ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಆಕರ-ಪಠ್ಯ - ನಿರ್ವಹಣೆ / ೭೭

ಇಲ್ಲಿ ಆಯ್ಕೆಯ ಪ್ರಶ್ನೆ ಬರುತ್ತದೆ. ಸಹಪಾತ್ರದ ಯಾವ ಮಾತನ್ನು, ಯಾವ ಮುಖವನ್ನು ಪ್ರತಿಕ್ರಿಯೆಗಾಗಿ ಆರಿಸಿಕೊಳ್ಳಬೇಕು ಎಂಬುದು ಒಬ್ಬೊಬ್ಬ ಕಲಾವಿದನ ದೃಷ್ಟಿಯನ್ನೆ ಅವಲಂಬಿಸಿದೆ. ಪ್ರಶ್ನೆಯೊಂದಕ್ಕೆ ಉತ್ತರ ಕೊಡುವುದು ಹೇಗೆ ಪ್ರತಿಕ್ರಿಯೆಯೋ ಉತ್ತರ ಕೊಡದಿರುವುದೂ ಒಂದು ಪ್ರತಿಕ್ರಿಯೆ ಆಗಬಹುದು. ಒಂದು ಪ್ರತಿನಾಯಕ ಅಥವಾ ದುಷ್ಟ ಪಾತ್ರವು (ಉದಾ: ನರಕಾಸುರ, ರಾವಣ, ದುರ್ಯೋಧನ) ಮಂಡಿಸುವ ಎಲ್ಲ ಪ್ರಶ್ನೆ, ವಾದಗಳಿಗೆ ನಾಯಕ ಅಥವಾ ಶಿಷ್ಟ ಪಾತ್ರವು (ಉದಾ: ಕೃಷ್ಣ, ರಾಮ) ಉತ್ತರ ಅಥವಾ ಖಂಡನೆ ಹೇಳುತ್ತ ಹೋಗಲೇ ಬೇಕೆಂದೂ ಇಲ್ಲ. ಅಮುಖ್ಯ ಅಥವಾ ಅಪ್ರಸ್ತುತ ಎನಿಸುವ ಪ್ರಶ್ನೆ ಗಳನ್ನು, ಕಡೆಗಣಿಸುವುದು ಒಂದು ಬಗೆಯ ಆಯ್ಕೆಯ ಪರಿಣಾಮ. ಅದರಲ್ಲಿ ಅರ್ಥಗಾರಿಕೆಯ ಪಠ್ಯವು ಸಾಗಬೇಕಾದ ರೀತಿಯ ಬಗೆಗೆ ಕಲಾವಿದನ ಉದ್ದೇಶ ಕೆಲಸ ಮಾಡುತ್ತದೆ.

ಇದೇ ಮಾತನ್ನು ಹಿಮ್ಮೇಳದ ಪ್ರೇರಣೆಯ ಕುರಿತೂ ಅಳವಡಿಸ ಬಹುದು. ಸಮರ್ಥನಾದ ಭಾಗವತನು, ಪಾತ್ರಧಾರಿಯ ಮಾತಿನ ಮಧ್ಯೆ, ಪೂರಕವಾಗಿ ನೆನಪು, ಸೂಚನೆ, ಪ್ರಶ್ನೆಗಳ ಮೂಲಕ ಪಾತ್ರದ ಮಾತಿಗೆ ಚಾಲನೆ ಕೊಡುವುದುಂಟು. ಆಗ ಭಾಗವತನು ಪ್ರಸ್ತಾಪಿಸುವ ಘಟನೆ, ವಿಚಾರಗಳು ಬೇರೆ ಬೇರೆ ಆಕರಗಳಿಂದ ಬಂದಿರಬಹುದು. ಅದನ್ನು ತನ್ನ ಪಾತ್ರನಿರ್ಮಾಣದ ಶಿಲ್ಪಕ್ಕೆ ಹೊಂದುವ ಹಾಗೆ ಬಳಸಿ, ಬೆಳೆಸುವಲ್ಲಿ ಪಾತ್ರಧಾರಿಯು ಎಚ್ಚರದಿಂದಿರಬೇಕಾಗುತ್ತದೆ. ಕುಮಾರವ್ಯಾಸ ಭಾರತ ವನ್ನು ಆಧರಿಸಿ ಪಾತ್ರಧಾರಿಯು ಮಾತಾಡುತ್ತಿದ್ದರೆ, ಭಾಗವತನು ಪಂಪ ನಿಂದ, ವ್ಯಾಸನಿಂದ ಅಥವಾ ಬೇರಾವುದೂ ಮೂಲವಾದ ಒಂದು ಅಂಶವನ್ನು ಸೂಚಿಸಿದರೆ, ಅದನ್ನು ತಟ್ಟನೆ ಸಮನ್ವಯ ಮಾಡುವ ಕೌಶಲವೂ, ತಂತ್ರವೂ ಮುಖ್ಯವಾಗುತ್ತವೆ.

ಅರ್ಥಗಾರಿಕೆಯ ಸೃಷ್ಟಿಗೆ ಸಾಮಗ್ರಿ ಎಂದರೆ ಮುಖ್ಯವಾಗಿ ಅಂದಂದಿನ ಪ್ರದರ್ಶನದ ಆಧಾರದ 'ಪ್ರಸಂಗ'ವೆಂಬ ಕಾವ್ಯ. ಅದರ ಹಿಂದೆ ಇರುವ ಮೂಲಗಳು ಎಂದರೆ ಸಂಸ್ಕೃತ, ಕನ್ನಡ ಕಾವ್ಯಗಳ ಪರಂಪರೆ, ಜತೆಗೆ ಆತನ ಅಧ್ಯಯನ ಸಾಮಗ್ರಿ ಮತ್ತು ಸಂದರ್ಭ, ಕಲಾಪರಿಸರದಲ್ಲಿ ಅವನಿಗೊದಗುವ ವಿಷಯಗಳು.. ಇವನ್ನು ಪ್ರಸಂಗ,