ಸೀಮಿತ ಧಾರ್ಮಿಕತೆಯನ್ನು ವಿಸ್ತಾರಗೊಳಿಸಿದ, ಉದಾರೀಕರಿಸಿದ ಒಂದು ಸಾಂಸ್ಕೃತಿಕ
ಪ್ರಕಾರವು ಯಕ್ಷಗಾನ. ಅದರ ಹುಟ್ಟಿನಲ್ಲೇ ಉದಾರೀಕರಣ, ಗೋಳೀಯಕರಣದ
ಕನಸುಗಳಿವೆ. ಈಗ ಬಂದಿರುವ ಗ್ಲೋಬಲೈಸೇಶನ್‌ನಿಂದ ದೊರಕುವ ವಿಚಾರ, 'ವಸ್ತು
ಸಾಮಗ್ರಿಗಳನ್ನು ಈ ಕಲೆಯ ಅಭಿವೃದ್ಧಿ ಗುಣವೃದ್ಧಿ ಶ್ರೇಯೋಭಿವೃದ್ಧಿಗಳಿಗೆ ಹೇಗೆ
ಬಳಸುತ್ತೇವೆ ಎಂಬುದು ನಮ್ಮ ಕಲಾವಿವೇಕಕ್ಕೆ ಸವಾಲು. ಹೊಸ ಅಲೆಗಳು ವಿಕೃತಿಗಳನ್ನುಂಟು
ಮಾಡಬಹುದು, ಸಂಸ್ಕೃತಿಯನ್ನು ನವೀಕರಿಸಿ, ಪುನಾರಚಿಸಿ ಉನ್ನತೀಕರಿಸಲೂ ಬಹುದು. ಆ
ನಿಟ್ಟಿನಲ್ಲಿ ನಾವು ಸ್ಪಂದಿಸುವ ಮಟ್ಟ, ರೀತಿಗಳ ಕುರಿತು ನಾವು ಯೋಚಿಸಬೇಕಾಗಿದೆ.
ಹೀಗೆ ಯಕ್ಷಗಾನದ ಇತಿಹಾಸವು ಸವಾಲುಗಳು, ಚಡಪಡಿಕೆಗಳು, ನಾವೀನ್ಯ ಯತ್ನಗಳ,
ಮತ್ತು ಅವುಗಳ ಪ್ರತಿಫಲನಗಳ ರೋಚಕ ಕಥನವಾಗಿದೆ.
ಪ್ರಶ್ನೆ : ಈಗಿನ ಕಲಾವಿದರಲ್ಲಿನ ಪ್ರೌಢಿಮೆಯ ಕೊರತೆಯೂ, ಯಕ್ಷಗಾನವು ಇಂದು ಜನಾಕರ್ಷಣೆ ಕಳೆದುಕೊಳ್ಳಲು ಒಂದು ಕಾರಣವಲ್ಲವೆ ? ಉತ್ತರ : ಸ್ವಲ್ಪ ಮಟ್ಟಿಗೆ ಹೌದು. ಆದರೆ, ಶ್ರೇಷ್ಠ ಕಲಾವಿದರೆಂಬವರು ಎಲ್ಲಾ ಕಾಲಗಳಲ್ಲೂ ಕೆಲವರೇ ಇರುತ್ತಾರೆ. ಅಲ್ಲದೆ, ಪ್ರೌಢಿಮೆ ಇಲ್ಲದೆ, ನಿಭಾಯಿಸಬಹುದಾದ ವಾತಾವರಣ, ಶೈಲಿ ರಕ್ಷಣೆಯ ಕಾಳಜಿಯ ಅಭಾವಗಳಿಂದ, ನೈಜ ಪ್ರೌಢಿಮೆಯ ಕೊರತೆ ಉಂಟಾಗಲು ಕಾರಣ. ಇದೊಂದು ವರ್ತುಲಾಕೃತಿಯ ಸಮಸ್ಯೆ. ಪ್ರತಿಭೆ ಸಾಮರ್ಥ್ಯಗಳಿರುವ ಕಲಾವಿದರು ಹಲವರು ಇದ್ದಾರೆ.
ಪ್ರಶ್ನೆ : ಕನ್ನಡ ನಾಡು ನುಡಿಸಿರಿಯ ಸಮ್ಮೇಳನದಲ್ಲಿ ನೀವು ಭಾಷಣದಲ್ಲಿ ಇಂಗ್ಲೀಷ್ ಶಬ್ದ, ವಾಕ್ಯ ಬಳಸಿದ್ದು ಸರಿಯೆ?
ಉತ್ತರ : ಗೋಷ್ಠಿ ಉಪನ್ಯಾಸಗಳಲ್ಲಿ ಇಂಗ್ಲೀಷಿನ ಬಳಕೆ ಕುರಿತು ವಿವಾದ ಅನಗತ್ಯವೆಂದು ನನ್ನ ಭಾವನೆ. ವಿಮರ್ಶೆಯು ಮನ ಮುಟ್ಟಲು ಕೆಲವೊಮ್ಮೆ ಪಾರಿಭಾಷಿಕ ಭಾಷಾ ಮಿಶ್ರಣ ಉಪಯುಕ್ತ. ಇಂಗ್ಲೀಷ್ ಕೂಡ ಕನ್ನಡ ಮನಸ್ಸನ್ನು ರೂಪಿಸಿದೆ.
ಪ್ರಶ್ನೆ : ಜನಪದ ರಂಗಭೂಮಿ ಒಳ-ಹೊರ ಸಮಾಜಪರ ವಿಚಾರಗಳನ್ನು ವಿವೇಚಿಸಲು ಕೋರಿಕೆ.
ಉತ್ತರ : ಅದೊಂದು ಪ್ರತ್ಯೇಕ, ವಿಸ್ತಾರವಾದ ವಿವೇಚನೆಯ ವಿಷಯ. ಯಕ್ಷಗಾನವು ಜಾತಿ, ಮತಗಳನ್ನು ಮೀರುತ್ತ, ವಿವಿಧ ಸ್ತರದ ಜನರನ್ನು ಕಲಾ ವ್ಯವಸಾಯದಲ್ಲಿ, ಚೌಕಿಯಲ್ಲಿ,