ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ತ್ವಗಳು ೧೫೬ ಇದನ್ನೆಲ್ಲ ಸಾವಧಾನವಾಗಿ ಪರ್ಯಾಲೋಚಿಸಿ ನೋಡಿದರೆ, ಇಸ್ಲಾಂ ಧರ್ಮದ ಮೇರೆಗೆ ಸ್ತ್ರೀಯರಿಗೆ ಸಮಾಜದಲ್ಲಿ ಘನತೆ ಗೌರವ ಗಳು ರೂಢ ಮಲವಾಗಿ ನೆಲೆಗೊಂಡಿದ್ದುವೆಂದು ಧಾರಾಳವಾಗಿ ಹೇಳ ಬಹುದು. ಮಹಮ್ಮದೀಯರಲ್ಲಿ ' ಘೋಷಾ' ಪದ್ದತಿಯಿರುವುದೆಂಬ ನೆಪದ ಮೇಲೆ, ಇಸ್ಲಾಂ ಮತದಲ್ಲಿ ಸ್ತ್ರೀಯರಿಗೆ ಸರಿಯಾದ ಸ್ಥಾನವಿಲ್ಲವೆಂದು ಹಳಿಯುವುದು ನ್ಯಾಯವಲ್ಲ. ಮಹಮ್ಮದನು ಸ್ತ್ರೀಯರಿಗೆ ಸಮಾಜದಲ್ಲಿ ಗೌರವ ಸ್ಥಾನವನ್ನು ದೊರೆಯಿಸಿದಂತೆಯೇ, ದಾಯ ಭಾಗವೇ ಮುಂತಾದ ವ್ಯವಹಾರ ವಿಚಾರಗಳಲ್ಲಿಯೂ ಅವರ ಸ್ಥಿತಿಯನ್ನು ಉತ್ತಮ ಗೊಳಿಸಿದನು. ಸ್ತ್ರೀಯರ ಸ್ಥಿತಿಯು ಅತಿ ಶೋಚನೀಯವಾಗಿದ್ದ ಕಾಲ ದಲ್ಲಿ, ಸ್ತ್ರೀ ಶಿಶುವಿನ ಜನನವು ಅನಿಷ್ಟ ಕಾರಕವೆಂಬ ಭಾವನೆಯು ನೆಲೆ ಗೊಂಡಿದ್ದ ದೇಶದಲ್ಲಿ ಅವತರಿಸಿದ ಮಹಮ್ಮದನು ಈ ಇಪ್ಪತ್ತನೆಯ ಶತಮಾನದಲ್ಲಿ ಸ್ತ್ರೀಯರಿಗೆ ಇತರ ದೇಶಗಳಲ್ಲಿ ಈಗೀಗ ದೊರೆಯು ತಿರುವ ಆಸ್ತಿಯ ಹಕ್ಕುಗಳನ್ನು ತನ್ನ ದೇಶದಲ್ಲಿ ಈಗ್ಗೆ ಹದಿಮೂರು ಶತಮಾನಗಳ ಹಿಂದೆಯೇ ದೊರೆಯಿಸಿಕೊಟ್ಟನು. ಈಗಿನ ಅನೇಕ ನಾಗರಿಕ ದೇಶಗಳಲ್ಲಿ ಸ್ತ್ರೀಯರಿಗೆ ಯಾವ ಸ್ಥಾನವಿರುವುದೋ, ಅದನ್ನು ಮಹಮ್ಮದನು ಬಹು ಕಾಲಕ್ಕೆ ಹಿಂದೆಯೇ ಕಲ್ಪಿಸಿಕೊಟ್ಟನು. - ಇಸ್ಲಾಂ ಮತದ ಮೇರೆಗೆ, ಸ್ತ್ರೀಯರು ಪ್ರಾಪ್ತ ವಯಸ್ಕರಾ ದೊಡನೆಯೇ ಅವರಿಗೆ ತಮ್ಮ ಹಕ್ಕುಗಳನ್ನು ಸಾಧಿಸುವ ಸ್ವಾತಂತ್ಯು ವುಂಟಾಗುವುದು. ತಾಯಿ ತಂದೆಗಳು ಮೃತಪಟ್ಟರೆ, ಗಂಡು ಮಕ್ಕ ಳಿಗೂ ಹೆಣ್ಣು ಮಕ್ಕಳಿಗೂ ಕ್ರೈಸ್ತ ಭಾಗಗಳಲ್ಲಿ ಮೃತರ ಸ್ವತ್ತು ಹಂಚಿಕೆ ಯಾಗಬೇಕು. ಪ್ರಾಪ್ತ ವಯಸ್ಕಳಾಗಿ ಸ್ವತಂತ್ರಳಾಗಿರುವ ಸ್ತ್ರೀಯನ್ನು ಅವಳ ಇಷ್ಟಕ್ಕೆ ವಿರೋಧವಾಗಿ ರಾಜನು ಕೂಡ ವಿವಾಹವಾಗುವ ಹಾಗಿಲ್ಲ. ಸ್ತ್ರೀಯರಿಗೆ ವಿವಾಹವಾದ ಮೇಲೂ ವೈಯಕ್ತಿಕವಾಗಿ ಅವರಿಗೆ ನಡೆದುಬರುವ ಸ್ವತ್ತಿನ ಹಕ್ಕಿಗೆ ಯಾರೂ ಲೋಪವನ್ನುಂಟು ಮಾಡುವಂತಿಲ್ಲ. ವಿವಾಹಕ್ಕೆ ಪೂರ್ವ ಭಾವಿಯಾಗಿ ವರನು ವಧುವಿಗೆ ಶುಲ್ಕ ರೂಪದಲ್ಲಿ ಹಣವನ್ನಾಗಲಿ, ಅಥವಾ ಇತರ ಸ್ವತ್ತನ್ನಾಗಲಿ ಕೊಡಬೇಕು. ಹಾಗೆ ಕೊಡದೆ ತಪ್ಪಿದರೂ, ಗಂಡನು ತನ್ನ ಶಕ್ತಿಗೆ