ಪುಟ:ಪೈಗಂಬರ ಮಹಮ್ಮದನು.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XI, ಮಕ್ಕಾ ನಗರದ ಮುತ್ತಿಗೆ ೯೬ ಮಹಮ್ಮದನನ್ನು ಸೋಲಿಸಬೇಕೆಂದು ಅವರು ಸಂಕಲ್ಪಿಸಿದರು. ಆಗ್ಗೆ ಅತ್ಯಂತ ಪ್ರಸಿದ್ಧವಾಗಿದ್ದ ತಾಯೆಫ್ ನಗರದ ಭದ್ರವಾದ ಕೋಟೆಯ ಅವರ ವಶದಲ್ಲಿದ್ದುದರಿಂದ ಮಹಮ್ಮದನನ್ನು ತಾವು ನೆಗ್ಗಬಹುದೆಂದು ಅವರೆಲ್ಲರಿಗೂ ಭರವಸೆಯಿದ್ದಿತು. ಆದರೆ ಮಹಮ್ಮದನೂ ಕೇವಲ ಜಾಗರೂಕನಾಗಿದ್ದುದರಿಂದ, ಶತ್ರುಗಳು ಗರಿಗಟ್ಟಿಕೊಳ್ಳುವ ಮೊದಲೇ ಅವನು ಸೈನ್ಯದೊಡನೆ ಹುಸೇನ್ ಎಂಬ ಪ್ರದೇಶದಲ್ಲಿ ಬಂದಿಳಿದನು. ಮೆದೀನಾ ನಗರದಿಂದ ಬಂದಿದ್ದ ಹತ್ತು ಸಾವಿರ ಮಂದಿ ಸೈನಿಕರ ಜೊತೆಗೆ ಮಕ್ಕಾ ನಗರದಿಂದ ಎರಡು ಸಾವಿರ ಮಂದಿ ಸೈನಿಕರು ಬಂದು. ಸೇರಿದರು. ಈ ಸೈನ್ಯದಲ್ಲಿ, ಇಸ್ಲಾಂ ಮತಕ್ಕೆ ಸೇರದೆ ಇದ್ದ ಮಕ್ಕಾ ನಗರ ನಿವಾಸಿಗಳೂ ಅನೇಕರಿದ್ದರು. ಅವರೆಲ್ಲರೂ ಮಹಮ್ಮದನ ಮೇಲಣ ಪ್ರೀತಿಯಿಂದ, ಮಹಮ್ಮದೀಯರಂತೆಯೇ ತಾವೂ ಪ್ರಾಣದ ಮೇಲಣ ಆಸೆಯನ್ನು ತೊರೆದು, ಅವನಿಗಾಗಿ ಯುದ್ಧ ಮಾಡಿದರು. ಹುಸೇನ್ ಪ್ರಾಂತವು ಬೆಟ್ಟ ಗುಡ್ಡಗಳ ಸೀಮೆಯಾದುದರಿಂದಲೂ, ಶತ್ರು ಗಳಿಗೆ ಪ್ರಬಲವಾದ ಗಿರಿದುರ್ಗಗಳಿದ್ದುದರಿಂದಲೂ ಈ ಕದನದಲ್ಲಿ ಮಹಮ್ಮದೀಯರಿಗೆ ಬಹಳ ಕಷ್ಟವಾಯಿತು. ಆದರೂ ಭಗವಂತನ ದಯೆಯಿಂದ ಮಹಮ್ಮದನ ಪಕ್ಷದವರಿಗೆ ಜಯವಾಯಿತು; ಇಪ್ಪತ್ರ ನಾಲ್ಕು ಸಾವಿರ ಕುರಿಗಳೂ, ಹದಿನೈದು ಸಾವಿರ ತೋಲಾ ತೂಕದ ಬೆಳ್ಳಿಯ, ಇತರ ಸಾಮಾನುಗಳೂ ಕೊಳ್ಳೆಯಾಗಿ ಸಿಕ್ಕಿದುದಲ್ಲದೆ, ಆರು ಸಾವಿರ ಮಂದಿ ಸೈನಿಕರೂ ಸೆರೆಸಿಕ್ಕಿದರು. ಶತ್ರುಗಳ ಸೈನ್ಯ. ವನ್ನು ಚದರಿಸಿದೊಡನೆಯೇ ಮಹಮ್ಮದನು ತಾಯೆಫ್ ನಗರದ ಮುತ್ತಿಗೆಯನ್ನೆತ್ತಿ ಹಿಂದಿರುಗಿದುದನ್ನು ನೋಡಿದರೆ, ಇಸ್ಲಾಂ ಮತಸ್ಥರಿಗೊದಗಿದ್ದ ಕೋಟಲೆಯನ್ನು ಪರಿಹಾರ ಮಾಡಿಕೊಳ್ಳುವುದು ಮಾತ್ರವೇ ಅವನ ಉದ್ದೇಶವಾಗಿದ್ದಿತೇ ಹೊರತು ಬಲಾತ್ಕಾರವಾಗಿ ತನ್ನ ಮತವನ್ನು ಹರಡುವುದಾಗಲಿ, ಅಥವಾ ದೇಶ ಕೋಶಗಳ ಸಂಪಾ ದನೆಯಾಗಲಿ ಅವನ ಉದ್ದೇಶವಾಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಕೊಳ್ಳೆ ಹೊಡೆದ ವಸ್ತುಗಳ ಹಂಚಿಕೆಯಲ್ಲಿ ಮಕ್ಕಾ ನಗರದ ಸೈನಿಕ ರಿಗೂ ಮೆದೀನಾ ನಗರದ ಸೈನಿಕರಿಗೂ ಅವರವರ ಭಾಗಗಳು ಸಂದ