________________
೧೦೧ ಹನ್ನೆರಡನೆಯ ಅಧ್ಯಾಯ ಅಭ್ಯುದಯ ದಶೆ ಮಹಮ್ಮದನು ಮೊಟ್ಟಮೊದಲು ಮಕ್ಕಾ ನಗರದಿಂದ ಮೆದೀನಾ ನಗರಕ್ಕೆ ಹೋಗಿ ನೆಲಸಿದಾಗ, ಅಬ್ದುಲ್ಲಾ ಎಂಬಾತನು ಅಲ್ಲಿಗೆ ರಾಜ ನಾಗಬೇಕೆಂದು ಹವಣಿಸುತ್ತಿದ್ದನು. ಸಮಯ ವಿಘ್ನ ಪರಿಸಮಾಪ್ತಿ ಸನ್ನಿವೇಶಗಳೂ ಅವನಿಗೆ ಅನುಕೂಲವಾಗಿದ್ದುವು. ಆದರೆ, ಮಹಮ್ಮದನು ಅಲ್ಲಿಗೆ ಹೋದುದರಿಂದ ಅವನನ್ನು ಕೇಳುವವರೇ ಇಲ್ಲದಂತಾಯಿತು. ರಾಜತ್ವವು ದೂರವಾದ ದುಃಖದಿಂದ ಅವನ ಮತ್ತು ಅವನ ಆಪ್ತ ವರ್ಗದವರ ಅಂತಃಕರಣವು ಕುಂದಿಹೋಯಿತು. ಅಬ್ದುಲ್ಲಾನು ತನ್ನ ಕಾರ್ಯ ಸಾಧನೆಯ ಉದ್ದೇಶ ದಿಂದ ತಾನೂ ತನ್ನ ಕಡೆಯವರೂ ಇಸ್ಲಾಂ ಮತವನ್ನವಲಂಬಿಸುವ ನಟನೆ ಮಾಡುತ್ತ ಬಯಲು ಬಿನ್ನಾಣವನ್ನು ಹೂಡಿದರು. ಅಂತರಂಗದಲ್ಲಿ ಅವರೆಲ್ಲರೂ ಮಹಮ್ಮದನ ಶತ್ರುಗಳ ಸನ್ನಿ ತ್ರರಾಗಿದ್ದು, ಹೊರಗೆ ಮಾತ್ರ ಅವನಿಗೆ ಕೇವಲ ಆಪ್ತರಂತೆ ನಟಿಸುತ್ತ ಅನೇಕ ವೇಳೆ ಮಹಮ್ಮದನ ರಹಸ್ಯ ವಿಚಾರಗಳನ್ನು ಗೋಪ್ಯವಾಗಿ ಶತ್ರುಗಳ ಕಿವಿಗೆ ಮುಟ್ಟಿಸು ತಿದ್ದರು; ಯುದ್ದವು ಒದಗಿದರಂತು, ಒಂದಲ್ಲದಿದ್ದರೆ ಮತ್ತೊಂದು ನೆಪ ವನ್ನು ಹೇಳಿ ರಣ ಭೂಮಿಗೆ ಹೋಗದೆ ತಪ್ಪಿಸಿಕೊಳ್ಳುತ್ತಿದ್ದರು. ಮಹ ಮ್ಮದನ ಆಪ್ತರಲ್ಲಿ ಐಕಮತ್ಯವನ್ನು ತಪ್ಪಿಸುವುದಕ್ಕಾಗಿ ಅವರು ಪ್ರಯತ್ನಿ ಸದ ದಿನವೇ ಇರುತ್ತಿರಲಿಲ್ಲ; ಅವನ ಕಾರ್ಯಗಳು ಕೈಗೂಡದಂತೆ ಬಗೆ ಬಗೆಯ ವಿಘ್ನಗಳನ್ನು ತಂದೊಡ್ಡುತ್ತಿದ್ದರು. ಆದರೇನು ? ಮಹ ಮೃದನು ಮೈಯೆಲ್ಲ ಕಣ್ಣುಳ್ಳವನಾಗಿ ಅತ್ಯಂತ ಜಾಗರೂಕನಾಗಿದ್ದುದ ರಿಂದ ಅವರ ಪ್ರಯತ್ನಗಳು ಫಲಿಸದೆ ಹೋದುವು. ಕಾಲ ಕ್ರಮದಲ್ಲಿ ಅವರ ಒಳಸಂಚು ಹೊರಬಿದ್ದು ಅವರ ನಾಯಕನಾದ ಅಬ್ದುಲ್ಲಾ ಎಂಬಾತ ನನ್ನು ಮರಣ ದಂಡನೆಗೆ ಗುರಿಮಾಡಬೇಕೆಂದು ಮಹಮ್ಮದನನ್ನು ಅವನ ಕಡೆಯವರೆಲ್ಲರೂ ಬೇಡಿದರು. ಮಹಮ್ಮದನು ಅವರ ಸಲಹೆಗೆ ಕಿವಿ ಗೊಡದೆ ಅವನನ್ನು ಕ್ಷಮಿಸಿದರೂ, ಆ ಪಾಪಿಯು ಅಲ್ಲಿಗೂ ತನ್ನ ವಿಷ