು ಬಿಡಲಿಲ್ಲವೆ ? ಭಗವಂತನ ದಯೆಯಿಂದ ನಾನು ಈ ಕೆಲಸವನ್ನು ನೆರವೇರಿಸಿದೆನು. ನೀವೆಲ್ಲರೂ ಬಡವರಾಗಿದ್ದಿರಿ; ಒಬ್ಬರ ಕೊರಳನ್ನು ಕೊಯ್ಯಲು ಮತ್ತೊಬ್ಬರು ಕತ್ತಿಯನ್ನು ಹಿರಿದು ನಿಂತಿದ್ದಿರಿ. ಭಗವಂತನ ದಯೆಯಿಂದ ನೀವೆಲ್ಲರೂ ಈಚೆಗೆ ಧನಿಕರಾದಿರಿ; ನಿಮ್ಮಲ್ಲಿ ಸೋದರ ಭಾವವು ಹುಟ್ಟಿ ಪ್ರೇಮವು ನೆಲೆಗೊಂಡಿತು; ಇದೆಲ್ಲ ನಿಮಗುಂಟಾದ ಪ್ರಯೋಜನದ ಮಾತು. ಇನ್ನು, ನನಗಾದ ಪ್ರಯೋಜನವನ್ನು ಹೇಳಬೇಕಾದರೆ, ನನ್ನ ಸ್ವಕೀಯರೇ ನನ್ನ ಮಾತನ್ನು ನಂಬದೆ ನನ್ನಲ್ಲಿ ಅನಾದರವನ್ನು ತೋರಿಸಿ ಅಟ್ಟಿದಾಗ ಪರಕೀಯರಾದ ನೀವು ನನ್ನನ್ನು ನಂಬಿ ಆದರ ದಿಂದ ಕರೆದುಕೊಂಡಿರಿ, ನನಗೆ ಸಹಾಯಕರು ಯಾರೂ ಇಲ್ಲದಿದ್ದಾಗ ನೀವೆಲ್ಲರೂ ನನಗೆ ಸಹಾಯ ಮಾಡಿದಿರಿ, ಪ್ರಿಯ ಶಿಷ್ಯರಿರಾ ! ನಿಮ್ಮಿಂದ