________________
IX, ಮಕ್ಕಾ ನಗರಕ್ಕೆ ಪ್ರಯಾಣ ೭೯ ಆದರೆ ನಾವು ಈ ಸಂಬಂಧದಲ್ಲಿ ಎರಡು ವಿಷಯಗಳನ್ನು ಗಮನಿಸ ಬೇಕಾಗಿದೆ : ಮೊದಲನೆಯದು, ಮಹಮ್ಮದೀಯರು ಎಂತಹ ಪರಾ ಕ್ರಮಿಗಳೆಂಬುದು ಮದೀನಾ ನಗರದ ಮುತ್ತಿಗೆಯಲ್ಲಿ ಶತ್ರುಗಳಿಗೆ ಚೆನ್ನಾಗಿ ಮನದಟ್ಟಾಗಿದ್ದಿತೆಂದೂ, ಪ್ರಾಯಶಃ ಅವರು ತನ್ನ ಕಡೆಯವರ ಮೇಲೆ ಕೈಮಾಡಲಾರರೆಂದೂ ಮಹಮ್ಮದನಿಗೆ ತೋರಿ ಬಂದಿರಬಹುದು. ಎರಡನೆಯದು, ಮಕ್ಕಾ ನಗರದಲ್ಲಿದ್ದ ಕಾಬಾ ದೇವಾಲಯದ ಯಾತ್ರೆಗೆ ಶತ್ತು)ಗಳೆ ಬಂದರೂ, ಅವರ ಗೊಡವೆಗೆ ಹೋಗದೆ ಸುಮ್ಮನೆ ಇರುತ್ತಿದ್ದುದು ಆಗಿನ ಪದ್ದತಿ. ಆದಕಾರಣ, ಕೊರೈಷ್ ಮನೆತನದವರು ತಮ್ಮನ್ನು ತೊಂದರೆಪಡಿಸುವ ಸಂಭವವಿಲ್ಲ ವೆಂದೂ ಮಹಮ್ಮದನ ನಿರ್ಧರಿಸಿರಬಹುದು. ಅ೦ತು, ಅವನು ಸಾವಿರದ ನಾನ್ನೂರು ಮಂದಿ ಮಹಮ್ಮದೀಯರೊಡನೆ ಮಕ್ಕಾ ನಗರಕ್ಕೆ ಪ್ರಯಾಣಮಾಡಿದನು. ಶಸ್ತ್ರ ಸಹಿತರಾಗಿದ್ದರೆ ಮಕ್ಕಾ ನಗರ ನಿವಾಸಿ ಗಳು ತಮ್ಮನ್ನು ಯುದ್ಯಾರ್ಥಿಗಳೆಂದು ಭಾವಿಸುವರೆಂಬ ಆಲೋಚನೆ ಯಿಂದ ಎಲ್ಲರೂ ನಿರಾಯುಧರಾಗಿ ಪ್ರಯಾಣ ಮಾಡಿ ಕಾಲ ಕ್ರಮದಲ್ಲಿ ಹುದೈಬಿಯಾ ಎಂಬ ಪಟ್ಟಣವನ್ನು ಸೇರಿದರು. ಅಲ್ಲಿಂದ ಮುಂದೆ ಒಂದು ದಿನ ಪ್ರಯಾಣಮಾಡಿದ್ದರೆ ಅವರು ಮಕ್ಕಾ ನಗರವನ್ನು ಸೇರು ತಿದ್ದರು. ಆದರೆ ಮಹಮ್ಮದೀಯರು ಮಕ್ಕಾ ನಗರವನ್ನು ಸೇರಿ ದೊಡನೆ ಅವರೊಡನೆ ಯುದ್ಧ ಮಾಡಲು ಶತ್ರುಗಳೆಲ್ಲರೂ ಅನುವಾಗು ತಿದ್ದರೆಂಬ ಸಂಗತಿಯ, ಮಹಮ್ಮದೀಯನಲ್ಲದಿದ್ದರೂ ಮಹಮ್ಮದ ನಲ್ಲಿ ಪ್ರೀತಿಯನ್ನಿಟ್ಟಿದ, ಬುಡೇಲ್ ಎಂಬಾತನಿಂದ ಮಹಮ್ಮದನಿಗೆ ತಿಳಿಯಿತು. ಯುದ್ದ ಪ್ರಯತ್ನವನ್ನು ಬಿಟ್ಟು ಗೊತ್ತಾದೊಂದು ಅವಧಿಯ ವರೆಗೆ ಸಮಾಧಾನದಿಂದಿರುವ ಹಾಗೆ ತನ್ನೊಡನೆ ಒಪ್ಪಂದ ಮಾಡಿ ಕೊಳ್ಳುವಂತೆ ಮಹಮ್ಮದನು ಬುಡೇಲನೊಡನೆ ಹುದೈಬಿಯಾ ವಿನ ಶತ್ರು ಪಕ್ಷದವರಿಗೆ ಹೇಳಿ ಕಳುಹಿಸಿದನು. ಮಕ್ಕಾ ಒಪ್ಪಂದ ನಗರದ ಮುಖ್ಯಸ್ಥರೆಲ್ಲರೂ ಸಭೆ ಸೇರಿ, ಇಸ್ಲಾಂ ಮತವನ್ನು ನಿರ್ನಾಮಗೊಳಿಸುವುದು ತಮ್ಮಿಂದ 64