ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ










ಪ್ರಾಯೋಗಿಕತೆ : ಹಲವು ಮುಖ


ರಂಗಪ್ರಯೋಗ - ಪ್ರಯೋಗ ರಂಗ


ಯಾವುದೇ ಒಂದು ಕಲೆಯಲ್ಲಿ, ಅದರಲ್ಲೂ ಪಾರಂಪರಿಕ ಕಲೆಯಲ್ಲಿ ಪ್ರಾಯೋಗಿಕತೆ ಎಂದರೆ ಏನು? ಆಧುನಿಕ ವಿಮರ್ಶ ವಿಧಾನದಲ್ಲಿ 'ಪ್ರಯೋಗ' ಎಂಬುದು ನವೀನವಿಧಾನ. 'ಎಕ್ಸ್‌ಪರಿಮೆಂಟಲ್' ಎಂಬ ಅರ್ಥದಲ್ಲಿ ಬಂದ ಪದವಾಗಿದೆ. ಕಲೆಯಲ್ಲಿ ಈಗಾಗಲೇ ಸ್ಥಾಪಿತವಾಗಿರುವ ವಿಧಾನಕ್ಕಿಂತ, ಎಂದರೆ ರೂಢವಾಗಿರುವ 'ಮಾರ್ಗ'ಕ್ಕಿಂತ ಭಿನ್ನವಾಗಿ ಅಭಿವ್ಯಕ್ತಿಸಲು ಯತ್ನಿಸುವ ವಿಧಾನವೇ ಪ್ರಯೋಗ. ಆದುದರಿಂದ ಪ್ರಯೋಗವೆಂಬುದು ಭಿನ್ನಮಾರ್ಗ. ಹೊಸ ದಾರಿ. ಆದರೆ ಅಡ್ಡದಾರಿಯಲ್ಲ. ಅದು ಕಲೆಯ ಕವಲು.
ಒಂದು ರೀತಿಯಲ್ಲಿ ನೋಡಿದರೆ 'ಪರಂಪರೆ ಮತ್ತು ನೂತನ 'ಪ್ರಯೋಗಗಳು ಒಂದರಲ್ಲೊಂದು ಬೆರೆತುಕೊಂಡಿರುತ್ತವೆ. ಕಲೆಯ ಇತಿಹಾಸದ ಆರಂಭದಲ್ಲಿದ್ದಂತೆ ಯಾವ ಕಲೆಯೂ ಇರುವುದಿಲ್ಲ. ಹಲವಾರು ನಾವೀನ್ಯಗಳು, ಸೇರ್ಪಡೆಗಳು ಕಲಾಶರೀರದಲ್ಲಿ ಏಕೀಭವಿಸುತ್ತ ಪರಂಪರೆ ಎಂಬ ಪ್ರವಾಹ ಸಿದ್ಧವಾಗುತ್ತದೆ. ಆದುದರಿಂದ 'ಪ್ರಯೋಗ'ಗಳ ಮೊತ್ತವೇ 'ಪರಂಪರೆ'ಯಾಗುತ್ತದೆ. ಕಲೆಯನ್ನು ಪುಷ್ಟಗೊಳಿಸುವ, ಅದರ ಮಿತಿಗಳನ್ನು ಮೀರುತ್ತ ನಾವೀನ್ಯ, ಸಶಕ್ತತೆಗಳನ್ನು ಸಾಧಿಸುವ, ವಸ್ತು-ವಿಧಾನ-ಆಶಯಗಳಲ್ಲಿ

ಅರ್ಥಪೂರ್ಣವಾದ ಭಿನ್ನತೆಯನ್ನು ಸಾಧಿಸುವ ಪ್ರಯತ್ನಗಳನ್ನು ಪ್ರಯೋಗಗಳೆನ್ನಬಹುದು.

• ಡಾ. ಎಂ. ಪ್ರಭಾಕರ ಜೋಶಿ