ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIV, ಪರ ಲೋಕ ಯಾತ್ರೆ ೧೨೯ ಮಹಮ್ಮದನು ಸಾಂಗವಾಗಿ ಯಾತ್ರೆಯನ್ನು ಪೂರೈಸಿದನು. ಕಪಟ ನಾಟಕ ಸೂತ್ರಧಾರಿಯಾದ ಪರಮಾತ್ಮನು, ಮಹಮ್ಮದನೆಂಬ ಪಾತದ ಅವಧಿಯು ಮುಗಿಯುತ್ತ ಬಂದಿತೆಂಬ ಚರಮ ಸಂದೇಶ ಸೂಚನೆಯನ್ನು ಕೊಟ್ಟು, ಅವನ ಹೃದಯದ ತಂತಿ. ಯನ್ನು ಮಿಾಟಿ ಎಚ್ಚರಗೊಳಿಸಿದನು. ಅವ್ಯಕ್ತ ಮಧುರವಾದ ಒಂದು ಧ್ವನಿಯು ಅವನ ಕರ್ಣ ಕುಹರದಲ್ಲಿ ಈ ವಾಣಿ ಯನ್ನು ಮೃದುತರವಾಗಿ ಹೇಳಿತು ; ಪಾರ್ಥಿವ ಶರೀರದಿಂದ ತಾನು ತಿರುಗಿ ಮಕ್ಕಾ ಯಾತ್ರೆಗೆ ಬರುವಹಾಗಿಲ್ಲವೆಂಬ ಭಾವನೆಯು ಅವನ ಮನಸ್ಸಿಗೆ ಹೊಳೆಯಿತು. ತನ್ನನ್ನು ನಂಬಿದ್ದ ಶಿಷ್ಯ ವೃಂದಕ್ಕೆ ತನ್ನ ಚರಮ ಸಂದೇಶವನ್ನ ನುಗ್ರಹಿಸಬೇಕೆಂದು ಮಹಮ್ಮದನು ಒಡನೆಯೇ ನಿರ್ಧರಿಸಿದನು. ೬೩೨ನೆಯ ಇಸವಿ ಮಾರ್ಚಿ ತಿಂಗಳು ೭ನೆಯ ತಾರೀಖಿನ ದಿನ ಪ್ರಶಸ್ತವಾದೊಂದು ಬಯಲಿನಲ್ಲಿ ಮಹಮ್ಮದೀಯರ ಮಹಾ ಸಭೆ ಯೊಂದು ಸೇರಿತು. ಎಲ್ಲಿಂದ ಎಲ್ಲಿಯ ವರೆಗೆ ನೋಡಿದರೂ ತಲೆಗಳೇ ಕಾಣಿ ಸುತ್ತಿದ್ದುವು. ಕಲ್ಲುಗಳನ್ನು ಕೂಡ ಮಾತನಾಡಿಸುವಂತಹ ಸನ್ನಿ ವೇಶವದು. ಅಂದಿನ ಪ್ರಚಂಡ ಸಭೆಯನ್ನು ನೋಡಿ ಮಹಮ್ಮದನಿಗೆ ಎಷ್ಟು ಸಂತೋಷವಾಗಿರಬೇಕು ! - ಕೈಶಃ ಫಲೇನ ಹಿ ಪುನರ್ನವತಾಂ. ವಿಧ ” ಎಂಬ ಕವಿ ಕಾಳಿದಾಸನ ಉಕ್ತಿಯಂತೆ, ಫಲೋದ್ಯಮದಿಂದ ಮಹಮ್ಮದನೂ ತನ್ನ ಕಷ್ಟಗಳನ್ನೆಲ್ಲ ಮರೆತು ಹರ್ಷ ಚಿತ್ತನಾಗಿ ಕೇವಲ ಉತ್ಸಾಹಿತನಾಗಿರಬೇಕು. ಆ ಸಭೆಯಲ್ಲಿ ಮಹಮ್ಮದನು. ಉನ್ನತ ಪ್ರದೇಶದಲ್ಲಿ ನಿಂತಿದ್ದರೂ ಅವನ ಸಂದೇಶವನ್ನು ಎಲ್ಲರೂ ಕೇಳು. ವಂತೆ ಹೇಳುವುದು ಅಸಾಧ್ಯವೆನಿಸಿತು, ಆದಕಾರಣ, ಅಲ್ಲಿಗಲ್ಲಿಗೆ. ಒಬ್ಬೊಬ್ಬ ಶಿಷ್ಯನನ್ನು ನಿಲ್ಲಿಸಿ, ಮಹಮ್ಮದನು ಒಂದು ವಾಕ್ಯವನ್ನು ಪೂರೈಸಿದೊಡನೆಯೇ ಮೊದಲನೆಯ ಶಿಷ್ಯನು ಅದನ್ನು ಹೇಳುವಂತೆಯ, ಆ ಬಳಿಕ ದೂರದಲ್ಲಿರುವ ಇತರ ಶಿಷ್ಯರೂ ಒಬ್ಬೊಬ್ಬರಾಗಿ ಅದನ್ನು ಹೇಳುವಂತೆಯ ವ್ಯವಸ್ಥೆ ಮಾಡಿದನು. ಗುರುವಿನ ಉಪದೇಶಾಮೃತ ವನ್ನು ಸವಿದು ಆನಂದ ಪರವಶರಾಗಿ ಶಿಷ್ಯ ಕೋಟಿಯೆಲ್ಲವೂ ಚಿತ್ರದ ಬೊಂಬೆಗಳಂತೆ ಕುಳಿತಿದ್ದಿತು. ಮಹಮ್ಮದನು ಅಂದು ಅನುಗ್ರಹಿ