ಪುಟ:ಪೈಗಂಬರ ಮಹಮ್ಮದನು.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XII, ಅಭ್ಯುದಯ ದಶೆ ဂဝ ದೇಶವನ್ನು ಕೇಳಿ, ಇಸ್ಲಾಂ ಮತದ ಶ್ರೇಷ್ಠತೆಯನ್ನು ಗ್ರಹಿಸಿ, ಅನೇಕರು ಅವನ ಶಿಷ್ಯರಾಗುತ್ತ ಬಂದರು. ಕೆಲವು ವರುಷಗಳಲ್ಲಿಯೇ ಸ್ವಲ್ಪ ಹೆಚ್ಚು ಕಡಿಮೆಯಾಗಿ ಒಟ್ಟು ಅರಬ್ಬಿ ದೇಶದವರೆಲ್ಲರೂ ಇಸ್ಲಾಂ ಮತವನ್ನವಲಂಬಿಸಿ ಮಹಮ್ಮದನಿಗೆ ಮುಖ್ಯ ಶಿಷ್ಯರಾದರು. ಮಹಮ್ಮದನು ದೊರೆಯೆಂಬ ಹೆಸರನ್ನು ಸ್ವೀಕರಿಸದಿದ್ದರೂ, ಒಟ್ಟು ಅರಬ್ಬಿ ದೇಶಕ್ಕೆ ಪ್ರಭುವಾಗಿ ಪರಿಣಮಿಸಿದನು. ಲೌಕಿಕ ದೃಷ್ಟಿ ಯಿಂದ ರಾಜ್ಯಭಾರದ ವಿಚಾರಗಳಲ್ಲಿದ್ದಂತೆಯೇ, ಪಾರಮಾರ್ಥಿಕ ದೃಷ್ಟಿಯಿಂದ ಮತ ವಿಚಾರಗಳಲ್ಲಿಯೂ ಅವನಿಗೆ ಅರಬ್ಬಿ ದೇಶದ ಮೇಲೆ ಅಪ್ರತಿಹತವಾದ ಅಧಿಕಾರವಿದ್ದಿತು. ಆದಕಾರಣ, ಮಹಮ್ಮದನ ಸ್ಥಿತಿಯು ಕೇವಲ ರಾಜತ್ವಕ್ಕಿಂತಲೂ ಎಷ್ಟೋ ಹೆಚ್ಚಿನದಾಗಿದ್ದಿತು. ಅರಬ್ಬಿ ದೇಶದ ಪ್ರಜೆಗಳ ಮೇಲೆ ಸಮಸ್ತ ವಿಚಾರಗಳಲ್ಲಿಯೂ ಅವನಿಗೆ ಸರ್ವಾಧಿಕಾರವಿದ್ದಿತೆಂದರೂ ಅತಿಶಯೋಕ್ತಿಯಾಗದು. ಯಾವ ಕೈಜರ್ ಚಕ್ರವರ್ತಿಯು ಅಬೂ ಸುಧ್ಯಾನನಿಂದ ಮಹ ಮದನ ಗುಣ ಸಂಕೀರ್ತನೆಯನ್ನು ಕೇಳಿ ಆನಂದಪಟ್ಟಿದ್ದನೋ ಅದೇ ಕೈಜರ್ ಚಕ್ರವರ್ತಿಯು ಅರಬ್ಬಿ ದೇಶದಲ್ಲೆಲ್ಲ ಕೈ ಜರನ ಅಸಹಿಷ್ಣುತೆ ಇಸ್ಲಾಂ ಮತವು ಹಬ್ಬುತ್ತಿದ್ದುದನ್ನು ಕಂಡು ಅಸೂಯೆಯಿಂದ ಕೇವಲ ಕಳವಳಕ್ಕೊಳಗಾದನು. ಮಹಮ್ಮದನ ಪ್ರಾಬಲ್ಯವು ಹೆಚ್ಚಿದಂತೆಲ್ಲ ಕೈಸ್ತ ಮತೀಯನಾದ ಆ ದೊರೆಯು ಆತಂಕಗೊಂಡು, ಮಹಮ್ಮದನು ಅರಬ್ಬಿ ದೇಶಕ್ಕೆಲ್ಲ ಒಡೆಯ ನಾಗುವನೆಂಬ ಚಿಂತೆಯಿಂದ, ಚಿತ್ರಶಾಂತಿಯೇ ಇಲ್ಲದವನಾದನು. ಮಹ ಮೃದನು ತನ್ನ ರಾಷ್ಟ್ರದಲ್ಲಿದ್ದ ಕೈಸ್ತ ಮತೀಯರ ವಿಷಯದಲ್ಲಿ ಹೇಗೆ ವರ್ತಿಸುತ್ತಿದ್ದನೆಂಬುದನ್ನು ಪರಿಗಣಿಸಿದರೆ, ಕೈಬರನ ಅಸಹನೆಯು ಅನ್ಯಾಯವಾದುದೆಂದೇ ಹೇಳಬೇಕು. ಕೈಸ್ತ ಮಠಾಧಿಪತಿಗಳ ಮತ್ತು ಕೈ ಮತೀಯರ ಹಕ್ಕು ಬಾಧ್ಯತೆಗಳು ಸುರಕ್ಷಿತವಾಗಿರುವಂತೆ ಮಹ ಮೂದನು ನಿರೂಪವನ್ನು ಕೊಟ್ಟು, ತನ್ನ ರಾಷ್ಟ್ರದಲ್ಲಿ ಯಾರೂ ಕೈಸ್ತರ ಸ್ವತ್ತನ್ನು ಅಪಹರಿಸಕೂಡದೆಂದೂ, ಅವರ ಮತವನ್ನು ದೂಷಿಸಕೂಡ ದೆಂದೂ, ಅವರ ಮತಾಚಾರಗಳಿಗೆ ಅಡ್ಡಿ ಬರಕೂಡದೆಂದೂ, ಇಸ್ಲಾಂ