೪೪ / ವಾಗರ್ಥ
ಪ್ರವೃತ್ತಿಗಳ ರೂಪ, ಪ್ರಮಾಣ, ಪರಿಣಾಮಗಳ ಕುರಿತು ಉಪಯುಕ್ತ ಅಧ್ಯಯನ ಮಾಡಬಹುದು. ಸಾಹಿತ್ಯಕೃತಿಗಳಂತೆ, ಅರ್ಥಗಾರಿಕೆಗೆ ದಾಖಲೆಗಳ ನೆರವಿಲ್ಲದಿರುವುದರಿಂದ ಇದು ತುಂಬ ಕಷ್ಟದ ಕೆಲಸ.
ಯಾವುದೇ ಕಥೆಯಾಗಲಿ, ಐತಿಹ್ಯ ಪುರಾಣಾದಿ ಕಥಾನಕಗಳಾಗಲಿ, ಮೌಖಿಕ ಪರಂಪರೆಯಲ್ಲಿ ಕಾಲಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತ, ಕೊನೆಗೆ ಪ್ರದರ್ಶನದಿಂದ ಪ್ರದರ್ಶನಕ್ಕೂ ಬೇರೆ ಯಾಗುತ್ತ ಹೋಗುವುದು ಪ್ರಸಿದ್ಧವಷ್ಟೆ. ಇದರಲ್ಲಿ ಕಥೆಯ ವಿವರಗಳು, ಘಟನೆಗಳು, ಮೌಲ್ಯಾತ್ಮಕ ಅಂಶಗಳು, ಆಶಯಗಳು ಇವೆಲ್ಲ ಬದಲಾಗುತ್ತಿರುತ್ತವೆ. ಅದೇ ರೀತಿ ಒಂದು ಕಥೆಯೋ, ಕಾವ್ಯವೋ ಪಾಠಾಂತರಗಳನ್ನೂ, ಪ್ರಕ್ಷೇಪಗಳನ್ನೂ ಸೇರಿಸಿಕೊಳ್ಳುತ್ತ ಬೆಳೆಯುತ್ತದೆ. ಇದನ್ನೆ ಬೆಳೆಯುವ ಪುರಾಣಕಥಾ ಪರಿಕಲ್ಪನೆ (Growing myth Concept) ಎನ್ನುವರಂತೆ. ಈ ಪ್ರಕ್ರಿಯೆಯು, ಬೇರೆಯೇ ಒಂದು ರೀತಿ ಯಿಂದ ಯಕ್ಷಗಾನ ಆಟ, ತಾಳಮದ್ದಳೆಗಳಲ್ಲೂ ವಿಪುಲವಾಗಿ ಜರಗು ತ್ತಿರುತ್ತದೆ. ಬೇರೆಯೇ ರೀತಿಯಿಂದ ಎಂದರೆ, ಇಲ್ಲಿ ಕತೆ ಬಹಳ ಬದಲಾಗುವುದಿಲ್ಲ. ಕಾರಣ ಪ್ರದರ್ಶನಕ್ಕೆ ಆಧಾರವಾಗಿ ಪ್ರಸಂಗ ಕಾವ್ಯವಿದೆ. ಆದರೆ ಅದರ ಅರ್ಥಗಾರಿಕೆ ಬದಲಾಗಿ, ಅರ್ಥವೂ ಬದಲಾಗುತ್ತದೆ. ಕಥೆಯ ನಡೆ ಬದಲಾಗುವುದಿಲ್ಲ. ಇದೊಂದು ಬಗೆಯ 'ಬದಲಾಗದ', ದಾಟುವಿಕೆ' (transcending without deviation) ಎನ್ನಬಹುದು.
ಇದಕ್ಕೆ ಎರಡು ಉದಾಹರಣೆಗಳನ್ನು ನೋಡಬಹುದು. ರಾವಣ- ಲಕ್ಷ್ಮಣ ಸಂವಾದದಲ್ಲಿ, ಲಕ್ಷ್ಮಣ ಪಾತ್ರಧಾರಿ, ಪ್ರಸಂಗದಂತೆ ರಾವಣನ ಸೀತಾಪಹಾರವೆಂಬ ದುರಾಚಾರವನ್ನು ಖಂಡಿಸಿದಾಗ, ರಾವಣ ಪಾತ್ರಧಾರಿ ಹೇಳಿದ ಮಾತು, "ನಿನ್ನ ಅಣ್ಣನ ಹೆಂಡತಿಯನ್ನು ಅಪಹರಿಸಿದನೆಂದು ಆಕ್ಷೇಪಿಸುತ್ತೀಯಾ? ನೀನು ಹೆಂಡತಿಯನ್ನು ಕಾಡಿಗೆ ತರಲಿಲ್ಲವಲ್ಲಾ? ಬದುಕಿದೆ" ಎಂದು! 'ತಂದಿದ್ದರೆ ಇಬ್ಬರನ್ನೂ ಅಪಹರಿಸುತ್ತಿದ್ದೆ' ಎಂಬ ಅರ್ಥ. ಇದೊಂದು ಬಗೆಯ ಪಾತ್ರಚಿತ್ರಣ, ಇದರಲ್ಲಿ ರಾವಣನು ತನ್ನನ್ನು ಸಮರ್ಥಿಸಿಕೊಳ್ಳಲಿಲ್ಲ. ಬದಲಾಗಿ ದುಷ್ಟ ರಾಕ್ಷಸನಾಗಿಯೇ ಮಾತನಾಡಿದ. ಇದೂ ರಚನೆಯೇ. ರಾವಣನು ಇಂತಹ ಮಾತನ್ನು