ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 59, ಕೋಳುಗುಳದ ಮನವಿ [Theodor Korner ಎಂಬ ಜರ್ಮ ನ್ ಕವಿಯ ' Gebet wahrend der Schlacht' (Prayer during the battle) ಎಂಬ ಕವಿತೆಯಿಂದ ಪ್ರೇರಿತವಾದುದು ಕರೆವೆ ನಾ ನಿನ್ನನೊಡೆಯಾ ? ನಿನ್ನ ಹೆಸರಂ ಕೊಂಡು ನಿಂದೆನಿದೊ ಸಿಡಿಗುಂಡು ನೂರ್ಮೆ ಮಾರ್ಮೊರಸೆ ಕಾರ್ಮೊಳಗನುರ್ನರೆಯಿಂ, ಕಿಸುಬಾಯನಾಕಳಿಸಿ ದೆಸೆಗಳಂ ಬಾಗುಳಿಸಿ, ಮಿಂಚೆರಂಚಿ ಪಳಂಚಿ ಮುಂಚೆ ದಳ್ಳುರಿಯಿಂಪ್ರೊಡ್ಡಂಡ ತಾಂಡವಮೊ ನಿನ್ನದೊಡೆಯ ? ನಿನಗೆ ಮಣಿಮಣಿವೆನೊಡೆಯಾ | ನಿನಗೆ ಮಣಿಮಣಿವೆನೊಡೆಯಾ ! ಕಾಳೆಗಳ ಭೋಂಕಾರ ಧೋಳ ಧಳಂಕಾರ ಹೊಂಗುತಿದ ಮಂಗಲಾಮಂಗಲ ತೂರ್ಯ೦ | ಇದೋ ನಿಶಾಂತ ತುತ್ತೂರಿಯೂದಲಿಂತದೆ ತೂರಿ* ಪರಧುರ್ಯರಿತಿಕಾರ್ಯಮನಿವಾರ್ಯ ಶೌರ್ಯ೦ !! ಜೀವಂತ ಕೋವಿಯಾನೇನೆನೊಡೆಯಾ ! ಕಾಣಿಸಾಣತಿಯನೊಡೆಯಾ ! 14 ಕಾಣಿಸಾಣತಿಯನೊಡೆಯಾ ! ನನ್ನ ಬಾಯಿಯ ತುತ್ತ ಕಸಿವ ಹಸಿವೆಯ ಕುತ್ತ ಮೆಂತಂತು ಸಂಗ್ರಾಮ ಸಂಭ್ರಮಾಹ್ವಾನಂ, ಗೃಹಲಕ್ಷ್ಮಿ ಕೊರಳಾಂತು ಸುರಿದ ನೀರವಮೆಂತು ಅ೦ತೀ ರಣಾಂಗಣ ಘನಾಘನ ಧ್ಯಾನಂನಿನ್ನ ನಿಶ್ಚಂಕ ಸಂಕಲ್ಪವೊಡೆಯಾ ! ನೀಡ ರಣದೀಕ್ಷೆಯೊಡೆಯಾ !