ಪುಟ:ಪೈಗಂಬರ ಮಹಮ್ಮದನು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೫ XII ಅಭ್ಯುದಯ ದಶ ದಂತೆ ಅರಬ್ಬಿಯವರೆಲ್ಲರೂ ಅನುವಾಗಬೇಕೆಂದು ಜನರನ್ನು ಪ್ರೋತ್ಸಾ ಹಿಸಿ, ದೊಡ್ಡದೊಂದು ಸೈನ್ಯವನ್ನು ಕೂಡಿಸಿದನು. ಸೈನ್ಯದ ವೆಚ್ಚಕ್ಕೆ ಧನಿಕರು, 'ನಾನು ಮುಂದು, ತಾನು ಮುಂದು ಎಂದು ಉತ್ಸಾಹ ದಿಂದ ಧನ ಸಹಾಯ ಮಾಡಿದರು; ಸ್ತ್ರೀಯರು ಕೂಡ ತಮ್ಮ ಆಭರಣ ಗಳನ್ನೂ ಪ್ಪಿಸಿ ಮಾತೃಭೂಮಿಯ ಸೇವೆ ಮಾಡಿದರು. ಕೈಜರನ ಸೈನ್ಯವು -ಅರಬ್ಬಿ ದೇಶಕ್ಕೆ ಮುತ್ತಿಗೆ ಹಾಕಲು ಬಂದಲ್ಲಿ ಯುದ್ಧಾರಂಭಮಾಡು ವುದಾಗಿ ಮಹಮ್ಮದನು ನಿರ್ಧರಿಸಿ, ಯಥಾ ಸಮಯದಲ್ಲಿ ಗಡಿ ನಾಡಿನ ಬಳಿಗೆ ಸೈನ್ಯವನ್ನು ಸಾಗಿಸಿದನು. ಮೂವತ್ತು ಸಾವಿರ ಮಂದಿ ಯೋಧರು ಜೀವದ ಮೇಲಣ ಹಂಗನ್ನು ತೊರೆದು ಕಾದಲು ಸಿದ್ಧರಾದರು. ಹಿಂದೆ, ಮೂರು ಸಾವಿರ ಸೈನ್ಯವೇ ಅಸಂಖ್ಯಾತವಾದ ಶತ್ರು ಸೈನ್ಯದೊಡನೆ ಯುದ್ದ ಮಾಡಿ ಗೆದ್ದಿದ್ದ ಖ್ಯಾತಿಯನ್ನು ನೆನೆದು ಅವರೆಲ್ಲರೂ ಉತ್ಸಾಹ ದಿಂದ ಹುರಿಗೊಂಡರು. ಅದೇ ವಿಷಯವನ್ನು ಸ್ಮರಿಸಿಕೊಂಡು ಘಸ್ಸನ್ ಮುಂತಾದ ಬುಡಕಟ್ಟುಗಳ ಜನರು ಕಳೆಗುಂದಿ, ಕೈಜರನ ಸಹಾಯಕ್ಕೆ ಸೈನ್ಯವನ್ನು ಕಳುಹಿಸದೆ ತಟಸ್ಥರಾದರು. ಅರಬ್ಬಿ ದೇಶಕ್ಕೂ ದಮಾ ಸ್ನಸಿಗೂ ನಡುವೆ ಇರುವ ತಾಬೂಕ್ ಎಂಬಲ್ಲಿ ಮಹಮ್ಮದನ ಸೈನ್ಯವು ಬೀಡುಬಿಟ್ಟಿದ್ದಿತು. ಅತ್ಯ, ಕಾರ್ಯಾಂತರದಿಂದ ಕೈಜರನು ಮಹಮ್ಮದೀ ಯರ ಮೇಲೆ ಯುದ್ಧ ಮಾಡುವ ಯೋಚನೆಯನ್ನೇ ಬಿಟ್ಟು ಸುಮ್ಮ ನಾದನು. 'ನಿನ್ನೊಡನೆ ಕಾಳಗಕ್ಕೆ ಬಂದವರೊಡನೆ ಮಾತ್ರ ನಿನ್ನ ಮತ ಕ್ಕಾಗಿ ಯುದ್ಧ ಮಾಡು ; ಆದರೆ, ಈ ನಿಯಮವನ್ನು ಮೀರಿ ನಡೆಯ ಬೇಡ ಎಂಬ ಖುರಾನಿನ ಉಪದೇಶಕ್ಕನುಗುಣವಾಗಿ ಮಹಮ್ಮದನ `ಸೈನ್ಯವು ಯಾರ ಗೋಜಿಗೂ ಹೋಗದೆ ಹಿಂದಿರುಗಿತು. ಬೇಸಗೆಯ ಬೇಗೆಯಿಂದ ಸೈನಿಕರೆಲ್ಲರಿಗೂ ಬಹಳ ಕಷ್ಟವಾಯಿತು. ತಾಲೂಕಿಗೆ ಪ್ರಯಾಣ ಮಾಡಿದಾಗ ಮಹಮ್ಮದನು ಅಲೀಯನ್ನು ತನ್ನ ಪ್ರತಿನಿಧಿ ಯಾಗಿ, ಖಲೀಫನೆಂಬ ಹೆಸರಿನಿಂದ, ಮೆದೀನಾ ನಗರದ ಆಡಳಿತವನ್ನು ನೋಡಿಕೊಳ್ಳಲು ನೇಮಕ ಮಾಡಿದ್ದನು. ತಾಯೆಫ್ ನಗರ ನಿವಾಸಿಗಳು ಇಸ್ಲಾಂ ಮತವನ್ನು ಸ್ವೀಕರಿಸ ಬೇಕೆಂದು ಕೂಡ ಕೇಳದೆ ಮಹಮ್ಮದನು ಮುತ್ತಿಗೆಯನ್ನೆತ್ತಿ ಹೊರಟು