ಪುಟ:ಪೈಗಂಬರ ಮಹಮ್ಮದನು.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೪ ಪೈಗಂಬರ ಮಹಮ್ಮದನು ಮತಕ್ಕೆ ಸೇರುವಂತೆ ಅವರನ್ನು ಕೇಳಕೂಡದೆಂದೂ ಕ ವ್ಯಾಜ್ಞೆ ಮಾಡಿದ್ದನು. ಕೈಸ್ತರ ಮೇಲೆ ಹೆಚ್ಚು ತೆರಿಗೆಯನ್ನು ಹಾಕಕೂಡ ದೆಂದೂ, ಮುಸಲ್ಮಾನರ ಮನೆಗಳನ್ನಾಗಲಿ ಮಸೀದಿಗಳನ್ನಾಗಲಿ ಕಟ್ಟುವುದಕ್ಕಾಗಿ ಕೈಸ್ತ ದೇವಾಲಯಗಳನ್ನು ಎಂದಿಗೂ ಕೆಡಹಕೂಡ ದೆಂದೂ, ಕ್ರೈಸ್ತರ ಮಠಗಳಿಗೂ ದೇವಾಲಯಗಳಿಗೂ ಕಾಮಗಾರಿ ಮಾಡುವುದರಲ್ಲಿ ಮುಸಲ್ಮಾನರೂ ಉಚಿತವಾಗಿ ಸಹಾಯ ಮಾಡ. ಬೇಕೆಂದೂ ಮಹಮ್ಮದನು ಅಪ್ಪಣೆ ಮಾಡಿದ್ದನು. ಒಂದು ವೇಳೆ ಪರದೇಶದ ಕೈಸ್ತರೊಡನೆ ಯುದ್ಧವು ಸಂಘಟಿಸಿದರೂ ಕೂಡ, ಕ್ರೈಸ್ತರು ತಮ್ಮ ವಿರೋಧಿಗಳೆಂಬ ಕಾರಣದ ಮೇಲೆ, ಮಹಮ್ಮದೀಯರು ತನ್ನ ಕೈ ಪ್ರಜೆಗಳಿಗೆ ಲೇಶ ಮಾತ್ರವೂ ತೊಂದರೆಯನ್ನುಂಟುಮಾಡಕೂಡದೆಂದೂ ಅವನು ತನ್ನ ನಿರೂಪದಲ್ಲಿ ಕಾಣಿಸಿದ್ದನು. ತನ್ನ ಆಜ್ಞೆಯನ್ನು ಮೀರಿ, ಈ ನಿಯಮಗಳಿಗೆ ವಿರೋಧವಾಗಿ ನಡೆಯುವವರೆಲ್ಲರೂ ದೈವ ದ್ರೋಹಿ. ಗಳೆಂದೂ ಗುರು ದ್ರೋಹಿಗಳೆಂದೂ ಆತ್ಮ ದ್ರೋಹಿಗಳೆಂದೂ ಮಹ. ಮ್ಮದನು ಪ್ರಕಟಿಸಿದ್ದಲ್ಲದೆ, ಅಂಥವರಿಗೆ ಕ್ರೂರ ದಂಡನೆಯನ್ನೂ ಗೊತ್ತು. ಮಾಡಿದ್ದನು. ಈ ನಿಯಮಗಳನ್ನು ನೋಡಿದರೆ ಮಹಮ್ಮದನು ಎಷ್ಟು, ಮಟ್ಟಿಗೆ ಪರ ಮತ ಸಹಿಷ್ಣುವಾಗಿದ್ದನೆಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ, ಘಜನಿಯ ಮಹಮ್ಮದನೇ ಮುಂತಾದವರೆಲ್ಲರೂ ಇದೇ ವಿಧದಲ್ಲಿ ಪರ ಮತ ಸಹಿಷ್ಣುತೆಯನ್ನು ತೋರ್ಪಡಿಸಿದ್ದರೆ, ಇಸ್ಲಾಂ ಮತದ. ಕೀರ್ತಿಯು ಇನ್ನೆಷ್ಟು ಉಜ್ವಲವಾಗಿರುತ್ತಿದ್ದಿತೋ ಎಂಬ ಭಾವನೆಯು. ಹುಟ್ಟುತ್ತದೆ. ಮಹಮ್ಮದನು ಇಷ್ಟು ಮಟ್ಟಿಗೆ ಪರ ಮತ ಸಹಿಷ್ಣುತೆಯಿಂದಿದ್ದರೂ, ರೋಮನ್ ಚಕ್ರವರ್ತಿಯಾದ ಕೈಜರನು ಅವನ ಮೇಲೆ ಯುದ್ಧ ಸನ್ನಾಹ ಮಾಡಿ, ಫಸ್ಟನ್ ಮುಂತಾದ ಗುಂಪುಗಳ ಜನರನ್ನು ತನ್ನ ಕಡೆಗೆ ಸೇರಿಸಿಕೊಂಡು, ದೊಡ್ಡ ಪ್ರಯಾಣ ದೊಂದು ಸೈನ್ಯವನ್ನು ಸಿದ್ಧಗೊಳಿಸಲುಪಕ್ರಮಿ ಸಿದನು. ಅತ್ಯ, ಮಹಮ್ಮದನೂ ಕಷ್ಟ ನಿವಾರಣೆಗಾಗಿ ತಕ್ಕ ಉಪಾಯವನ್ನಾಲೋಚಿಸಿ, ಮಾತೃಭೂಮಿಯು ಪರರ ವಶವಾಗ ತಾಬಕಿಗೆ