ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಶೇಷತಃ ಸದಾ ಸಕ್ರಿಯ ಸಹಕಾರ ಪ್ರೋತ್ಸಾಹಗಳನ್ನು ನೀಡುತ್ತಿರುವ ಹಿರಿಯ ಸಾಂಸ್ಕೃತಿಕ ನೇತಾರ ಪ್ರೊ. ಕು. ಶಿ. ಹರಿದಾಸ ಭಟ್, ಡಾ. ಬಿ. ಎ. ವಿವೇಕ ರೈ, ಮುಳಿಯ ಮಹಾಬಲ ಭಟ್, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಕೆ. ಚಿನ್ನಪ್ಪ ಗೌಡ ಮತ್ತು ಪುಸ್ತಕದ ಕರಡಚ್ಚನ್ನು ಮುತುವರ್ಜಿಯಿಂದ ಪರಿಶೀಲಿಸಿದ ಗೆಳೆಯ ಪ್ರೊ. ನಾಗರಾಜ ಜವಳಿ - ಇವರಿಗೆ ನನ್ನ ಕೃತಜ್ಞತೆಗಳು.

ನನ್ನ ಆಸಕ್ತಿಗಳಿಗೆ ಅನುವು ನೀಡುತ್ತ, ಪ್ರೋತ್ಸಾಹಿಸುತ್ತಿರುವ ನಮ್ಮ ಕಾಲೇಜು ಆಡಳಿತ ಮಂಡಳಿ, ಪ್ರಿನ್ಸಿಪಾಲರಾದ ಶ್ರೀಮತಿ ಇಂದಿರಾ ವರ್ಮಾ ಮತ್ತು ಸಹೋದ್ಯೋಗಿಗಳ ನಯ ಸಹಕಾರ ಸದಾ ಸ್ಮರಣೀಯ. .

ಗ್ರಂಥದ ಮುಖಪುಟದಲ್ಲಿ ನಾನು ಬಳಸಿರುವ ಒಂದು ತಾಳೆಮರವು ನಮ್ಮ ಕಾಲೇಜಿನ ಆವರಣದಲ್ಲಿರುವಂತಹುದು. ಕಳೆದ ಇಪ್ಪತೈದು ವರ್ಷ ಗಳಿಂದ ನಮ್ಮ ಕಾಲೇಜಿನ ಕ್ಯಾಂಪಸ್‌ ಸಂಪೂರ್ಣ ಬದಲಾಗಿದ್ದರೂ ಈ ವೃಕ್ಷ ಈ ಬದಲಾವಣೆಗಳ ಮಧ್ಯೆ ಜಿಗುಟುತನದಿಂದ ಬದುಕಿ ಬೆಳೆದಿದೆ. ಸಮಾಜ ಸಂಸ್ಕೃತಿಗಳು ವೇಗವಾಗಿ ಬದಲಾಗುತ್ತಿದ್ದರೂ, ತನ್ಮಧ್ಯೆ ಬದುಕಿ ಬೆಳೆಯು ತ್ತಿರುವ ಯಕ್ಷಗಾನದಂತಹ ಪ್ರಕಾರಗಳ ಸಂಕೇತವಾಗಿ ಈ ವೃಕ್ಷ ನನಗೆ ಕಂಡಿದೆ. ಅದಕ್ಕಾಗಿ ಅದರ ಚಿತ್ರವನ್ನು ಅಳವಡಿಸಿದ್ದೇನೆ.

ಈ ಗ್ರಂಥವನ್ನು ತಮ್ಮ ಸಂಸ್ಥೆಯ ಮೂಲಕ ಹೊರತರುತ್ತಿರುವ, ಸಾಹಿತ್ಯಕಾರ, ಪ್ರಕಾಶನಗಳ ಸಾಹಸಿಗಳಾದ ಶ್ರೀ ಬೋಳಂತಕೋಡಿ ಈಶ್ವರ ಭಟ್ಟ ಮತ್ತು ಬಳಗದವರ ಉಪಕಾರಕ್ಕೆ ತುಂಬ ಆಭಾರಿಯಾಗಿದ್ದೇನೆ.

೧೫-೨-೧೯೯೮
ಎಂ. ಪ್ರಭಾಕರ ಜೋಶಿ

ಬೆಸೆಂಟ್‌ ಪದವಿ ಪೂರ್ವ ಕಾಲೇಜು
ಮಂಗಳೂರು - ೫೭೫ ೦೦೩