ಪುಟ:ಪೈಗಂಬರ ಮಹಮ್ಮದನು.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಪೈಗಂಬರ ಮಹಮ್ಮದನು ಸಿದ ಸರ್ತಿ ದಾಯಕವಾದ ಕೆಲವು ವಾಕ್ಯಗಳನ್ನು ಇಲ್ಲಿ ಹೇಳ ಲಾಗುವುದು: “ ಓ ನನ್ನ ಪ್ರಿಯ ಬಾಂಧವರಿರಾ ! ಇನ್ನು ಮುಂದೆ ನಿಮ್ಮನ್ನು ಇಲ್ಲಿ ಕಾಣುವ ಭಾಗ್ಯವು ನನಗೆ ದೊರೆಯುವುದೋ ಇಲ್ಲವೋ ತಿಳಿ ಯದು. ಆಲೋಚಿಸಿ ನೋಡಿದರೆ, ನಾನು ಮತ್ತೊಂದು ವರುಷ ಕಾಲ ಬದುಕಿದ್ದು ಇಲ್ಲಿಗೆ ಬರುವ ಸಂಭವವಿರುವಂತೆ ತೋರುವುದಿಲ್ಲ. ಆದುದ ರಿಂದ ನನ್ನ ವಚನಗಳನ್ನು ತಾಳ್ಮೆಯಿಂದ ಮನಸ್ಸಿಟ್ಟು ಕೇಳಿರಿ ; ಅಲ್ಲದೆ, ನೀವು ಇಂದು ಕೇಳಿದುದನ್ನು ಈಗ ಇಲ್ಲಿಗೆ ಬಾರದೆ ಇರುವ ಇತರರಿಗೂ ತಿಳಿಸಿರಿ. ನಾವು ನಮ್ಮ ಯಾತ್ರೆಯನ್ನು ಪೂರೈಸಿರುವ ಇಂದಿನ ದಿನವೇ ಶುಭ ದಿನ, ನಾವು ಸೇರಿರುವ ಈ ಕ್ಷೇತ್ರವು ಪರಮ ಪವಿತ್ರವಾದುದು. ಈ ಮಹಾ ಯಾತ್ರೆಯಂತೆಯೇ ನಮ್ಮ ಜೀವನ ಯಾತ್ರೆಯ ಪವಿತ್ರ ವಾದುದೇ ಸರಿ. ನೀವೆಲ್ಲರೂ ಒಂದು ದಿನ ಭಗವಂತನ ಮುಂದೆ ವಿಚಾ ರಣೆಗೆ ನಿಂತು ನಿಮ್ಮ ನಿಮ್ಮ ಕರ್ಮಗಳ ವರದಿಯನ್ನೊ ಪ್ಪಿಸಬೇಕಾಗುವು ದೆಂಬ ಅಂಶವನ್ನು ನೆನಪಿನಲ್ಲಿಟ್ಟುಕೊಂಡು, ಅದಕ್ಕನುಗುಣವಾಗಿ ಐಹಿಕ ಜೀವನದ ಪಾರಿಶುಧ್ಯವನ್ನು ಕಾಪಾಡಿಕೊಳ್ಳುತ್ತ, ಶುಚಿರ್ಭೂತ ರಾಗಿ ಪರಮಾತ್ಮನಲ್ಲಿಗೆ ಪ್ರಯಾಣ ಮಾಡಿರಿ. ಪಾಪ ಕರ್ಮಗಳನ್ನು ಆಚರಿಸಬೇಡಿರಿ. ನಂಬಿದವನಲ್ಲಿ ದ್ರೋಹವನ್ನೆಣಿಸಬೇಡಿರಿ. ಒಬ್ಬರೊಡ ನೊಬ್ಬರು ಹೋರಾಡಿ ನರ ಹತ್ಯೆಯ ಘೋರ ಪಾತಕವನ್ನು ಕಟ್ಟಿಕೊಳ್ಳ ಬೇಡಿರಿ, ಎಲ್ಲರೂ ಒಕ್ಕಟ್ಟಿನಿಂದ ಕೂಡಿ ಸುಖದಿಂದ ಬಾಳಿರಿ. ನಿಮ್ಮ ಪತ್ನಿಯರ ಮೇಲೆ ನಿಮಗೆ ಕೆಲವು ಹಕ್ಕು ಬಾಧ್ಯತೆಗಳುಂಟು; ಹಾಗೆಯೇ ಅವರಿಗೂ ನಿಮ್ಮ ಮೇಲೆ ಕೆಲವು ಹಕ್ಕು ಬಾಧ್ಯತೆಗಳಿರುವುವು. ಆದ ಕಾರಣ ಅವರನ್ನು ನೀವು ಪ್ರೀತಿಯಿಂದ ನೋಡಿಕೊಂಡಿರಬೇಕು. ಗುರು ಹಿರಿಯರಲ್ಲಿ ಎಲ್ಲರೂ ಭಕ್ತಿಯಿಂದ ನಡೆದುಕೊಳ್ಳಬೇಕು. ನಿಮ್ಮಲ್ಲಿ ಯಾರೊಬ್ಬರೂ ಭೇದ ಭಾವಗಳಿಗೆ ಎಡೆಗೊಡಬೇಡಿರಿ. ನಿಮ್ಮ ವಶವರ್ತಿ ಗಳಾಗಿರುವ ಗುಲಾಮರು ನಿಮಗಿಂತಲೂ ನಿಕೃಷ್ಟರೆಂಬ ಭಾವನೆಯನ್ನು ಬಿಟ್ಟುಬಿಡಿರಿ ; ನೀವು ತಿನ್ನುವಂತಹ ಆಹಾರವನ್ನೇ ಅವರಿಗೂ ಕೊಡಿರಿ, ನೀವು ಧರಿಸುವಂತಹ ಉಡುಪನ್ನೇ ಅವರಿಗೂ ಉಡಿಸಿರಿ.