ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆ : ಕೆಲವು ಗ್ರಹಿಕೆಗಳು / ೨೭

ಕೌರವನು ಸಿಂಹಾಸನ ಉರುಳುವ ಭಾಗ ಇದ್ದರೆ ಮತ್ತು ಬಿಟ್ಟುಬಿಟ್ಟರೆ- ಪ್ರಸಂಗ ನೀಡುವ ಅರ್ಥವೇ ಬೇರೆ ಬೇರೆ ಆಗುತ್ತದೆ. ಹೀಗೆ ಪದ್ಯಗಳ ಆಯ್ಕೆ, ಸಂಪಾದಿತ ಪ್ರತಿ ಪ್ರದರ್ಶನದ ಅರ್ಥವಂತಿಕೆಯನ್ನು ಕೆಲವು ಮಟ್ಟಿಗೆ ನಿರ್ಧರಿಸುತ್ತದೆ. ಈ ಅರ್ಥದಲ್ಲಿ ಪ್ರಸಂಗವೆಂಬ ಪಠ್ಯವೂ ಕೂಡ ಚಲನಶೀಲವೇ, ಮತ್ತು ಇಲ್ಲಿ ಪ್ರಯೋಗ ನಾವೀನ್ಯಕ್ಕೆ ಅವಕಾಶ ವಿದೆ. ಭೀಷ್ಮವಿಜಯ ಪ್ರಸಂಗದಲ್ಲಿ ಭೀಷ್ಮ-ಅಂಬೆ, ಸಾಲ್ವ-ಅಂಬೆ, ಪುನಃ ಭೀಷ್ಮ-ಅಂಬೆ ಸಂವಾದಗಳನ್ನಷ್ಟೆ ಆಯ್ದುಕೊಂಡರೆ ಆ ಪ್ರಸಂಗವು 'ಭೀಷ್ಮವಿಜಯ'ದ ಬದಲು ಅಂಬೆಯ ದುರಂತದ ಕಥೆಯಾಗುತ್ತದೆ. ನಾವು ಸಾಂಪ್ರದಾಯಿಕವೆನ್ನುವ ಕಥಾನಕಗಳಲ್ಲೆ ಇಂತಹ ಹಲವು ಸಾಧ್ಯತೆ ಗಳನ್ನು ಪರಿಭಾವಿಸಲು ಅವಕಾಶವಿದೆ. ಈ ಒಂದು ವಿಚಾರದ ಮಟ್ಟದಲ್ಲಿ ನಾವು ಕಲೆಯ ಪ್ರಸ್ತುತತೆಯ ರೆಲವನ್ಸ್ ನ ಪ್ರಶ್ನೆಯನ್ನು ಎತ್ತಿಕೊಳ್ಳಬಹುದು.

ಹಲವು ಪಾರಂಪರಿಕ ಕಲೆಗಳು ಹೇಗೋ, ಹಾಗೆಯೇ ತಾಳ ಮದ್ದಳೆಯೂ, ಕಾಲಕ್ಕೆ ಪ್ರಸ್ತುತವಾಗುವ ಸವಾಲನ್ನು ಇದಿರಿಸಲೇ ಬೇಕಾಗಿದೆ. "ಪುರಾಣವೆಂದರೆ ಪುರಾಣವೇ. ಅದನ್ನು ಆಧರಿಸಿ ಬರದ ಪ್ರಸಂಗದ ಆಶಯವನ್ನು ಅರ್ಥಧಾರಿ ಅನುಸರಿಸಿ, ರಸಾತ್ಮಕವಾಗಿ ಮಂಡಿಸಿದರೆ ಸಾಕು. ಆ ಕಲೆಯ ಸ್ವರೂಪವೇ ಹಾಗೆ" ಎಂಬ ಒಂದು ವಾದಕ್ಕೂ ಅವಕಾಶವಿದೆ ನಿಜ. ಆದರೆ, ಸಂಗೀತದಂತಹ, ನೃತ್ಯದಂತಹ ಸ್ವರೂಪ ಪ್ರಧಾನ ಮತ್ತು ರಸನಿಷ್ಠ ಕಲೆಗಳ ಸಂದರ್ಭದಲ್ಲಿ ಈ ವಾದ `ಸಂಗತವಾಗುವಷ್ಟು ತಾಳಮದ್ದಳೆಯ ಸಂದರ್ಭ ಸರಳವಾಗಿಲ್ಲ. ಇಲ್ಲಿ ಕಲಾವಿದನ ವಾಕ್‌ಸಾಹಿತ್ಯ ಸ್ವತಂತ್ರವೇ ಪ್ರಸಂಗದ ಪದ್ಯಗಳ ಅನುವಾದಕನೊ, ಪ್ರಕಾಶಕನೊ ಆಗಿ ಅರ್ಥದಾರಿ ಕೆಲಸ ಮಾಡಿದರೆ ಸಾಲದು. ಅಷ್ಟನ್ನೇ ಮಾಡಿದರೆ ಅವನು ಕುಶಲಗಾರ (Craftsman) ಆದಾನೇ. ಹೊರತು, ಕಲಾವಿದನಾಗಲಾರನೇನೋ.ಒಂದು ಪಕ್ಷ ಪ್ರಸಂಗದ, ಕಾವ್ಯದ ಆಶಯವನ್ನು ಮಾತ್ರ ಅರ್ಥದಲ್ಲಿ ಹೇಳುತ್ತೇನೆ ಎಂದರೂ, ಮಾತುಗಾರನ ಮಾತಿನಲ್ಲಿ ಅವನ ಅಭ್ಯಾಸ, ಸಂಸ್ಕಾರ, ಕಾಲ, ಸ್ವಂತ ದೃಷ್ಟಿಗಳ ಪ್ರಭಾವ ಬಿದ್ದೇ ಬೀಳುತ್ತದೆ. ಏಕೆಂದರೆ, ಪ್ರಸಂಗದ ಪದ್ಯ ಮತ್ತು ಕಲಾವಿದನ ಮನಸ್ಸುಗಳ, ಮುಖಾಮುಖಿ ಯಿಂದಲೇ ಅರ್ಥಗಾರಿಕೆ ಸೃಷ್ಟಿಯಾಗುವುದು... ಹೊರಗಿನ ಪ್ರಸಂಗ,