ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಗಾರ್ಮೆಂಟ್ ಬ್ರಾಹ್ಮಣ

ಹತ್ತಿ ಕದ್ದದ್ದು ಲಾಡು ತಿಂದದ್ದು

"ರಕ್ಕಸ ತಂಗಡಿಗಿಯ ಕಾಳಗ" ಇತಿಹಾಸ ಪ್ರಸಿದ್ಧವಾದ ಸ್ಥಳ ತಂಗಡಿಗಿ ಯಾರಿಗೆ
ಗೊತ್ತಿಲ್ಲ? ತಂಗಡಿಗಿಯ ಆ ಟಾರ್ ರೋಡ್ ಮೇಲುಗಡೆ ಬಿದ್ದು ನಾನು ಒದ್ದಾಡುತ್ತಿದ್ದೆ.

ಆತ ಒಂದೇ ಸಮನೆ ಬಾರುಕೋಲಿನಿಂದ ಸೆಳೆಯುತ್ತಲಿದ್ದ.

"ನಿನ್ನೆ ತಪ್ಪಿಸಿಕೊಂಡು ಓಡಿಹೋಗಿದ್ದೆ.
ಇವತ್ತು ಸಿಕ್ಕ..
ನಿಮ್ಮ ಹುಟ್ಟು ಗುಣ ಹ್ಯಾಂಗೆ ಬಿಟ್ಟಿರಿ?
ದನದ ಚರ್ಮಾ ಸುಲ್ಲು ತಗೊಂಗ
ನಿಮ್ಮಾ ಚರ್ಮ ಸುಲ್ಲು ತಗೀಬೇಕು, ಅಂದ್ರೆ ಬಿಡ್ತೀರಿ........"

ಹೀಗೆ ದವಡೆ ಕಚ್ಚಿ ನಿಟ್ಟುಸಿರು ಬಿಡುತ್ತ ನಿನ್ನೆಯ ಸಿಟ್ಟನ್ನೂ ಆವತ್ತಿನ ಸಿಟ್ಟನ್ನೂ ಎರಡೂ ಸೇರಿಸಿ ಬಡ್ಡಿ ಸಮೇತವಾಗಿ ಚುಕ್ತಾ ಮಾಡುತ್ತಿದ್ದ. ನನ್ನ ಆ ರೋದನದ ದನಿಗೆ ಹತ್ತಿಯ ಎಂಟು ದಿಂಡುಗಳನ್ನು ಹೇರಿಕೊಂಡು ನನ್ನ ಮುಂದೆ ನಿಂತಿದ್ದ ಚಕ್ಕಡಿಯ ಎತ್ತುಗಳು ಬೆದರಿ ಚಕ್ಕಡಿ ಎಳೆದುಕೊಂಡು ಮುಂದೆ ನಡೆದವು. ರಸ್ತೆ ಪಕ್ಕದ ಹೊಲದ ಗಿಡಗಳಲ್ಲಿ ಹತ್ತಿಯನ್ನು ಬಿಡಿಸುತ್ತಿದ್ದ ಹೆಂಗಸರು ಬಂದು

"ಅಯ್ಯಾ ಬಿಡ್ರಿ ಯಪ್ಪಾ ಬಿಡ್ರಿ, ಎಷ್ಟ ಹೊಡಿತೀರಿ
ಸತ್ತು ಗಿತ್ತಿತು.......
ಮೊದಲ ಸಣ್ಣ ಪಾರೈತಿ.........."

ನೀ ಏನ ಹೇಳಿ ಬೇ..... ನಿಂದೇನ ಗಂಟು ಹೋಕ್ಕದ? ಹೋಗೋದು ನಮ್ಮದು? ಎಂದು ಉತ್ತರ ಕೊಡುತ್ತ ನನ್ನ ಹೊಟ್ಟೆಯ ಅಂಗಿಯ ಒಳಗಡೆ ಬಚ್ಚಿಟ್ಟುಕೊಂಡಿದ್ದ ಹತ್ತಿಯನ್ನು ಹಿಡಿದು ಹೊರಕ್ಕೆ ತೆಗೆದು.
ನೋಡಿದ್ಯಾ, ಅರ್ಧಾ ಕಿಲೋ ಹತ್ತಿ ಆಕೈತಿ
ಎಂದು ಹಲ್ಲು ಕಡಿಯುತ್ತಾ, ಆಗಲೇ ಸುಮಾರು ದೂರ ಹೋಗಿರುವ ಚಕ್ಕಡಿಯ ಕಡೆಗೆ ನಡೆದ. ಆದರೆ ಆತನ ಮಾತು ನನ್ನ ಅಳುವು ಎರಡು ನಿಂತಿರಲಿಲ್ಲ.
ನಾನು ಸಾವರಿಸಿಕೊಂಡು ಏಳುತ್ತಿದ್ದೆ. ಕಣ್ಣೀರಿನಷ್ಟೇ ಸಿಂಬಳವೂ ವೇಗವಾಗಿ ಹರಿಯುತ್ತಿತ್ತು. ಪಕ್ಕದಲ್ಲಿದ್ದ ಹೆಂಗಸರು ಸಾಂತ್ವನ ಜೊತೆಗೆ ಬುದ್ದಿಯ ಮಾತು