ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
121

ಒಂದು ಉದಾಹರಣೆ : 'ಮಹಾಕ್ಷತ್ರಿಯ' ಪ್ರಸಂಗದ ನಹುಷನ ಪಾತ್ರಕ್ಕೆ ಶೇಣಿಯವರ ಪೀಠಿಕೆ ; (ಪ್ರವೇಶದ ಸ್ವಗತ)
ಶಾಸ್ತ್ರಗಳೂ, ನಮ್ಮ ವಂಶಪರಂಪರೆಯೂ ತೋರಿಸಿದ ಮಾರ್ಗದಲ್ಲಿ ಇಷ್ಟು ಸಾಗಿದ್ದೇನೆ. ಮಾನವನು ದೇವತೆಯಾಗಬಹುದೆನ್ನುತ್ತದೆ ಈ ದಾರಿ. ದೇವನಾಗಬೇಕೆಂಬ ಆಸೆ ಇದೆ. ಅಲ್ಲಿಗೆ ಹೋದ ಮೇಲೆ ಆದರಿಂದಾಚೆಗೆ ಏನು ಎಂಬುದನ್ನು ನೋಡಬೇಕು ಎಂಬ ಆಸೆಯೂ ಇದೆ.
ಇದು ದೇವುಡು ಅವರ ಕಾದಂಬರಿ 'ಮಹಾಕ್ಷತ್ರಿಯ'ದ ನಹುಷನ ಜೀವನದ
ದೃಷ್ಟಿಯಾದ ಚಕ್ರವರ್ತಿ, ಇಂದ್ರ, ಅತೀಂದ್ರತ್ವದ ಬಯಕೆಗಳ ಸಾರ ಭೂತ
ಸಂಗ್ರಹ.
ಮೇಲೆ ಹೇಳಿದ ಹಂತಗಳಲ್ಲಿ ಇನ್ನಷ್ಟು ಒಳಬೇಧಗಳನ್ನು ಕಲ್ಪಿಸಬಹುದು. ಯಾವುದೇ ರೀತಿ, ಹಂತವಾದರೂ ಅದು ಪ್ರಸಂಗದ ಪದ್ಯಗಳಿಗೆ, ಅದರಲ್ಲಿರುವ ಶಬ್ದಗಳಿಗೆ, ಒಟ್ಟು ಪ್ರಸಂಗಕ್ಕೆ ನಿಷ್ಠವಾಗಿರಬೇಕು. ಅಂತೆಯೆ ಪದ್ಯದ ಚರಣಗಳ ಅನುಕ್ರಮ, ಸಂವಾದಗಳು, ಮುಂದಿನ ಪದ್ಯದ ಎತ್ತುಗಡೆ, ಸೂಕ್ತವಾದ ಭಾವ ಮತ್ತು ವಿಚಾರ, ಪಾತ್ರಾನುಗುಣವಾದ ಅರ್ಥೈಸುವಿಕೆ ಮುಂತಾದವುಗಳಿಂದ ಕೂಡಿರಬೇಕೆಂಬುದು ಗ್ರಾಹ್ಯ. ಅದು ಮೌಲಿಕ ನಿಯಮ. ಅದಿಲ್ಲದೆ, ಕೇವಲ ಅರ್ಥವು ಸಾಹಿತ್ಯಾತ್ಮಕವಾಗಿ ಸೊಗಸಾಗಿದ್ದರೂ ಅದು ಅರ್ಥಗಾರಿಕೆ ಎನಿಸದು.
ಪ್ರಸಂಗದ ಅರ್ಥ, ಪಾತ್ರದ ಅರ್ಥ
ಯಕ್ಷಗಾನದ ಅರ್ಥಗಾರಿಕೆಯೆಂಬುದು, ಪದ್ಯಗಳ ಅರ್ಥವಷ್ಟೆ ಆದರೆ ಸಾಲದು, ಅದು ಪ್ರಸಂಗದ ಅರ್ಥವೂ, ಪಾತ್ರದ ಅರ್ಥವೂ ಆಗಬೇಕಷ್ಟೆ?ಅಂದರೆ, ಪಾತ್ರಧಾರಿಯ ಮಾತು, ಆ ಸಂದರ್ಭದ ಪದ್ಯವನ್ನಷ್ಟ ಗಮನಿಸದೆ, ಪ್ರಸಂಗದ ಒಟ್ಟು ಸ್ವರೂಪ, ವಸ್ತು ಧ್ವನಿ, ಕಥೆಯ ದಾರಿ, ಪಾತ್ರದ ಸ್ಥಾನವನ್ನೂ, ನಡೆಗಳನ್ನೂ ಗಮನಿಸಬೇಕು.

ಒಂದೆರಡು ಉದಾಹರಣೆ ನೋಡೋಣ. ಅತಿಕಾಯ ಕಾಳಗದ ರಾವಣ, ಅತಿಕಾಯ ರಾವಣ ಸಂವಾದದಲ್ಲಿ ರಾಮನ ಪರವಾರ ಮಂಡನೆ, ಖಂಡನೆಗಳಿರಬೇಕು ಸರಿ. ಆದರೆ, ಒಂದು ಮಿತಿಯಲ್ಲಿರಬೇಕಾಗುತ್ತದೆ. ಕಾರಣ-ಅತಿಕಾಯನ ಜೀವನ ಮಾರ್ಗವೂ, ರಾವಣನದೂ ಅಂತತಃ ಒಂದೇ ಆತ್ಮನಿವೇದನೆ. ಮಾತ್ರವಲ್ಲ, ಅತಿಕಾಯನು ರಾವಣನನ್ನು ಅತಿಯಾಗಿ ಖಂಡಿಸಿದರೆ, ಅದು ತಂದೆ-ಮಗ ಸಂಬಂಧಕ್ಕೂ ಸರಿಯಲ್ಲ. ಅಷ್ಟೆ ಅಲ್ಲ, ರಾವಣನ ನಿರಾಕರಣೆಗೆ ಪ್ರತಿಯಾಗಿ, ಅಹುದು ಮತ್ತೇನಾರ ಚಿತ್ರದಲ್ಲಿ ಗ್ರಹಿಸಿಕೊಂಡಿಹುದನವರೆ

• ಡಾ. ಎಂ. ಪ್ರಭಾಕರ ಜೋಶಿ