ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪ / ವಾಗರ್ಥ
ಮಾತುಗಾರಿಕೆ ಸಾಧಿಸಿರುವ ಪ್ರೌಢತೆ, ನಯ-ನಾಜೂಕು, ರಂಜಕ ಶಕ್ತಿ, ಸಂಸ್ಕೃತಿ-ಸಂವಹನ- ಇವೆಲ್ಲ ಕನ್ನಡದ ಉತ್ಕೃಷ್ಟ ಸೃಜನಶೀಲ ಮಾದರಿ ಗಳಲ್ಲಿ ಗಣನೆಗೆ ಅರ್ಹವಾದದ್ದು. ತಾಳಮದ್ದಳೆ ಪ್ರದರ್ಶನವನ್ನು ಕಾಣ ದವನೊಬ್ಬ ಮೊದಲು ಪ್ರಸಂಗವನ್ನು ಓದಿ, ಆ ಬಳಿಕ ತಾಳಮದ್ದಳೆ ಯನ್ನು ಕೇಳಿದರೆ, ಅವನಿಗೆ ಪರಮಾಶ್ಚರ್ಯವಾಗದಿರದು! ಪ್ರಸಂಗದ ಪಠ್ಯ (Text) ತಾಳಮದ್ದಳೆಯ ಪ್ರದರ್ಶನ (Performance) ಆಗಿ ರೂಪುಗೊಳ್ಳುವ ಪ್ರಕ್ರಿಯೆ ತುಂಬ ಕುತೂಹಲಕರವಾಗಿದ್ದು, ಉಳಿದ ಪ್ರಕಾರಗಳಲ್ಲಿನ ಪಠ್ಯಪ್ರದರ್ಶನಗಳೊಳಗಿನ ಅವಸ್ಥಾಂತರ (Trans- formation)ಕ್ಕಿಂತ ತೀರ ಭಿನ್ನ ಮತ್ತು ವಿಸ್ತ್ರತವಾದದ್ದು. ಪಠ್ಯ ಪ್ರದರ್ಶನಗಳ ದೂರ, ಅತಿದೂರ ದಾರಿಕಾಣದಷ್ಟು, ಆದರೂ, ಅವುಗಳ ಸಂಬಂಧ 'ತದ್ದೂರೇ ತದಂತಿಕೇ' ಎಂಬಂತೆ ಸಂಘಟಿತವಾದುದು ಕೂಡ.

ಪ್ರಸಂಗದ ಹಾಡುಗಳ ಲಿಖಿತ ರೂಪವು.. ಗಾನರೂಪಕ್ಕೆ ಬರು ವಾಗಲೇ ಒಂದನೆಯ ರೂಪಾಂತರ ಜರುಗುತ್ತದೆ. ಅನಂತರ ಅರ್ಥ ಆರಂಭವಾಗುತ್ತದೆ. ಹೀಗೆ ಅರ್ಥ ಆರಂಭವಾಗುವ ಮೊದಲೇ ಹಾಡುವಿಕ (ಅರ್ಥಾತ್ ಭಾಗವತಿಕೆ, ಮದ್ದಳೆ, ಚಂಡೆ)ಯೇ ಪ್ರಸಂಗದ ಪದ್ಯಗಳಿಗೆ ಒಂದು ಅರ್ಥವನ್ನು ನೀಡಿ (rendering meaning) ಸಂವಾದಿಸುತ್ತದೆ. ಇದು ಹಾಡುವಿಕೆಯ ರಾಗ, ತಾಳ, ಭಾವದ ಒತ್ತು, ಹಿಮ್ಮೇಳದ ಬಳಕೆಯನ್ನು ಹೊಂದಿಕೊಂಡಿದೆ. ಅಂದರೆ ಇದು ಪ್ರೇಕ್ಷಕ ಮತ್ತು ಆ ಪಾತ್ರಧಾರಿಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುತ್ತದೆ. ಇದನ್ನು ಹೀಗೆ ತೋರಿಸಬಹುದು.


ಇಲ್ಲಿ ಪ್ರಸಂಗ ಒಂದು ಸರಳವಾದ ಆಯತ. ಇದು ಹಾಡುವಿಕೆಯಾಗಿ ಮಾರ್ಪಡುವಾಗ (ಅಂದರೆ ಮೇಲೆ ೧ರಿಂದ ೨ ಆಗುವಾಗ) ಪುನಃ ಬೇರೆ

ಬೇರೆ ಒಳರೂಪಗಳು (ವಿಕಲ್ಪಗಳು ಸಾಧ್ಯ ಅಂದರೆ