ಪ್ರಸ್ತಾವನೆ ಸಂಬೋಧಿಸುವದುಂಟು. ಅವರ ಮನೆತನದ ಮೂಲಪುರುಷನು ಮೊದಲು ಧಾರವಾಡ ಜಿಲ್ಲೆಯಲ್ಲಿಯ ಕುಪೇನೂರ ಎಂಬ ಗ್ರಾಮದಲ್ಲಿ ಇರುತ್ತಿದನು. ಆ ಗ್ರಾಮದ ಗೌಡಕಿಯು ಅವರ ಮನೆತನದಲ್ಲಿ ನಡೆಯುತ್ತ ಬಂದಿತ್ತು. ಮುಂದೆ ಆ ಮನೆತನದಲ್ಲಿಯ ಸಿದ್ದಪ್ಪ ಎಂಬ ಹೆಸರಿನ ಪುರುಷನು, ಕೆಲ ಕಾರಣಗಳ ಮೂಲಕ ಕುಪೆನೂರನ್ನು ಬಿಟ್ಟು ಗದಗ-ಬೆಟಗೇರಿಯಲ್ಲಿ ಕೆಲಕಾಲ ವಾಸಿಸಿ, ತರುವಾಯ ಅಲ್ಲಿಂದಲೂ ಹೊರಟು ಪಂಢರಪುರದ ನೆರೆಯಲ್ಲಿದ್ದ ಮಂಗಳ ವೀಡು ( ಮಂಗಳವೇಡೆ ) ಎಂಬ ಗ್ರಾಮದಲ್ಲಿ ಬಂದು ನೆಲೆಸಿದ. ಈ ಸಿದ್ದಪ್ಪನಿಂದ ಏಳನೆಯ ಪೀಳಿಗೆಯವರಾದ ಲಕ್ಷ್ಮಣಪ್ಪನವರು ಶ್ರೀ ಮಹಾರಾಜರ ಮುತ್ತಜ್ಜರು ಇವರು ಮಂಗಳವೀಡಿನಿಂದ ನಿಂಬರಗಿಗೆ ಬಂದು ಅಲ್ಲಿಯೇ ನಿರಂತರವಾಗಿ ನಿಂತುಬಿಟ್ಟರು. ಲಕ್ಷ್ಮಣಪ್ಪನವರಿಗೆ ಡೋಂಗರೆಪ್ಪ, ನಾಗಪ್ಪ ಹಾಗೂ ಧೋಂಡಪ್ಪ ಎಂಬ ಮೂವರು ಮಕ್ಕಳು. ಇವರಲ್ಲಿ ಇಬ್ಬರ ವಂಶಜರು ನಿಂಬರಗಿಯಲ್ಲಿ ಇನ್ನೂವರೆಗೆ ವಾಸಿಸಿರುವರು. ಇವರಲ್ಲಿಯ ಮೇಲ್ಕಾಣಿಸಿದ ನಾಗಪ್ಪನವರ ಮಕ್ಕಳಾದ ಭೀಮಣ್ಣನವರು ಶ್ರೀ ನಿಂಬರಗಿ ಮಹಾರಾಜರವರ ತಂದೆಯವರು ಶ್ರೀ ನಿಂಬರಗಿ ಮಹಾ ರಾಜರವರು ಹುಟ್ಟಿದುದು ಸೊನ್ನಲಾಪುರದಲ್ಲಿಯ ( ಸೊಲ್ಲಾಪುರ ) ತಮ್ಮ ತಾಯಿಯ ಮನೆಯಲ್ಲಿ. ಆದರೆ ಅವರು ಇಡೀ ಆಯುಷ್ಯವನ್ನು ಕಳೆದುದು ನಿಂಬರಗಿಯಲ್ಲಿ. ಶ್ರೀ ನಿಂಬರಗಿ ಮಹಾರಾಜರವರ ನಿಲುವು ಎತ್ತರವಾದುದೂ, ಶರೀರವು ಭವ್ಯವಾದುದೂ, ಪ್ರಕೃತಿಯು ತುಂಬ ಸಶಕ್ತವಾದುದೂ ಇತ್ತು. ಅವರ ವರ್ಣವು ಗೌರ, ಕಿವಿಗಳು ಅಗಲಾದವುಗಳು, ಬುದ್ಧಿಯು ಅತಿ ತೀಕ್ಷ ವಾದುದು. ಕೆಳಗೆ ಕಾಣಿಸಿದ ಡೊಳ್ಳಿನ ಪದದಲ್ಲಿಯ ಬಣ್ಣನೆಯು ಅವರ ಹೋಲಿಕೆಯನ್ನು ಬಹು ಅಂಶದಿಂದ ಅರಹುವದು, | ಪದ || ಹಾದಿಯ ಕೂಡಿ ಹೋಗು ಅಣ್ಣ ! ನಮ್ಮ ದೇವರ ಕಂಡರೆ ಬರಹೇಳೋ | ನಿಮ್ಮ ದೇವರು ಖನ ಗುರತಾ ನಮಗ ಹೇಳಲಿ ಬೇಕಲ್ಲಾ
ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೧
ಗೋಚರ