ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಹದಿನಾಲ್ಕನೆಯ ಅಧ್ಯಾಯ ಪರ ಲೋಕ ಯಾತ್ರೆ ಕ್ರಿ. ಶ. ೬೩೨ನೆಯ ಸಂವತ್ಸರವು ಆರಂಭವಾಗುವ ವೇಳೆಗೆ ಅರಬ್ಬಿ ದೇಶದಲ್ಲೆಲ್ಲ ಮಹಮ್ಮದನ ಪ್ರಾಬಲ್ಯವು ರೂಢ ಮೂಲವಾಗಿ ನೆಲೆಗೊಂಡು ಅವನ ಜೀವನದ ಮುಖ್ಯೋದ್ದೇಶವು ಮತ್ತೊಮ್ಮೆ ಪೂರ್ಣವಾಗಿ ನೆರವೇರಿದ್ದಿತು. ಆ ಸಂವತ್ಸರದಲ್ಲಿ ಮಹಾ ಯಾತ್ರ ಮಹಮ್ಮದನು ಮಕ್ಕಾ ಯಾತ್ರೆಗೆ ಹೊರಟನು ; ಅದೇ ಅವನ ಕೊನೆಯ ಮಹಾ ಯಾತ್ರೆ, ಕ್ರಿ. ಶ. ೬೩೨ನೆಯ ಫೆಬ್ರವರಿ ೨೩ನೆಯ ತಾರೀಖು ಅವನು ಪ್ರಯಾಣ ಹೊರಟ. ಶುಭ ದಿವಸ, ಏನು ವೈಭವ ! ಎಷ್ಟು ಸಂಭ್ರಮ ! ಅರಬ್ಬಿ ದೇಶದ ಮಲೆ ಮೂಲೆಗಳಿಂದಲೂ ಜನರು ತಮ್ಮ ಗುರುವಿನೊಡನೆ ಮಕ್ಕಾ. ಯಾತ್ರೆ ಮಾಡಿ ಧನ್ಯರಾಗಲು ಉತ್ಸುಕರಾಗಿ ಓಡಿಬಂದು ತಂಡೋಪತಂಡ ವಾಗಿ ನೆರೆದರು ; ಒಂದು ಲಕ್ಷದ ಇಪ್ಪತ್ತ ನಾಲ್ಕು ಸಾವಿರ ಮಂದಿ ಶಿಷ್ಯರ ನೆರವಿಯು ಸೇರಿತು. ಅವರ “ ಅಲ್ಲಾಹೋ-ಅಕ್ಷರ್‌ ” ಎಂಬ ಧ್ವನಿಯಿಂದ ದಶ ದಿಕ್ಕುಗಳೂ ಮೊಳಗಿ ಪ್ರತಿಧ್ವನಿತವಾದುವು. ಯಾವ ಮಕ್ಕಾ ನಗರವನ್ನು ಬಿಟ್ಟು ಪ್ರಾಣ ಭಯದಿಂದ ಮಹಮ್ಮದನು ಒಮ್ಮೆ ಪಲಾಯನ ಮಾಡಿದ್ದನೋ, ಅದೇ ಮಕ್ಕಾ ನಗರವು ಈಗ ಅವನ ಶಿಷ್ಯ ಮಂಡಲಿಯಿಂದ ತುಂಬಿ ಕಿಕ್ಕಿರಿಯುವಂತಾಯಿತು. ಯಾವ ಮಕ್ಕಾ ನಗರದಲ್ಲಿ ಮಹಮ್ಮದನನ್ನು ನಿರ್ನಾಮಗೊಳಿಸಲು ಶತ್ತು ಪಡೆಯು. ಹಿಂದೆ ಅವನನ್ನು ಹುಡುಕಾಡಿತೋ, ಅದೇ ಮಕ್ಕಾ ನಗರದಲ್ಲಿ ಈಗ ಅಸಂಖ್ಯಾತವಾದ ಮತ್ತು ಮಂಡಲಿಯು ನೆರೆದು, ಅವನ ದರ್ಶನದಿಂದ ಪಾವನತೆಯನ್ನು ಹೊಂದಲು ಸಂಭ್ರಮದಿಂದ ಅವನನ್ನು ಹುಡುಕಾಡ ತೊಡಗಿತು. ಸತ್ಯಾತ್ಮಕನ ನೆಲೆಯನ್ನು ಗೋಚರಗೊಳಿಸುವ ಸನ್ಮಾರ್ಗ ಗಳಲ್ಲೊಂದನ್ನು ಜನತೆಗೆ ಬೋಧಿಸುವ ಉತ್ಸಾಹ ಭರದಲ್ಲಿ, ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ, ಪರಿಣಾಮದಲ್ಲಿ ಪೂರ್ಣ ಫಲವನ್ನು ಪಡೆದು ಮಹಮ್ಮದನೇ ಧನ್ಯನು.