ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XII ಅಭ್ಯುದಯ ದಶ ೧೦೯ ಒಟ್ಟು ಅರಬ್ಬಿ ದೇಶವು ಮಹಮ್ಮದನಿಗೆ ಅಧೀನವಾಗಿ ಇಸ್ಲಾಂ ಮತವು ಎಲ್ಲೆಲ್ಲಿಯ ಹಬ್ಬಿತು, ಅಲ್ಲಲ್ಲಿ ಕೆಲವು ಮಂದಿ ಕೈಸ್ತರೂ ಕೆಲವು ಮಂದಿ ಯೆಹೂದ್ಯರೂ ಇದ್ದುದು ಹೊರತು ಒಟ್ಟಿನಲ್ಲಿ ಅರಬ್ಬಿ ದೇಶವೆಲ್ಲ ಅಲ್ಲಾ--ಅಕ್ಟರ್‌ ” ಎಂಬ ಧ್ವನಿಯಿಂದ ತುಂಬಿ ತುಳುಕುತ್ತಿದ್ದಿತು. ಮಹಮ್ಮದನು ವಿಚಕ್ಷಣತೆಯಿಂದ ತನ್ನ ರಾಷ್ಟ್ರದ ಆಡಳಿತವನ್ನು ನೋಡಿಕೊಳ್ಳುತ್ಯ, ಮತ ವಿಷಯಕ್ಕಾಗಲಿ ರಾಜ ಕಾರ್ಯಕ್ಕಾಗಲಿ ಹೊರಗಿನಿಂದ ಬಂದವರೆಲ್ಲರ ಕೋರಿಕೆಗಳನ್ನು ಸಲ್ಲಿಸುತ್ತ ಸುಖದಿಂದಿದ್ದನು. ಅರಬ್ಬಿಯವರಲ್ಲಿ ಅನೇಕ ದುರಾಚಾರ ಗಳಿದ್ದುವು : ಕೆರೆ ಕಟ್ಟೆಗಳಲ್ಲಿ ಸ್ತ್ರೀ ಪುರುಷರು ನಗ್ನರಾಗಿ ಸ್ನಾನಮಾಡು ವುದು ; ಹೆಣ್ಣು ಕೂಸುಗಳನ್ನು ಸಜೀವವಾಗಿ ಹೂಳಿ, ಆ ಶಿಶು ಹತ್ಯಕ್ಕೆ ಹೇಸದೆ ಆನಂದಪಡುವುದು ; ತಂದೆಯು ಮೃತನಾದ ಬಳಿಕ ತಾಯಿ ಯನ್ನೂ ಆಕೆಯ ಸಪತ್ನಿ ಯರನ್ನೂ ದಾಸಿಯರಂತೆ ಕಾಣುವುದು; ಪಾಪ ಭೀತಿಯ ಜನಾಪವಾದದ ಭಯವೂ ಇಲ್ಲದೆ ನಿರ್ಲಜ್ಜರಾಗಿ ನೀಚ ಕಾರ್ಯಗಳನ್ನು ಮಾಡುವುದು; ಐಕಮತ್ಯವಿಲ್ಲದೆ ಒಬ್ಬರೊಡನೊಬ್ಬರು ಹೊಡೆದಾಡುವುದು-ಇವೇ ಮುಂತಾದ ಹೇಯ ವರ್ತನೆಗಳು ಎಲ್ಲೆ ಲ್ಲಿಯ ತುಂಬಿದ್ದುವು. ಮಹಮ್ಮದನು ಇವೆಲ್ಲವನ್ನೂ ತೊಲಗಿಸಿ, ಅರಬ್ಬಿಯವರಲ್ಲಿ ಸೋದರ ಪ್ರೇಮವನ್ನು ನೆಲೆಗೊಳಿಸಿ, ಐಕಮತ್ಯ ಭಾವನೆ ಯಿಂದ ಅವರೆಲ್ಲರನ್ನೂ ಹುರಿಗೂಡಿಸಿ, ತಾನು ಉಪಾಸಿಸಿದ ದಿವ್ಯ ತಮ್ಮ ಗಳನ್ನು ಅವರಿಗೆ ಬೋಧಿಸಿದನು, ಅಜ್ಞಾನಾಂಧಕಾರದಲ್ಲಿ ಮುಳುಗಿ ತತ್ತರಿಸುತ್ತಿದ್ದವರು ಜ್ಞಾನ ದೀಪಿಕೆಯ ಬೆಳಕಿನಲ್ಲಿ ಆನಂದದಿಂದೋಲಾ ಡುವಂತೆ ಮಾಡಿ ಅವನು ಚರಿತಾರ್ಥನಾದನು, ತಾನು ಕಳುಹಿಸಿದ ಮತ ಬೋಧಕರ ಬೋಧನೆಯಿಂದ ಹೊಸ ಹೊಸ ದೇಶದ ಜನರು ಮಹಮ್ಮದನನ್ನು ಗುರುವಾಗಿ ಸ್ವೀಕರಿಸಿ ಭಕ್ತಿ ವಿಶ್ವಾಸಗಳನ್ನು ತೋರಿ ಸಿದರು. ಸ್ವದೇಶ ವಿದೇಶೀಯರೆಲ್ಲರ ಪ್ರೀತಿಗೂ ಪಾತ್ರನಾಗಿ ಮಹ ಮೃದನು ತನ್ನ ಕರ್ತವ್ಯ ನಿಷ್ಠೆಯನ್ನು ಪರಿಪಾಲಿಸಿದನು,