________________
೧೦೨ ಪೈಗಂಬರ ಮಹಮ್ಮದನು ವನ್ನು ಬಿಡದೆ, ತನ್ನವರ ಸಹಾಯದಿಂದ ಮಹಮ್ಮದನಿಗೆ ಹೆಜ್ಜೆ ಹೆಜ್ಜೆಗೂ ಎಡರು ತೊಡರುಗಳನ್ನು ಕಲ್ಪಿಸಿ ಕಾಡುತ್ತ ಬಂದನು. ಕೊನೆಗೆ ಅವನಿಗೆ ಅವಸಾನ ಕಾಲವು ಬಂದೊದಗಿತು. ಸಾಯುವಾಗಲೂ, ಅವನು ಇಸ್ಲಾಂ ಮತಸ್ಥನೆಂಬ ವೇಷವನ್ನು ಧರಿಸಿದ್ದರೂ, ವಾಸ್ತವಿಕವಾಗಿ ಮಹಮ್ಮದನ ಶತ್ರುವಾಗಿಯೇ ಮರಣಹೊಂದಿದನು. ಆದರೆ ಅವನ ಮಗನ ಸ್ವಭಾವವು. ಹಾಗಿರದೆ ಅವನು ತ್ರಿಕರಣ ಶುದ್ದನಾದ ಮಹಮ್ಮದೀಯನಾಗಿದ್ದನು. ಅವನು ತಂದೆಯ ಮರಣದಿಂದ ದುಃಖಿತನಾಗಿ ಮಹಮ್ಮದನ ಬಳಿಗೆ ಬಂದು, ಶವಕ್ಕೆ ಹೊದಿಸಲು ತನ್ನ ಮೇಲುಹೊದಿಕೆಯನ್ನು ಕೊಟ್ಟು ಮೃತನ ದೇಹವನ್ನು ಪವಿತ್ರಗೊಳಿಸಬೇಕೆಂದೂ, ಮಹಮ್ಮದನೇ ಬಂದು ನಿಂತು ಉತ್ತರ ಕ್ರಿಯೆಗಳನ್ನು ನಡೆಯಿಸಬೇಕೆಂದೂ ಬೇಡಿಕೊಂಡನು. ಇವು ತನ್ನ ಮಿತ ವರ್ಗದವರಿಗೆ ಮಾತ್ರವೇ ಮಹಮ್ಮದನು ಕರುಣಿಸು. ತಿದ್ದ ಅನುಗ್ರಹ ವಿಶೇಷಗಳಾಗಿದ್ದುದರಿಂದ, ಅಂಥವುಗಳನ್ನು ಶತ್ರು. ವಾದವನಿಗೆ ಎಂದಿಗೂ ಅನುಗ್ರಹಿಸದಂತೆ ಮಾಡಲು ಮಹಮ್ಮದನ ಕಡೆ. ಯವರು ಪ್ರಯತ್ನಿಸಿದರು. ಆದರೂ ಮಹಮ್ಮದನು ಕ್ಷಮೆಯನ್ನು ತೋರಿಸಿ, ಶತ್ರುವಿನ ಮಗನ ಕೋರಿಕೆಯನ್ನು ಸಲ್ಲಿಸಿಯೇ ಬಿಟ್ಟನು. ಇದರಿಂದ, ಮೃತನ ಅನುಯಾಯಿಗಳೆಲ್ಲರ ಮನಸ್ಸಿನ ಮೇಲೂ ಅನಿರ್ವಚನ ನೀಯವಾದೊಂದು ಪರಿಣಾಮವುಂಟಾಗಿ, ಮಹಮ್ಮದನ ಸೌಜನ್ಯ. ವನ್ನು ನೋಡಿ ಅವರೆಲ್ಲರೂ ವಿಸ್ಮಯಹೊಂದಿದರು. ಅಷ್ಟೇ ಅಲ್ಲ ; ತಾವು ನಡೆಯಿಸುತ್ತಿದ್ದ ಕಾರ್ಯಗಳಿಗಾಗಿ ಅವರೆಲ್ಲರೂ ಪಶ್ಚಾತ್ತಾಪ ಪಟ್ಟು, ನಿಶ್ಚಲ ಮನಸ್ಸಿನಿಂದ ನಿಜವಾದ ಮಹಮ್ಮದೀಯರಾದರು. ಮಹಮ್ಮದನ ಕಾರ್ಯ ಸಾಧನೆಗೆ ಅಡ್ಡಿಯಾಗಿ ಬರುತ್ತಿದ್ದ ವಿಷ್ಣು ಸರಂಪರೆಯು ಅಂದಿಗೆ ಸರಿಸಮಾಪ್ತಿ ಹೊಂದಿ ಮುಂದೆ ಅವನ ಕಾರ್ಯಗಳು ನಿರ್ವಿಘ್ನ ವಾಗಿಯ ನಿರಾತಂಕವಾಗಿಯೂ ನೆರವೇರಲು ಅನುಕೂಲ ವಾಯಿತು. ಮಕ್ಕಾ ನಗರವೂ ಇತರ ಪ್ರಾಂತಗಳೂ ಮಹಮ್ಮದನ ಅಧೀನಕ್ಕೆ ಬಂದುದರಿಂದ ಅವನ ಪ್ರಾಬಲ್ಯವು ಹೆಚ್ಚಿತು. ಮಕ್ಕಾ ನಗರವು ಅರಬ್ಬಿ ದೇಶದ ಪ್ರಧಾನ ಪಟ್ಟಣದಂತಿದ್ದಿತು. ಕಾಲ ಕ್ರಮ ಮತ ಪ್ರಚಾರ ದಲ್ಲಿ, ಮಹಮ್ಮದನು ಕಳುಹಿಸಿದ ಬೋಧಕರ ಉಪ