ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮದನ ರೂಪವೂ ಗುಣಗಳೂ ೧೨೭ ಸುಖ ಜೀವಿಗಳಾಗಿದ್ದರೂ ತನ್ನ ಜೀವನ ವಿಧಾನವನ್ನು ಮಾರ್ಪಡಿಸ ಲೊಲ್ಲದೆ, ಖದೀಜಳ ವಿವಾಹಕ್ಕೆ ಮುಂಚಿತವಾಗಿ ತಾನು ಯಾವ ರೀತಿಯ ಇದ್ದನೋ ಅದೇ ರೀತಿಯಲ್ಲಿ ಆಜೀವವೂ ದಾರಿದ್ರಾವಸ್ಥೆಯಲ್ಲಿದ್ದುದೂ; ಒಮ್ಮೆ ತನ್ನ ಪತ್ನಿಯರೆಲ್ಲರೂ ತನ್ನ ಬಳಿಗೆ ಬಂದು ತಮ್ಮ ಅಂತಸ್ತಿಗೆ ತಕ್ಕಂತೆ ತಮ್ಮನ್ನು ವೈಭವದಿಂದಿಡಬೇಕೆಂದು ಪ್ರಾರ್ಥಿಸಿದಾಗ, ತನಗೆ ಅವರಲ್ಲಿ ಅತ್ಯಂತ ಪ್ರೀತಿಯಿದ್ದರೂ, “ನೀವು ಐಹಿಕ ಸುಖಕ್ಕೆ ಮುಗ್ಧ ರಾಗಿ ಪರಲೋಕ ಸುಖವನ್ನು ಕಳೆದುಕೊಳ್ಳುವ ಯೋಚನೆಯನ್ನು ಮಾಡಬಹುದೆ? ಐಹಿಕ ಭೋಗದಲ್ಲಿ ಮಗ್ನರಾಗುವುದೂ, ಮಹಮ್ಮದನ ಸಹಧರ್ಮಿಣಿಯರಾಗಿರುವುದೂ ಏಕ ಕಾಲದಲ್ಲಿ ಸಾಧ್ಯವಲ್ಲ. ನೀವು ಸುಖಾನುಭವಕ್ಕೆ ಆಶಿಸುವುದಾದರೆ, ನಾನು ಅದಕ್ಕೂ ಏರ್ಪಾಡು ಮಾಡಿಕೊಡುತ್ತೇನೆ ; ಆದರೆ, ಆಗ ಮಾತ್ರ ನೀವು ನನ್ನ ಪತ್ನಿಯರೆನಿಸಿ ಕೊಂಡು ನನ್ನೊಡನೆ ಈ ಮನೆಯಲ್ಲಿರುವ ಹಾಗಿಲ್ಲ. ನಿಮಗೆ ಹೇಗೆ ಸೂಕ್ತ ತೋರಿದರೆ ಹಾಗೆ ನಡೆಯಿರಿ' ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ದುದೂ ; ವಿಷಯೋಪಭೋಗವೇ ಗುರಿಯಾಗಿದ್ದು, ಅವನು ಅನೇಕ ಮಂದಿ ಸ್ತ್ರೀಯರನ್ನು ವರಿಸಿದ್ದ ಪಕ್ಷಕ್ಕೆ ಎಂದಿಗೂ ಹೀಗೆ ಹೇಳದೆ ಆಡಂಬರದ ಜೀವನಕ್ಕೆ ಕೈಹಾಕಿ ಸುಖಲೋಲನಾಗಿರುತ್ತಿದ್ದನೆಂಬುದೂ; ಇವೇ ಮೊದಲಾದ ಕಾರಣಗಳನ್ನು ತಿಳಿಸಿ, ಆ ಲೇಖಕರೆಲ್ಲರೂ ಮಹ ಮೃದನ ವಿಷಯದಲ್ಲಿ ಬಹುಪತ್ನಿತ್ವವು ಅಸಾಧುವಲ್ಲವೆಂದು ಸಿದ್ಧಾಂತ ಮಾಡಿದ್ದಾರೆ. ಬಹುಪತ್ನಿತ್ವವು ಮಹಮ್ಮದನಲ್ಲಿದ್ದ ಪ್ರಬಲ ವಾದೊಂದು ದೋಷವೆಂದು ಪರಿಗಣಿಸುವವರೂ ಕೂಡ, ಆತನಲ್ಲಿದ್ದ ಅಮೋಘವಾದ ಸದ್ಗುಣಗಳನ್ನು ಅಭಿನಂದಿಸಲೇ ಬೇಕು ; ಅರಬ್ಬಿಯವರ ಉದ್ದಾರಕ್ಕಾಗಿ ಭಗವಂತನ ಅನುಗ್ರಹದಿಂದ ಮಹಮ್ಮದನು ಜನ್ಮ ಗ್ರಹಣ ಮಾಡಿದನೆಂಬುದನ್ನು ಅವರೆಲ್ಲರೂ ಒಪ್ಪಲೇ ಬೇಕು; ಜಗತ್ಕಲ್ಯಾಣ ಕ್ರೋಸುಗ ಅವತರಿಸಿದ ಪುರುಷ ಶ್ರೇಷ್ಟರಲ್ಲಿ ಮಹಮ್ಮದನೂ ಒಬ್ಬ ನೆಂಬುದಕ್ಕೆ ಅವರೆಲ್ಲರೂ ಸಮ್ಮತಿಸಲೇ ಬೇಕು.